ವಿಭಿನ್ನ ಟೈಟಲ್ ಜೊತೆ ತೆರೆಗೆ ಬರಲಿದ್ದಾರೆ ಬೆಲ್ ಬಾಟಂ ಹೀರೋ!!

606

ಸ್ಯಾಂಡಲ್ ವುಡ್ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಹುಟ್ಟುಹಬ್ಬದ ದಿನ ಮುಂದಿನ ನಿರ್ದೇಶನದ ಚಿತ್ರದ ಟೈಟಲ್ ನನ್ನು ಬಹಿರಂಗ ಪಡೆಸಿದ್ದಾರೆ.

ad

ಹೌದು ಕಿರಿಕ್ ಪಾರ್ಟಿ ಚಿತ್ರವನ್ನು ನಿರ್ದೇಶಿಸುವ ಮೂಲಕ ಚಂದನವನದಲ್ಲಿಯೆ ಹೊಸ ಸಂಚಲನವನ್ನು ಸೃಷ್ಠಿಸಿದ ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಮಾತ್ರವಲ್ಲದೆ ಇತ್ತೀಚೆಗೆ ಬೆಲ್ ಬಾಟಂ ಎಂಬ ಚಿತ್ರದಲ್ಲಿ ಅಭಿನಯಿಸಿ ನಟನೆಯಲ್ಲಿಯೂ ಜಯ ಸಾಧಿಸಿದ್ದರು.

ಇಂದು (ಜುಲೈ 7) ರಿಷಬ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಇದೇ ದಿನದಂದು ವಿಶೇಷವಾಗಿ ತಮ್ಮ ಮುಂದಿನ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದು, ಚಿತ್ರಕ್ಕೆ ‘ರುದ್ರಪ್ರಯಾಗ’ ಎಂಬ ಹೆಸರನ್ನು ಇಟ್ಟಿದ್ದಾರೆ. ಇದೊಂದು ಭಾರತದ ಉತ್ತರಾಖಂಡ ರಾಜ್ಯದ ಒಂದು ಜಿಲ್ಲಾ ಕೇಂದ್ರವಾಗಿದ್ದು, ಅಲಕನಂದಾ ಹಾಗೂ ಮಂದಾಕಿನಿ ನದಿಗಳ ಸಂಗಮಸ್ಥಾನವಾಗಿದೆ. ರುದ್ರಪ್ರಯಾಗವು ಹಿಮಾಲಯದ ಪವಿತ್ರನದಿಗಳ 5 ಸಂಗಮಕ್ಷೇತ್ರಗಳ ಪೈಕಿ ಒಂದು. ಈ ಹೆಸರನ್ನು ಸಿನಿಮಾ ಇಟ್ಟಿದ್ದು, ಪ್ರೇಕ್ಷಕರಿಗೆ ಟೈಟಲ್ ವಿಶೇಷ ಅನಿಸುವುದರ ಜೊತೆಗೆ ಬಹಳ ಕುತೂಹಲ ಕೆರಳಿಸಿದೆ.

ಸಿನಿಮಾದ ಪೋಸ್ಟರ್ ನಲ್ಲಿ ಚಿರತೆ, ಕಾಡು, ನದಿ ಇದ್ದು, ಜೊತೆಗೆ ನಗರ, ರಾಣಿ ಚೆನ್ನಮ್ಮ ಪ್ರತಿಮೆ, ವಿಧಾನ ಸೌಧವೂ ಇದೆ. ಹೀಗಾಗಿ ಪೋಸ್ಟರ್ ಮೂಲವೇ ಶೆಟ್ರ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದಂತಿದೆ.

ಈ ಹಿಂದೆ ಪೂರ್ಣಚಂದ್ರ ತೇಜಸ್ವಿಯವರು ರುದ್ರಪ್ರಯಾಗದ ಭಯಾನಕ ನರಭಕ್ಷಕ’ ಎಂಬ ಹೆಸರಿನಲ್ಲಿ ಪುಸ್ತಕ ಬರೆದಿದ್ದರು. ಈ ಕಥೆಯನ್ನೇ ಆಧಾರವಾಗಿಟ್ಟುಕೊಂಡು ರಿಷಬ್ ಸಿನಿಮಾ ಮಾಡುತ್ತಿದ್ದಾರ ಎಂಬ ಕುತೂಹಲವಿದೆ. ಆದರೆ ಪೋಸ್ಟರ್ ನಲ್ಲಿ ಸ್ವಷ್ಟವಾಗಿ ಸಿನಿಮಾದ ಕಥೆ ಮತ್ತು ನಿರ್ದೇಶನವನ್ನು ರಿಷಬ್ ಮಾಡುತ್ತಿದ್ದಾರೆ ಎಂದಿದೆ. ಅಲ್ಲದೆ ಈ ಚಿತ್ರ ಜಯಣ್ಣ ಹಾಗೂ ಭೋಗೆಂದ್ರ ನಿರ್ಮಾಣದಲ್ಲಿ ತೆರೆಗೆ ಬರಲಿದೆ.

Sponsored :

Related Articles