ತೆಲುಗಿನಲ್ಲಿ ಉಪ್ಪಿ ಆ್ಯಕ್ಷನ್​ ಕಟ್​​! ಇಷ್ಟಕ್ಕೂ ಉಪೇಂದ್ರ ನಿರ್ದೇಶಿಸುತ್ತಿರುವ ತೆಲುಗು ಚಿತ್ರ ಯಾವುದು ಗೊತ್ತಾ?!

1658

ಸ್ಯಾಂಡಲ್ ವುಡ್​ನ ಪ್ರತಿಭಾವಂತ ನಿರ್ದೇಶಕ ಉಪೇಂದ್ರ ಸಧ್ಯದಲ್ಲೇ  ತೆಲುಗಿನ ಪಾಲಾಗಿದ್ದಾರೆ. ಹೌದು ಸ್ವತಃ ಉಪೇಂದ್ರ ಅವರೇ ಈ ವಿಚಾರ ಕನ್ಪರ್ಮ್ ಮಾಡಿದ್ದಾರೆ. ಇತ್ತೀಚಿಗೆ ಉಪ್ಪಿ ತಮ್ಮ ಹೊಸ ಚಿತ್ರ ಐ ಲವ್​ ಯೂ ಟ್ರೇಲರ್​ನ್ನು ವಿಶಾಖಪಟ್ಟಣಂನ ವರುಣ್ ಕಡಲತೀರದಲ್ಲಿ ಬಿಡುಗಡೆಗೊಳಿಸಿದ್ದು, ಇದೇ ವೇಳೆ ತೆಲುಗಿನಲ್ಲೂ ಚಿತ್ರ ನಿರ್ದೇಶಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ad

ಹೌದು ನಟ ಉಪೇಂದ್ರ ನನಗೆ ಸಿನಿಮಾ ಮಾಡುವುದೆಂದರೆ ಬಹಳ ಖುಷಿ. ನಾನು ಕನ್ನಡ ಮತ್ತು ತೆಲುಗಿನಲ್ಲಿ ಹೊಸದೊಂದು ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುವುದು ಖಚಿತ, ಹಾಗೂ ಅದರ ಸಿದ್ದತೆ ನಡೆದಿದೆ’  ಉಪ್ಪಿ ತಿಳಿಸಿದ್ದು, ತೆಲುಗಿನಲ್ಲಿ ಸಂಚಲನ ಆರಂಭವಾಗಿದೆ.  ಆದರೆ ಆ ಸಿನಿಮಾ ಯಾವಾಗ ಸೆಟ್ಟೇರಲಿದೆ ಎಂಬುವುದರ ಬಗೆಗೆ ಯಾವುದೆ ಮಾಹಿತಿ ನೀಡಿಲ್ಲ.

ಅಲ್ಲದೆ ಉಪ್ಪಿ ಮಾತನಾಡುತ್ತಿರುವಾಗ ಕೂಗಾಡುತ್ತಿದ್ದ ಅಭಿಮಾನಿಗಳ ಸಿಳ್ಳೆ ಕೇಕೆಗೆ ಪ್ರತಿಕ್ರಿಯಿಸಿ ನನ್ನ ಅಭಿಮಾನಿಗಳಿಗೆ ನಾನು ನಟನಾಗಿ ಅಭಿನಯಿಸುವುದಕ್ಕಿಂತ ನಿರ್ದೇಶಕನಾಗಿ ಕಾಣಿಸಿಕೊಳ್ಳುವುದೇ ಹೆಚ್ಚು ಇಷ್ಟಪಡುತ್ತಾರೆ.ಜೊತೆ ನಾನೆ ನಿರ್ದೇಶಿಸಿದ ಹಲವು ಚಿತ್ರಗಳು ಕನ್ನಡದಿಂದ ತೆಲುಗಿನಲ್ಲಿಯೂ ಸಹ ತೆರೆ ಕಂಡಿದೆ. ಇದಕ್ಕೆ ಕಾರಣ ನನ್ನ ಸಿನಿಮಾಗಳ ಬಗೆಗೆ ಅಭಿಮಾನಿಗಳಿಗಿರುವ ಕುತೂಹಲ ಎಂದರು.

