ಬೆಂಗಳೂರು ಒನ್ ನಲ್ಲೇ ಸಿಗಲಿದೆ ಅಗ್ರಿಮೆಂಟ್- ಲೀಗಲ್ ಡೆಸ್ಕ್ ಡಾಟ್ ಕಾಮ್ ಹೊಸ ಪ್ರಯತ್ನ

298

ಇನ್ಮುಂದೇ ನೀವು ನಿಮ್ಮ ಮನೆ ಬಾಡಿಗೆ ಕರಾರು ಪತ್ರ( ಅಗ್ರಿಮೆಂಟ್​​ )ಗಾಗಿ ಅಲೆದಾಡಬೇಕಿಲ್ಲ. ಅದು ಕೂಡ ಬೇರೆಲ್ಲ ಸೇವೆಗಳ ಜೊತೆಗೆ ಬೆಂಗಳೂರು ಒನ್​ನಲ್ಲೇ ದೊರೆಯಲಿದೆ. ಬೆಂಗಳೂರು ಮೂಲದ ಕಾನೂನು ತಂತ್ರಜ್ಞಾನ ಕಂಪನಿ ಲೀಗಲ್ ಡೆಸ್ಕ್​ .ಕಾಂ ಬೆಂಗಳೂರು ಒನ್​ ಸಹಯೋಗದೊಂದಿಗೆ ಇಂತಹದೊಂದು ಬಾಡಿಗೆ ಒಪ್ಪಂದ ಪತ್ರ ಒದಗಿಸುವ ಸೇವೆ ಆರಂಭಿಸಿದೆ.

 

ad

ಇತ್ತೀಚಿಗೆ ಈ ಸೇವೆ ಮಲ್ಲೇಶ್ವರಂ ಎಮ್​ಎಲ್​​ಎ ಅಶ್ವತ್ಥನಾರಾಯಣ ಹಾಗೂ ಚಿತ್ರನಟ ದಿಗಂತ ಚಾಲನೆ ನೀಡಿದರು. ಈ ಸೌಲಭ್ಯವನ್ನು ಪಡೆಯಲು ನೀವು ಬೆಂಗಳೂರು ಒನ್​​ಗೆ ಭೇಟಿ ನೀಡಿ ನಿಗದಿತ ಮೊತ್ತದ ಹಣ ಪಾವತಿಸಿ ಅಗ್ರಿಮೆಂಟ್​​ಗೆ ಅಗತ್ಯವಿರುವ ವಿವರ ನೀಡಿ ಯಾವ ವಿಳಾಸಕ್ಕೆ ಅಗ್ರಿಮೆಂಟ್​ ಬೇಕು ಎಂಬ ಮಾಹಿತಿ ಒದಗಿಸಿದ್ರೆ ಈ ಲೀಗಲ್​ ಡೆಸ್ಕ್​ ಈ ಅಗ್ರಿಮೆಂಟ್​ನ್ನು ನಿಮ್ಮ ಮನೆಗೆ ತಲುಪಿಸುತ್ತದೆ.
ಇನ್ನು ಈ ಸೇವೆ ಆರಂಭಿಸಿ ಮಾತನಾಡಿದ ಶಾಸಕ ಡಾ.ಸಿ.ಎನ್​. ಅಶ್ವತ್ಥ ನಾರಾಯಣ. ಬೆಂಗಳೂರು ಒನ್​ನಲ್ಲಿ ಈ ಸೌಲಭ್ಯ ಲಭ್ಯವಾಗಿರೋದರಿಂದ ಸಮುದಾಯದ ಎಲ್ಲ ವರ್ಗದ ನಾಗರಿಕರಿಗೆ ಸೂಕ್ತ ರೀತಿಯಲ್ಲಿ ಸಿದ್ಧಪಡಿಸಲಾದ ಬಾರಿಗೆ ಕರಾರು ಪತ್ರ ಸಿಗುವಂತಾಗಿದ್ದು, ಇದು ಎಲ್ಲೆಡೆಯೂ ವಿಸ್ತರಣೆಯಾಗಬೇಕು ಎಂದರು.

ಇನ್ನು ಆರಂಭದ ದಿನಗಳಲ್ಲಿ ಲೀಗಲ್​ ಡಾಟ್​ ಕಾಮ್​, ಆಧಾರ್ ಆಧಾರಿತ ಇ -ಸೈನ್​,ಉಯಿಲು,ಪವರ್ ಆಪ್​ ಅಟಾರ್ನಿ, ಹೆಸರು ಬದಲಾವಣೆ ಸೇರಿದಂತೆ ಹಲವು ಸೌಲಭ್ಯಗಳು ಲಭ್ಯವಾಗಲಿದ್ದು, ಮುಂದಿನ ದಿನದಲ್ಲಿ ಇನ್ನಷ್ಟು ಹೆಚ್ಚಿನ ಕಾನೂನು ಸೇವೆಗಳನ್ನು ತಜ್ಞರನ್ನು ಒಳಗೊಂಡ ಲೀಗಲ್ ಡಾಟ್​.ಕಾಮ್​​ ಒದಗಿಸಲಿದೆ. ದಾಖಲೆಗಳನ್ನು ಡಿಜೀಟಲಿಕರಣಗೊಳಿಸುವುದು ಈ ವೇದಿಕೆಯ ಉದ್ದೇಶವಾಗಿದೆ. ಹೆಚ್ಚಿನ ಮಾಹಿತಿಗೆ LeaglDesk.com ಸಂಪರ್ಕಿಸಬಹುದಾಗಿದೆ.

Sponsored :

Related Articles