ನಗರದಲ್ಲಿ ಅವಾಂತರ ಸೃಷ್ಟಿಸಿದ ಅಕಾಲಿಕ‌ ಮಳೆ! ಪ್ರಾಣಾಪಾಯದಿಂದ ಪಾರಾದ ಆರ್.ಜೆ.ಶೃತಿ!!

1136

ಬೆಂಗಳೂರಿನಲ್ಲಿ ಅಕಾಲಿಕವಾಗಿ ಗುಡುಗು ಸಿಡಿಲು ಸಹಿತ ಭಾರಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ‌.
ಮಳೆಯಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ೯೨.೭ ಬಿಗ್ ಎಫ್ ಎಮ್ ರೇಡಿಯೋ ಜಾಕಿ ಶೃತಿ ಅವರ ಕಾರಿನ ಮೇಲೆ ಸ್ಯಾಂಕಿ ಕೆರೆ‌ ಬಳಿ ಮರದ ಹೆಣೆಯೊಂದು ಮುರಿದು ಬಿದ್ದ ಪರಿಣಾಮ ಶೃತಿಯವರ ತಾಯಿ ಗಾಯಗೊಂಡಿದ್ದಾರೆ.

ad

ಈ ವಿಚಾರವನ್ನು ಶೃತಿ ಹಂಚಿಕೊಂಡಿದ್ದು ಕನಿಷ್ಠ ಮಳೆಗಾಲದ ವೇಳೆಗೆ ರಸ್ತೆ ಬದಿ ಮರಗಳ ನಿರ್ವಹಣೆಗೆ ಸಂಬಂಧಪಟ್ಟವರು ಗಮನ ಹರಿಸಬೇಕು.

 

 

ಈ ಘಟನೆ ನನಗೆ ತುಂಬ ಭಯತಂದಿದೆ. ನನ್ನ ತಾಯಿ ಕೈಗೆ ಗಾಯ ವಾಗಿದ್ದು ತುಂಬಾ ಭಯಾನಕವಾದ ಸನ್ನಿವೇಶ ಎದುರಿಸಿದೆ ಎಂದು ಹೇಳಿದ್ದಾರೆ.

 


ಬೆಂಗಳೂರಿನಲ್ಲಿ ಮತ್ತೆ ಮತ್ತೆ ಇಂತಹ ಅವಘಡಗಳು‌ ಮರುಕಳಿಸುತ್ತಿದ್ದು, ಬಿಬಿಎಂಪಿ ಮಳೆಗಾಲ ನಿರ್ವಹಣೆಗೆ ಸಜ್ಜಾಗುವುದು ಯಾವಾಗ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

 

 

Sponsored :

Related Articles