ಹಾಲಪ್ಪ-ಬೇಳೂರ್ ಟಿಕೇಟ್​​ ಫೈಟ್​ ನಡುವೆಯೇ ನಾನು ಆಕಾಂಕ್ಷಿ ಅಂದವರ್ಯಾರು ಗೊತ್ತಾ?- ಕಗ್ಗಂಟಾದ ಸಾಗರ ಬಿಜೆಪಿ ಟಿಕೆಟ್ ಹಂಚಿಕೆ!

2323
Sagar constituency : BJP Ticket Fight Between Haratalu Halappa & Beluru Gopalakrishna.
Sagar constituency : BJP Ticket Fight Between Haratalu Halappa & Beluru Gopalakrishna. Sagar constituency : BJP Ticket Fight Between Haratalu Halappa & Beluru Gopalakrishna. Sagar constituency : BJP Ticket Fight Between Haratalu Halappa & Beluru Gopalakrishna.

ಶಿವಮೊಗ್ಗ ಜಿಲ್ಲೆಯ ಸಾಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರ ಮತ್ತಷ್ಟು ಕಗ್ಗಂಟಾಗ ತೊಡಗಿದೆ.

ad

ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮತ್ತು ಮಾಜಿ ಸಚಿವ ಹರತಾಳ ಹಾಲಪ್ಪ ನಡುವೆ ಬಿಜೆಪಿಯಲ್ಲಿ ಟಿಕೆಟ್​ಗಾಗಿ ಪೈಪೋಟಿ ಏರ್ಪಟ್ಟಿರುವ ಬೆನ್ನಲ್ಲೇ ಈ ಬಾರಿ ಬ್ರಾಹ್ಮಣ ಸಮುದಾಯದವರಾದ ತಮಗೆ ಟಿಕೆಟ್ ಕೊಡಬೇಕೆಂದು ಸತ್ಯನಾರಾಯಣ್ ಭಟ್ ಪತ್ರಿಕಾಗೋಷ್ಠಿ ನಡೆಸಿ ಒತ್ತಾಯಿಸಿದ್ದಾರೆ. ಸಾಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, 10 ವರ್ಷದಿಂದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿದ್ದೇನೆ. ಗೋಪಾಲ ಕೃಷ್ಣ ಬೇಳೂರು ಎರಡು ಬಾರಿ ಶಾಸಕರಾದರೂ ಸಾಗರಕ್ಕೆ ಏನೂ ಮಾಡಿಲ್ಲ.. ಬೇರೆಯವರಿಗೆ ಟಿಕೆಟ್ ಕೊಟ್ಟು ಯಡಿಯೂರಪ್ಪನವರೇ ಬ್ರಾಹ್ಮಣ ಸಮುದಾಯದವರ ಆಕ್ರೋಶಕ್ಕೆ ಗುರಿಯಾಗಬೇಡಿ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ಸತ್ಯನಾರಾಯಣ್ ಭಟ್ ಒತ್ತಾಯಿಸಿದರು.

ಈಗಾಲೇ ಹಾಲಪ್ಪ ಮತ್ತು ಬೇಳೂರು ಟಿಕೇಟ್ ಪುರಾಣ ಸಾಕಷ್ಟು ಚರ್ಚೆಗೆ ಗುರಿಯಾಗಿದ್ದು, ಬಿಜೆಪಿ ಮುಖಂಡರು ಹಾಲಪ್ಪ ಮತ್ತು ಬೇಳೂರು ಗೋಪಾಲಕೃಷ್ಣರನ್ನೆ ಮನವೊಲಿಸಲಾಗದೇ ಪರದಾಡುತ್ತಿದ್ದಾರೆ. ಅಲ್ಲದೇ ಈ ಟಿಕೆಟ್​ ಫೈಟ್​ ವಿಚಾರ ಈಗಾಗಲೇ ನವದೆಹಲಿ ತಲುಪಿದೆ. ಹೀಗಿರುವಾಗ ಇದೀಗ ನಿರ್ಣಾಯಕ ಮತದಾರರನ್ನು ಹೊಂದಿರುವ ಬ್ರಾಹ್ಮಣ ಸಮುದಾಯಕ್ಕೆ ಆದ್ಯತೆ ನೀಡುವಂತೆ ಸತ್ಯನಾರಾಯಣ ಭಟ್​ ಒತ್ತಾಯಿಸಿರೋದು ಬಿಜೆಪಿ ಪಾಲಿಗೆ ಮತ್ತೊಂದು ಸವಾಲಾಗಿ ಪರಿಣಮಿಸಿದೆ.

Sponsored :

Related Articles