ಆರ್​ಟಿಓದಲ್ಲಿ ಕೆಲಸ ಬೇಕು ಅಂದ್ರೆ 50 ಲಕ್ಷ ಕೊಡಿ! ಬಯಲಾಯ್ತು ಮೈತ್ರಿ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ!!

2808

ಸರ್ಕಾರ ಉರುಳಿ ತಿಂಗಳು ಕಳೆಯುವ ಮುನ್ನವೇ ಮೈತ್ರಿ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರವೊಂದು ಬೆಳಕಿಗೆ ಬಂದಿದೆ. ಹೌದು ಆರ್​ಟಿಓ ನೇಮಕಾತಿಯಲ್ಲಿ ಬಾರಿ ಭ್ರಷ್ಟಾಚಾರ ನಡೆದಿದ್ದು, ಮಾಜಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸಂಕಷ್ಟಕ್ಕೆ ಸಿಲುಕಿದ್ದಾರೆ.

ad

2015 ರಲ್ಲಿ ಆರ್​ಟಿಓ ನೇಮಕಕ್ಕೆ ನೋಟಿಫಿಕೇಶನ್​​ ಹೊರಡಿಸಲಾಗಿತ್ತಾದರೂ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವಧಿಯಲ್ಲಿ ಈ ನೇಮಕಾತಿಯ ಪ್ರಕ್ರಿಯೆ ನಡೆಸಲಾಗಿತ್ತು. ಇದನ್ನೇ ಲಾಭವಾಗಿ ಬಳಸಿಕೊಂಡ ಡಿ.ಸಿ.ತಮ್ಮಣ್ಣ, ಅಧಿಕಾರಿಗಳ ಮಕ್ಕಳು, ಸಂಬಂಧಿಕರ ಮಕ್ಕಳಿಗೆ 50ಕ್ಕೂ ಹೆಚ್ಚು ಹುದ್ದೆಗಳಲ್ಲಿ ಅವಕಾಶ ಕಲ್ಪಿಸಿದ್ದಾರೆ.

ಇದೀಗ ಅಕ್ರಮ ಬಯಲಾಗಿದ್ದು, 400 ರಲ್ಲಿ 20 ಮಾರ್ಕ್ಸ್ ಪಡೆದವರಿಗೂ ಆರ್​ಟಿಓದಲ್ಲಿ ತಲಾ 50 ಲಕ್ಷ ಲಂಚ ಪಡೆದು ಉದ್ಯೋಗ ನೀಡಲಾಗಿದೆ. ಸಾರಿಗೆ ಸಚಿವರ ಜೊತೆ ಈ ಅಕ್ರಮಕ್ಕೆ ಸಾರಿಗೆ ಆಯುಕ್ತರು ಹಾಗೂ ಕೆಪಿಎಸ್​ಸಿ ಕಾರ್ಯದರ್ಶಿಯೂ ಸಾಥ್ ನೀಡಿದ್ದಾರೆ.


ಈ ಬ್ರಹ್ಮಾಂಡ ಭ್ರಷ್ಟಾಚಾರದ ಮಾಹಿತಿ ಪಡೆದ ಕನ್ನಡ ಒಕ್ಕೂಟದ ನಾಗೇಶ್ ಇದೀಗ ದೂರು ದಾಖಲಿಸಿದ್ದಾರೆ. ಈ ಅಕ್ರಮ ವಿಧಾನದಿಂದ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಯೂ ಆಯ್ಕೆಯಾಗದ ಅಭ್ಯರ್ಥಿಗೆ ಪೋನ್ ಮಾಡಿ ಎಲ್ಲ ವಿಚಾರಗಳನ್ನು ಹೇಳಿದ್ದು, ಈ ಆಡಿಯೋ ಎಲ್ಲ ಅಕ್ರಮಗಳನ್ನು ಬಯಲು ಮಾಡಿದೆ.

Sponsored :

Related Articles