ನಿರಾಶ್ರಿತರ ನೆರವಿಗೆ ಧಾವಿಸಿದ ಬಾಲಿವುಡ್ ಕ್ಯೂಟ್ ಪೇರ್! ಸಿಎಂ ಪರಿಹಾರ ನಿಧಿಗೆ 25 ಲಕ್ಷ ದಾನ!!

897
9900071610

ರಾಜ್ಯದಲ್ಲಿ ವರುಣನ ಆರ್ಭಟದಿಂದ ಜನರ ಬದುಕು ಮೂರಾಬಟ್ಟೆಯಾಗಿದೆ. ಭಾರಿ ಮಳೆಯಿಂದಾಗಿ ಜನರ ಬದುಕು ದುಸ್ತಿತಿಯಾಗಿದ್ದು ನಿರಾಶ್ರಿತರ ನೆರವಿಗೆ ಸ್ಯಾಂಡಲ್ ವುಡ್. ಬಾಲಿವುಡ್. ಟಾಲಿವುಡ್ ಸೇರಿದಂತೆ ಸಿನಿತಾರೆಗಳು ಧಾವಿಸುತ್ತಿದ್ದಾರೆ. ಕರ್ನಾಟಕದಲ್ಲಿ ಮಾತ್ರವಲ್ಲ ಮಹಾರಾಷ್ಟ್ರದಲ್ಲೂ ಮಳೆ ಭಾರಿ ಅನಾಹುತವನ್ನೇ ಸೃಷ್ಟಿಸಿದ್ದು, ಮಳೆಯಲ್ಲಿ ಮುಳುಗಿದ ಮಹಾರಾಷ್ಟ್ರಕ್ಕೆ  ಬಾಲಿವುಡ್ ಕ್ಯೂಟ್ ಪೇರ್ 25 ಲಕ್ಷ ನೀಡಿ ಉದಾರತೆ ಮೆರೆದಿದ್ದಾರೆ.

ad

 

ಬಹುಭಾಷಾ ನಟಿ ಜೆನಿಲಿಯಾ ಡಿಸೋಜಾ. ಪತಿ ನಟ ರಿತೇಶ್ ದಂಪತಿ ನಿರಾಶ್ರಿತರ ನೆರವಿಗೆ ಧಾವಿಸಿದ್ದು, ಮಹಾರಾಷ್ಟ್ರದಲ್ಲಿ ಭೀಕರ ಪ್ರವಾಹದಿಂದ ನಿರಾಶ್ರಿತರಾಗಿರುವವರಿಗೆ ಸಹಾಯವಾಗಲೆಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ರವರನ್ನ ಭೇಟಿ ಮಾಡಿ 25 ಲಕ್ಷ ರೂ ಚೆಕ್ ನೀಡಿ ಹೃದಯ ವೈಶಾಲ್ಯತೆಯನ್ನ ಮೆರೆದಿದ್ದಾರೆ.

ಈ ಕ್ಯೂಟ್ ಡಾಲ್ ಜೆನಿಲಿಯಾ ಡಿಸೋಜಾ ದಂಪತಿ ಚೆಕ್ ನೀಡುತ್ತಿರುವ ಫೋಟೋವನ್ನು ಫಡ್ನವಿಸ್ ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, “ಮಹಾರಾಷ್ಟ್ರ ಪ್ರವಾಹಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರೂ. ನೀಡಿದ ಜೆನಿಲಿಯಾ ಹಾಗೂ ರಿತೇಶ್‍ಗೆ ಧನ್ಯವಾದಗಳು” ಎಂದು ಟ್ವೀಟ್ ಮಾಡಿಕೊಂಡಿದ್ದಾರೆ.

ಮಹಾಪ್ರವಾಹದಲ್ಲಿ ಜನರ ಜೀವನ ಜಲಾವೃತವಾಗಿದ್ದು. ಅಲ್ಲಿನ ಜನ ತುತ್ತು ಊಟಕ್ಕು ಪರದಾಡುವಂತಾಗಿರುವ ಈ ಹೊತ್ತಲ್ಲಿ 10ರೂ ಕೂಡಾ ಹೆಚ್ಚು ಪ್ರಾಮುಖ್ಯತೆಯನ್ನ ಪಡೆದುಕೊಳ್ಳುತ್ತದೆ. ತನ್ನ ಮುದ್ದು ಮುದ್ದಾದ ನಟನೆಯ ಮೂಲಕ ಮೋಡಿ ಮಾಡುತ್ತಿದ್ದ ಈ ಚೆಲವೆ 25ಲಕ್ಷ ರೂಗಳನ್ನು ನಿರಾಶ್ರಿತರ ನೆರವಿಗೆ ನೀಡಿರುವ ಈ ನಡೆಗೆ ಎಲ್ಲೆಡೆಯಿಂದ ಅಭಿನಂದನೆ ಮಹಾಪೂರವೆ ಹರಿದುಬರುತ್ತಿದೆ.

Sponsored :


9900071610