ಕರ್ತವ್ಯನಿರತ ಪೇದೆಯ ಕಪಾಳಕ್ಕೆ ಬಾರಿಸಿದ ಬಿಜೆಪಿ ಸಂಸದೆ! ಪೊಲೀಸ್​​ಠಾಣೆ ಮೆಟ್ಟಿಲೇರಿದ ಪ್ರಕರಣ! FIR ದಾಖಲು!!

1067
9900071610

ಸಾಮಾಜಿಕ ಇತಿಮಿತಿಯಲ್ಲಿ ವರ್ತಿಸುವಂತೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಸದರಿಗೆ ಕಿವಿಮಾತು ಹೇಳಿದ ಬೆನ್ನಲ್ಲೇ, ಬಿಜೆಪಿ ಸಂಸದೆಯೊಬ್ಬರು ಹದ್ದುಮೀರಿ ವರ್ತಿಸಿ ಸುದ್ದಿಯಾಗಿದ್ದಾರೆ. ಹೌದು ಸಂಸದೆಯೊಬ್ಬರು ಬೆಂಗಾವಲು ಪಡೆಯ ಪೊಲೀಸ್​ ಪೇದೆಯೊಬ್ಬನನ್ನು ಥಳಿಸಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ad

ಉತ್ತರ ಪ್ರದೇಶದ ಲಕೀಮ್ ಪುರ ಜಿಲ್ಲೆಯ ಪೊಲೀಸ್ ಪೇದೆಯೊಬ್ಬರು ಸಂಸದೆ ರೇಖಾ ವರ್ಮ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮೊಹಮದಿ ಕೋಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.


ಶಾಮ್​ಸಿಂಗ್​​ ಎಂಬ ಪೇದೆಯೇ ದೂರು ನೀಡಿದವರು. ಶಾಮ್ ಸಿಂಗ್, ರೇಖಾ ವರ್ಮಾ ಅವರ ಬೆಂಗಾವಲು ಪಡೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕ ಸಮಾರಂಭದ ವೇಳೆ ಇದ್ದಕ್ಕಿದ್ದಂತೆ ಪೇದೆ ಮೇಲೆ ಸಿಟ್ಟಾದ ರೇಖಾ ವರ್ಮಾ ಎಲ್ಲರ ಎದುರೇ ಅವರ ಮೇಲೆ ಹಲ್ಲೆ ಮಾಡಿದ್ದಾರೆ.


ಇದರಿಂದ ಅವಮಾನಗೊಂಡಿರುವ ಪೊಲೀಸ್ ಪೇದೆ ಶಾಮಸಿಂಗ್​, ನನಗೆ ಕಾರಣವಿಲ್ಲದೇ ಸಂಸದೆಯವರು ಥಳಿಸಿದ್ದಾರೆ. ಸಮವಸ್ತ್ರದಲ್ಲಿರುವಾಗಲೇ ಅವಮಾನಕರವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ನ್ಯಾಯಕ್ಕಾಗಿ ತಾವು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ನ್ಯಾಯ ಸಿಗುವ ವಿಶ್ವಾಸವಿದೆ ಎಂದಿದ್ದಾರೆ.

Sponsored :


9900071610