ಗಾಡ್ ಆಫ್​ ದಿ ಕ್ರಿಕೆಟ್​ಗೆ ಹುಟ್ಟುಹಬ್ಬದ ಸಂಭ್ರಮ! ಲಿಟ್ಲ್ ಮಾಸ್ಟರ್ ಅಭಿನಂದಿಸಿದ ಗಣ್ಯರು!!

214

ಶತಕಗಳ ಸರದಾರ ಹಾಗೂ ಗಾಡ್ ಆಫ್ ದಿ ಕ್ರಿಕೆಟ್ ಎಂದೆ ಪ್ರಸಿದ್ದರಾಗಿರು ಲಿಟ್ಲ್​ ಮಾಸ್ಟರ್​ ಆಗಿ ಕ್ರಿಕೆಟ್ ಜಗತ್ತಿಗೆ ಎಂಟ್ರಿ ಕೊಟ್ಟ ಸಚಿನ್ ತೆಂಡೂಲ್ಕರ್ ಗೆ ಇಂದು 46ನೇ ಜನ್ಮದಿನದ ಸಂಭ್ರಮ.

ad

ಕೇವಲ 16 ವರ್ಷಕ್ಕೆ ಕ್ರಿಕೆಟ್​ ಲೋಕಕ್ಕೆ ಕಾಲಿಟ್ಟ ಸಚಿನ್ ಸುಮಾರು ಎರಡು ದಶಕಗಳ ಕಾಲ ಅಬ್ಬರದಿಂದ ಮಿಂಚಿ, ಹಲವು ದಾಖಲೆಗಳನ್ನು ಮುರಿದು ಕ್ರಿಕೆಟ್ ನಲ್ಲಿ ಸಾಧನೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 100 ಶತಕ ಬಾರಿಸಿ, ಬರೋಬ್ಬರಿ 34,357 ರನ್​ಗಳನ್ನು ಸೇರಿಸಿದ ಖ್ಯಾತಿ ಇವರದ್ದಾಗಿದೆ. ಆದರಿಂದ ಇವರನ್ನು ಕ್ರಿಕೆಟ್ ಜಗತ್ತಿನ ದೇವರು ಎಂದು ಕರೆಯುತ್ತಾರೆ.
ಸಚಿನ್​ ತೆಂಡೂಲ್ಕರ್​ ಅವರ ತಂದೆ ಮರಾಠಿ ಕಾದಂಬರಿಕಾರ ಅವರು ಅವರಿಗೆ ಸಂಗೀತ ಮಾಂತ್ರಿಕ ಸಚಿನ್​ ದೇವ್​ ಬರ್ಮನ್​ ರ ದೊಡ್ಡ ಅಭಿಮಾನಿಯಾಗಿದ್ದರು. ಇದೇ ಕಾರಣಕ್ಕೆ ತಮ್ಮ ಮಗನಿಗೂ ಸಚಿನ್​ ಎಂದೇ ಹೆಸರಿಟ್ಟಿದ್ದರು.

ಸಚಿನ್​ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ. 2010ರ ಅಂತಾರಾಷ್ಟ್ರೀಯ ಏಕದಿನ ಪಂದ್ಯಾವಳಿಯಲ್ಲಿ 200 ರನ್​ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಹೆಸರಾಗಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯಾವಳಿಯಲ್ಲಿ ಕೇವಲ 147 ಬಾಲ್​ಗಳಿಗೆ ದ್ವಿಶತಕ ಬಾರಿಸಿದ್ದರು.

ಇನ್ನೂ ಐಪಿಎಲ್ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್​ ಪರ ಕೂಡ 78 ಪಂದ್ಯಗಳನ್ನು ಆಡಿದ್ದು. ಐಪಿಎಲ್​ನಲ್ಲಿ 2334 ರನ್​ಗಳಿಸಿ ಅದರಲ್ಲಿ ಒಂದು ಶತಕ, 13 ಅರ್ಧಶತಕಗಳನ್ನು ಗಳಿಸಿದ್ದಾರೆ. ಸದ್ಯ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾಲೀಕರಾಗಿದ್ದಾರೆ.
ಇದುವರೆಗೂ ಒಟ್ಟು 200 ಟೆಸ್ಟ್​, 463 ಒನ್​ ಡೇ, 310 ಫಸ್ಟ್​​ ಕ್ಲಾಸ್​ ಕ್ರಿಕೆಟ್​​, 96 ಐಪಿಎಲ್​ ಪಂದ್ಯ ಹಾಗೂ 1 ಟಿ20 ಅಂತರಾಷ್ಟ್ರೀಯ ಪಂದ್ಯವನ್ನ ಆಡಿದ್ದಾರೆ.

ಹಾಗೂ ಆರು ವಿಶ್ವಕಪ್​ ಪಂದ್ಯಾವಳಿಗಳಲ್ಲಿ ಸಚಿನ್ ಆಟವಾಡಿದ್ದಾರೆ. 2011ರ ವಿಶ್ವಕಪ್​ ಫೈನಲ್​ನಲ್ಲಿ ಭಾರತ ಶ್ರೀಲಂಕಾವನ್ನು ಸೋಲಿಸಿ ಕಪ್​ ಮುಡಿಗೇರಿಸಿಕೊಂಡಿತ್ತು. 2013ರ ನವೆಂಬರ್​ನಲ್ಲಿ ವಾಂಖಡೆ ಕ್ರೀಡಾಂಗಣದಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ತಮ್ಮ 200ನೇ ಟೆಸ್ಟ್​ ಪಂದ್ಯ ಆಡಿದ ಬಳಿಕ ಸಚಿನ್ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ.

ಸಚಿನ್​ ತೆಂಡೂಲ್ಕರ್​ಗೆ ಬಿಸಿಸಿಐ, ವೀರೇಂದ್ರ ಸೆಹವಾಗ್​ ಸೇರಿ ಹಲವು ಗಣ್ಯರು ಸೇರಿ ಅಭಿಮಾನಿಗಳು ವಿಶ್​ ಹುಟ್ಟುಹಬ್ಬಕ್ಕೆ ಶುಭಾಷಯ ಕೋರಿದ್ದಾರೆ.

Sponsored :

Related Articles