ಅಭಿಮಾನಿಗಳಿಗೆ ಶಾಕ್​ ನೀಡಿದ ಸೆಂಚುರಿ ಸ್ಟಾರ್ ಶಿವಣ್ಣ! ಇಷ್ಟಕ್ಕೂ ಹ್ಯಾಟ್ರಿಕ್​ ಹೀರೊ ಕೊಟ್ಟ ಕಹಿಸುದ್ದಿ ಏನು ಗೊತ್ತಾ?!

6020
9900071610

ಸ್ಯಾಂಡಲ್ ವುಡ್ ನಟ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಕಹಿ ಸುದ್ದಿಯೊಂದನ್ನು ನೀಡಿದ್ದಾರೆ. ಹೌದು ಜುಲೈ 9 ರಂದು ಶಿವಣ್ಣನವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬ ವಿಭಿನ್ನವಾಗಿ ಆಚರಿಸುವ ಸಿದ್ಧತೆಯಲ್ಲಿದ್ದರು. ಆದರೆ ಇದೇ ವಿಚಾರಕ್ಕೆ  ಶಾಕ್ ನೀಡಿರುವ ಶಿವಣ್ಣ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂಬ ವಿಚಾರವನ್ನು  ಬಹಿರಂಗಗೊಳಿಸಿದ್ದಾರೆ.

ad

ನಟ ಶಿವರಾಜ್‌ಕುಮಾರ್‌ ಹಲವು ದಿನಗಳಿಂದ ಭುಜದ ನೋವಿನಿಂದ ಬಳಲುತ್ತಿದ್ದು ಲಂಡನ್‌ನಲ್ಲಿ ಭುಜದ ಶಸ್ತ್ರ ಚಿಕಿತ್ಸೆಗೊಳಗಾಗಲಿದ್ದಾರೆ. ಬಲಭುಜದಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಜುಲೈ 9ರಂದು ಲಂಡನ್‌ಗೆ ತೆರಳಲಿರುವ ಶಿವಣ್ಣ ಲಂಡನ್‌ನಲ್ಲೇ ವಾಸ್ತವ್ಯ ಹೂಡಿ ಸಣ್ಣದೊಂದು ಸರ್ಜರಿಯ ಮಾಡಿಸಿಕೊಂಡು ಒಂದು ತಿಂಗಳು ಸಂಫೂರ್ಣ ಚಿಕಿತ್ಸೆ ಪಡೆದು ಗುಣ ಮುಕ್ತರಾದ ನಂತರ ಬೆಂಗಳೂರಿಗೆ ಹಿಂತಿರುಗಲಿದ್ದಾರೆ.

ಹೀಗಾಗಿ ಈ ಬಾರಿ ಹುಟ್ಟುಹಬ್ಬದ ವೇಳೆ ಶಿವಣ್ಣ ಬೆಂಗಳೂರಿನಲ್ಲಾಗಲಿ, ದೇಶದಲ್ಲಾಗಲಿ ಇರುವುದಿಲ್ಲ. ಇದೇ ಕಾರಣಕ್ಕೆ ಜುಲೈ 12 ರಂದು ನಟ ಶಿವರಾಜ್ ಕುಮಾರ್ ಅವರ 57ನೇ ವರ್ಷದ ಹುಟ್ಟುಹಬ್ಬ ಅಭಿಮಾನಿಗಳಿಗೆ ನೀರಸವಾಗಲಿದೆ. ಕೊನೆ ಕ್ಷಣದಲ್ಲಿ ಅಭಿಮಾನಿಗಳು ಬೇಸರಗೊಳ್ಳುವುದು ಬೇಡ ಎಂಬ ಕಾರಣಕ್ಕೆ ಶಿವಣ್ಣ ಈ ವಿಚಾರವನ್ನು ಈಗಲೇ ಅಭಿಮಾನಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಲಂಡನ್​ನಲ್ಲಿ ಶಸ್ತ್ರಚಿಕಿತ್ಸೆ ಹಾಗೂ  ವಿಶ್ರಾಂತಿಯ ಬಳಿಕ ಜುಲೈ ಅಂತ್ಯ ಅಥವಾ ಅಗಸ್ಟ್ ಮೊದಲ ವಾರದಲ್ಲಿ ಶಿವಣ್ಣ ತಾಯ್ನಾಡಿಗೆ ಮರಳಲಿದ್ದಾರೆ.

Sponsored :


9900071610