ಅಲ್ಲದೆ ಐ ಲವ್ ಯೂ ಸಿನಿಮಾ ಎರಡು ಭಾಷೆಗಳಲ್ಲಿ ತೆರೆ ಕಾಣಲಿದ್ದು, ಇದು ಚಂದ್ರು ಜೊತೆಗೆ ನನ್ನ 2ನೇ ಸಿನಿಮಾ, ಈ ಚಿತ್ರವು ಎಲ್ಲಾ ವರ್ಗಕ್ಕೂ ಇಷ್ಟವಾಗುವಂತಹ ಸಿನಿಮಾ. ಅಲ್ಲದೆ ನಟಿ ರಚಿತ ರಾಮ್ ಈ ಚಿತ್ರದಲ್ಲಿ ವೆರೈಟಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೂ ಅವರು ನಟಿಸಿರುವುದು ಅಶ್ಲೀಲತೆ ಅಲ್ಲ. ಕೇವಲ ಅವರು ಪಾತ್ರಕ್ಕೆ ಬೇಕಾದಂತೆ ಜೀವ ತುಂಬಿದ್ದಾರೆ. ಅಲ್ಲದೆ ಅವರು ಕೂಡ ಅವರ ಪಾತ್ರದ ಬಗೆಗೆ ಸ್ಪಷ್ಟಪಡಿಸಿದ್ದಾರೆ. ಅನಗತ್ಯವಾಗಿ ಗೊಂದಲ ಸೃಷ್ಟಿಸುವುದು ಬೇಡ’ ಎಂದು ಹೇಳಿದರು.

ಚಂದ್ರುರವರು ನನಗೆ ಕಥೆ ಹೇಳಿದ ತಕ್ಷಣವೇ ಸಿನಿಮಾ ಮಾಡಲು ಒಪ್ಪಕೊಂಡೆ ಕಾರಣ ಚಿತ್ರದಲ್ಲಿ ಭಾವುಕ ಸನ್ನಿವೇಶಗಳೇ ಪ್ರಮುಖವಾಗಿದೆ. ನಿರ್ದೇಶಕ ಚಂದ್ರು ಕೂಡ ಸಿನಿಮಾವನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆಚಿತ್ರದ ಮೊದಲ ಭಾಗ ಯುವಜನರಿಗೆ ಮೀಸಲು. ದ್ವಿತೀಯಾರ್ಧವನ್ನು ಕೌಟುಂಬಿಕ ಪ್ರೇಕ್ಷಕರು ಬಹುವಾಗಿ ಮೆಚ್ಚಿಕೊಳ್ಳುತ್ತಾರೆ. ಕ್ಲೈಮ್ಯಾಕ್ಸ್ ಎಲ್ಲರಿಗೂ ಇಷ್ಟವಾಗಲಿದೆ’ ಎಂದರು.

ಇನ್ನೂ ಚಿತ್ರ ಕುರಿತು ಮಾತನಾಡಿದ ನಿರ್ದೇಶಕ ಆರ್. ಚಂದ್ರು ‘ಉಪೇಂದ್ರ ಅವರು ನಿರ್ದೇಶಿಸಿದ ‘ಓಂ’ ಸಿನಿಮಾದಂತಹ ಚಿತ್ರ ನಿರ್ದೇಶಿಸಲು ನನಗೆ ಸಾಧ್ಯವಿಲ್ಲ ಆದರೆ ‘ಓಂ’ ಚಿತ್ರದ ಕ್ಯಾರೆಕ್ಟರ್ ಐ ಲವ್ ಯು ಚಿತ್ರದಲ್ಲಿದೆ.ನಾನು ಈ ಹಿಂದೆ ನಿರ್ದೇಶಿಸಿದ ‘ಚಾರ್ ಮಿನಾರ್’ ಚಿತ್ರದ ಕಥೆಯೂ ಇದೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಪ್ರೀತಿ ಇರುತ್ತದೆ. ಆದರೆ ಅದು ಹೇಗೆ ಅರಳುತ್ತದೆ ಎನ್ನುವುದು ಮುಖ್ಯ. ಚಿತ್ರದಲ್ಲಿ ನಿಜವಾದ ಪ್ರೀತಿಯ ಬಗ್ಗೆ ಹೇಳಿದ್ದೇವೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಸಿನಿಮಾ ಇಷ್ಟವಾಗಲಿದೆ’ ತಿಳಿಸಿದರು.

 

ಸದ್ಯ ಚಿತ್ರಕ್ಕೆ ಕಿರಣ್ ಸಂಗೀತ ಸಂಯೋಜಿಸಿದ್ದು, ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕ ಕಾಳದಲ್ಲಿ ಚಿತ್ರ ತೆರೆಕಾಣುತ್ತಿದೆ. ತೆಲುಗಿನ ‘ರಂಗಸ್ಥಳಂ’ ಮತ್ತು ‘ಸರೈನೋಡು’ ಚಿತ್ರದ ಬಳಿಕ ಮೊದಲ ಬಾರಿಗೆ ಕನ್ನಡದ ‘ಐ ಲವ್ ಯು’ ಚಿತ್ರ ವಿಶಾಖಪಟ್ಟಣಂನ ವರುಣ್ ಕಡಲತೀರದಲ್ಲಿ ಟ್ರೇಲರ್ ಲಾಂಚ್ ಮಾಡುತ್ತಿದೆ. ಎಂದು ಚಿತ್ರತಂಡ ಸಂತಸ ವ್ಯಕ್ತಪಡಿಸಿತು.

Sponsored :

Related Articles