ಕೊಡಗಿಗೆ ಬೇಕು ಸುಸಜ್ಜಿತ ಆಸ್ಪತ್ರೆ! ಸೋಷಿಯಲ್​ ಮೀಡಿಯಾ ಅಭಿಯಾನಕ್ಕೆ ಶಿವಣ್ಣ ಸಾಥ್​​!

267

ಪ್ರವಾಸಿ ತಾಣಗಳಲ್ಲಿ ಎಲ್ಲರಿಗೂ ನೆಚ್ಚನ ತಾಣವೆಂದರೆ ಅದು ಕೊಡಗು. ಆದರೆ ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಕೊಡಗಿನಲ್ಲಿ  ಯಾವುದಾದರೂ ಅನಾಹುತ ಉಂಟಾದರೇ ಸೂಕ್ತವಾದ ವೈದ್ಯಕೀಯ ಸೌಲಭ್ಯಗಳಿಲ್ಲ. ಹೀಗಾಗಿ ಕೊಡಗಿನ ಜನತೆ ಆಸ್ಪತ್ರೆಗಾಗಿ ಸಾಮಾಜಿಕ ಜಾಲತಾಣದಲ್ಲಿ  ಹ್ಯಾಶ್​ ಟ್ಯಾಗ್​ ಅಭಿಯಾನ ಆರಂಭವಾಗಿದೆ.  ಇದೀಗ ಈ ಅಭಿಯಾನಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಕೂಡ ಕೈಜೋಡಿಸಿದ್ದಾರೆ.

#WeNeedEmergencyHospitalInKodagu# ಹ್ಯಾಶ್​ ಟ್ಯಾಗ್​ ಅಡಿಯಲ್ಲಿ ಕೊಡಗಿಗೆ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಬೇಕೆಂಬ ಅಭಿಯಾನ ಪ್ರಾರಂಭವಾಗಿದೆ.  ಪೇಸ್​ಬುಕ್​, ಟ್ವೀಟರ್​ ಸೇರಿದಂತೆ ಎಲ್ಲೆಡೆ ಅಭಿಯಾನ ಜೋರಾಗಿದೆ. ಕೊಡಗಿನ ಜನಪ್ರತಿನಿಧಿಗಳು ಕೂಡ ಈ ಅಭಿಯಾನಕ್ಕೆ ಸಾಥ್ ನೀಡುತ್ತಿದ್ದಾರೆ.

ad

ಇದೀಗ ಈ ಜನಪರ ಅಭಿಯಾನಕ್ಕೆ ಬೆಂಬಲ ನೀಡಿರುವ  ನಟ ಶಿವರಾಜ್ ಕುಮಾರ್ ದೇಶದ ಭದ್ರತೆಗಾಗಿ ದುಡಿಯುವ ಯೋಧರಲ್ಲಿ ಬಹುತೇಕರು ಕೊಡಗಿನವರು. ಹೀಗೆ ದೇಶಕ್ಕೆ ಹೆಚ್ಚು ಯೋಧರನ್ನು ಕೊಡುಗೆಯಾಗಿ ನೀಡಿದ ಜಿಲ್ಲೆಗೆ ಆಸ್ಪತ್ರೆಯ ಅವಶ್ಯಕತೆ. ಇದಕ್ಕೆ ಕೈಜೋಡಿಸುವುದು ನಮ್ಮ ಜವಾಬ್ದಾರಿ ಎಂದಿದ್ದಾರೆ.

ಅಲ್ಲದೇ,  ಆಸ್ಪತ್ರೆ ಕಟ್ಟಲು ಕನ್ನಡ ಸಿನಿಮಾ ಇಂಡಸ್ಟ್ರಿ ವತಿಯಿಂದ ಕೊಡಗು ಜನರ ಪರವಾಗಿ ಸರ್ಕಾರಕ್ಕೆ  ಮನವಿ ಮಾಡುವುದಾಗಿಯೂ ಶಿವಣ್ಣ ಹೇಳಿದ್ದಾರೆ. ಕೊಡಗಿನ ಜನತೆ ಜೊತೆ ನಾವಿದ್ದೇವೆ. ನೀವೆಲ್ಲರು ಧೈರ್ಯದಿಂದ ಇರಬೇಕು ಅಂತಾ ಶಿವಣ್ಣ ಕೇಳಿಕೊಂಡಿದ್ದಾರೆ.

ಕನ್ನಡ ಚಿತ್ರರಂಗ ಇತರೆ ಚಿತ್ರರಂಗಗಳಿಗೂ ಸ್ವಲ್ಪ ಡಿಫರೆಂಟ್​. ನಮ್ಮ ಕನ್ನಡ ಇಂಡಸ್ಟ್ರೀಯ ಪ್ರತಿಯೊಬ್ಬ ಕಲಾವಿದರು ಅಭಿನಯಕ್ಕೂ ಸೈ, ಮನರಂಜನೆ ನೀಡೋದಕ್ಕೂ ಸೈ ಇದರ ಜೊತೆಗೆ ಸಾಮಾಜಿಕ ಕೆಲಸಕ್ಕೂ ಸೈ ಎನ್ನುವುದನ್ನ ಸಾಬೀತುಪಡಿಸ್ತಾನೆ ಬಂದಿದ್ದಾರೆ. ಇದಕ್ಕೆ ಈಗ ಶಿವಣ್ಣಕೂಡ ಸಾಥ್ ನೀಡಿದ್ದು, ಸಧ್ಯದಲ್ಲೇ ಈ ಅಭಿಯಾನ ಮತ್ತಷ್ಟು ತೀವ್ರಗೊಂಡರು ಅಚ್ಚರಿಯಿಲ್ಲ.

 

 

Sponsored :

Related Articles