ಸಿದ್ಧರಾಮಯ್ಯ ವಿರುದ್ಧ ಬೇಗ್​ ವಾಗ್ದಾಳಿ!​ ಬೇಗ್​ ಆಕ್ರೋಶಕ್ಕೆ ಖರ್ಗೆ ಏನಂದ್ರು ಗೊತ್ತಾ?!

2438
9900071610

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ರೋಷನ್ ಬೇಗ್ ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿರುವಂತೆ ರೋಷನ್​ ಬೇಗ್ ವಿರುದ್ಧ ಕಲಬುರಗಿಯಲ್ಲಿ ಕೈ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೆಂಡಾಮಂಡಲವಾಗಿದ್ದಾರೆ. ರೋಷನ್ ಹೇಳಿಕೆಯನ್ನು ಖಂಡಿಸಿರುವ ಖರ್ಗೆ, ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ. ಸಮಸ್ಯೆಗಳಿದ್ದರೇ ಹೈಕಮಾಂಡ್​​ ಮೊರೆ ಹೋಗಬೇಕಿತ್ತು ಎಂದು ಎಚ್ಚರಿಸಿದ್ದಾರೆ.

ad

ಪಕ್ಷದ ಹಿರಿಯ ಹಾಗೂ ಜವಾಬ್ದಾರಿಯುತ ನಾಯಕರಾಗಿ ಬೇಗ್​, ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಏನಾದರು ನೋವು ಸಮಸ್ಯೆಗಳಿದ್ದರೆ ಹೈ ಕಮಾಂಡ್ ಗಮನಕ್ಕೆ ತರಬೇಕಿತ್ತು. ಅದನ್ನು ಬಿಟ್ಟು ಮಾಧ್ಯಮಗಳ ಮುಂದೇ ಮಾತನಾಡಿದ್ದು ಸರಿಯಲ್ಲ. ನೇರವಾಗಿ ಮಾತನಾಡುವ ಮೊದಲು ಯೋಚಿಸಬೇಕಿತ್ತೆಂದು ಖರ್ಗೆ ಅಭಿಪ್ರಾಯಿಸಿದ್ದಾರೆ.

ಇನ್ನು ಖರ್ಗೆ ಬೇಗ್​ ಅವರನ್ನು ಸಂಪರ್ಕಿಸುವ ಪ್ರಯತ್ನ ಕೂಡ ಮಾಡಿದ್ದು, ಈ ಬಗ್ಗೆ ಬೆಗ್ ಜೊತೆ ಮಾತಾಡೋಕೆ ನಾನು ಟ್ರೈ ಮಾಡಿದೆ, ಆದರೆ ಅವರ ಸೆಲ್ ಸ್ವೀಚಾಪ್ ಇದೆ. ಈ ರೀತಿ ಮಾಡುತ್ತಿರುವುದರಿಂದಲೆ ದೇಶದಲ್ಲಿ ಕಾಂಗ್ರೆಸ್ ನೆಲಕಚ್ಚುತ್ತಿದೆ. ಇದೇ ರೀತಿ ಮಾಡ್ತಾ ಹೋದರೆ ದೇಶದಲ್ಲಿ ಕಾಂಗ್ರೆಸ್‌ಗೆ ಉಳಿಗಾಲವಿಲ್ಲದಂತಾಗುತ್ತೆ. ಪಕ್ಷಕ್ಕೆ ಒಂದು ಸಲ ಡ್ಯಾಮೇಜ್ ಆದರೆ ಅದನ್ನ ರಿಪೇರಿ ಮಾಡೊಕೆ ಅನೇಕ ದಿನಗಳು ಬೇಕಾಗುತ್ತೆ. ಹೀಗಾಗಿ ಸಮ್ಮಿಶ್ರ ಸರ್ಕಾರದಲ್ಲಿ ನಮ್ಮದೇ ನಾಯಕರ ವಿರುದ್ಧ ಈ ತರ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Sponsored :


9900071610