ಸಂಜೆ 6 ಗಂಟೆಯೊಳಗೆ ರಾಜೀನಾಮೆ ಇತ್ಯರ್ಥವಾಗಬೇಕು!ಅತೃಪ್ತ MLA ಗಳು ಸ್ಪೀಕರ್​ ಮುಂದೇ ಹಾಜರಾಗಬೇಕು! ಸುಪ್ರೀಂ ಮಹತ್ವದ ಸೂಚನೆ !!

513

ಸುಪ್ರೀಂ ಕೋರ್ಟ್ ಅಂಗಳ ತಲುಪಿದ್ದ ಅತೃಪ್ತರ ಬೇಡಿಕೆ ವಿಚಾರದಲ್ಲಿ ಸ್ಪೀಕರ್​ ರಮೇಶ್​​ ಕುಮಾರ್ ಸುಪ್ರೀಂ ಕೋರ್ಟ್​ ಸಖತ್ ಶಾಕ್ ನೀಡಿದ್ದು, ಅತೃಪ್ತರ ರಾಜೀನಾಮೆ ವಿಚಾರದಲ್ಲಿ ಸಂಜೆಯೊಳಗೆ ನಿರ್ಧಾರ ಕೈಗೊಳ್ಳುವಂತೆ ಸ್ಪೀಕರ್​​ ಗೆ ಸುಪ್ರೀಂ ಸೂಚನೆ ನೀಡಿದೆ. ಅಷ್ಟೇ ಅಲ್ಲ ಅತೃಪ್ತರು ಸಂಜೆ 6 ಗಂಟೆಯೊಳಗೆ ಸ್ಪೀಕರ್ ಕಚೇರಿಗೆ ಹಾಜರಾಗುವಂತೆ ಸೂಚಿಸಿದೆ.


ಕಳೆದ ಕೆಲ ದಿನಗಳ ಹಿಂದೆ ರಾಜೀನಾಮೆ ನೀಡಿದ 10ಕ್ಕೂ ಹೆಚ್ಚು ಅತೃಪ್ತ ಶಾಸಕರು, ತಮ್ಮ ರಾಜೀನಾಮೆ ಅಂಗೀಕರಿಸುವಲ್ಲಿ ಸ್ಪೀಕರ್ ಅನಗತ್ಯವಾಗಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ad

ಇಂದು ವಿಚಾರಣೆ ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್​ನಲ್ಲಿ ಸಿಜೆಐ ರಂಜನ್ ಗೊಗೊಯ್ ಪೀಠ ಅರ್ಜಿ ವಿಚಾರಣೆ ನಡೆಸಿತ್ತು. ಅತೃಪ್ತರ ಪರ ಮಾಜಿ ಅಡ್ವೊಕೇಟ್ ಜನರಲ್ ಮುಕುಲ್ ರೋಹ್ಟಗಿ, ದೋಸ್ತಿ ಪರ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದರು.

ಸ್ಪೀಕರ್ ಯಾವ ನಿರ್ಧಾರ ಕೈಗೊಂಡಿದ್ದಾರೆ ಎಂಬುದನ್ನು ನಾಳೆಯೊಳಗೆ ಸುಪ್ರೀಂ ಕೋರ್ಟ್​ಗೆ ತಿಳಿಸುವಂತೆ ನ್ಯಾಯಾಲಯ ಸೂಚಿಸಿದೆ. ಸುಪ್ರೀಂ ಆದೇಶದಿಂದ ಶಾಸಕರುಗಳು ಆತಂಕಕ್ಕೊಳಗಾಗಿದ್ದು, ಬೆಂಗಳೂರಿನತ್ತ ಧಾವಿಸಿದ್ದಾರೆ.

Sponsored :

Related Articles