ಹೊಸಬರ ಚಿತ್ರ ಹಿಕೋರ ಚಿತ್ರಕ್ಕೆ ದಚ್ಚು ಅಭಯ! ಅನ್ನದಾತೆಯ ಋಣ ತೀರಿಸಲು ನಿಂತ ಚಾಲೆಂಜಿಂಗ್ ಸ್ಟಾರ್​ ದರ್ಶನ್!

7153

ದರ್ಶನ ಸಾಕಷ್ಟು ಜನರಿಗೆ ಸಹಾಯಹಸ್ತ ಚಾಚಿದ್ದರೂ, ಯಾವುದು ಕೂಡ ಪ್ರಚಾರವಾಗದಂತೆ ನೋಡಿಕೊಳ್ಳುತ್ತಿದ್ದಾರೆ. ದರ್ಶನ ಇದೀಗ ತಮ್ಮ ಅನ್ನದ ಋಣ ತೀರಿಸಲು ಮುಂದಾಗಿದ್ದಾರೆ. ಹೌದು ಸಿನಿಮಾ ರಂಗಕ್ಕೆ ಬರೋದಿಕ್ಕು ಮುನ್ನ ನೀನಾಸಂ ದಿನಗಳಲ್ಲಿ ಅನ್ನವಿಟ್ಟು ಸಾಕಿದ ರತ್ನಕ್ಕನ ನೆರವಿಗೆ ಚಾಲೆಂಜಿಂಗ್​​ ಸ್ಟಾರ್ ನಿಂತಿದ್ದು, ಯಾವ ರೀತಿ ಸಹಾಯ ಮಾಡ್ತಿದ್ದಾರೆ ಅನ್ನೋ ವಿವರ ಇಲ್ಲಿದೆ ನೋಡಿ.

ಸ್ಯಾಂಡಲ್​ವುಡ್​ಗೆ ಹೊಸಬರ ಚಿತ್ರವೊಂದು ಪಾದಾರ್ಪಣೆ ಮಾಡುತ್ತಿದ್ದು ಆ ಚಿತ್ರಕ್ಕೆ ದಾಸ ಬೆನ್ನೆಲುಬಾಗಿ ನಿಂತಿದ್ದಾರೆ. ಇದು ಮತ್ಯಾವುದು ಅಲ್ಲ ದರ್ಶನ್​ ರವರ ಪಾಲಿಗೆ ಒಂದು ಕಾಲದಲ್ಲಿ ಅನ್ನದಾತೆಯಾಗಿದ್ದ ರತ್ನಕ್ಕನವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ  ಹಿಕೋರ ಚಿತ್ರ.

ad

ಒಂದು ಕಾಲಕ್ಕೆ​ ದರ್ಶನ್​ ಅವರ ಪಾಲಿನ ಅಮ್ಮನಾಗಿ, ಅಕ್ಕನಾಗಿ, ಹಿತೈಶಿಯಾಗಿ ಸ್ನೇಹಿತೆಯಾಗಿ ದರ್ಶನ್​ರನ್ನ ಸಾಕಿ ಸಲುಹಿದವರು ರತ್ನಕ್ಕ. ಊಟಕ್ಕೆ ಕೊಡಲು ದುಡ್ಡಿಲ್ಲದಿದ್ದಾಗಲೂ  ಪ್ರತಿನಿತ್ಯ ದರ್ಶನ್​ ಅವರಿಗೆ ಅನ್ನ ಬಡಿಸಿದ ರತ್ನಕ್ಕ ದರ್ಶನ ಪಾಲಿಗೆ ತಾಯಿಯಂತೆ. ಈ ಹಿಂದೆ ದರ್ಶನ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗಲೂ ಕೂಡ ರತ್ನಕ್ಕನ ಬಗ್ಗೆ ದರ್ಶನ ಮಾತನಾಡಿದ್ದರು. ಇದೀಗ  ಇನ್ನೊಂದು ಹೆಜ್ಜೆ  ಮುಂದೆ ಹೋಗಿ ರತ್ನಕ್ಕನ ಕನಸಿನ ಕೂಸಾಗಿರುವ  ಹಿಕೋರ ಚಿತ್ರಕ್ಕೆ ದರ್ಶನ್​ ಬೆನ್ನೆಲುಬಾಗಿ ನಿಂತಿದ್ದಾರೆ.

ಹಿಂದಿನಿಂದಲೂ ರತ್ನಕ್ಕನಿಗೆ ಸಿನಿಮಾ ಮಾಡುವ ಬಹಳ ದೊಡ್ಡ ಕನಸಿತ್ತು. ಇದೀಗಾ ಸ್ನೇಹಿತರ ಜೊತೆಗೂಡಿ ‘ಹಿಕೋರ’ ಎನ್ನುವ ಚಿತ್ರಕ್ಕೆ ಚಾಲನೆ ಕೊಟ್ಟಿದ್ದಾರೆ. ಆರಂಭದಲ್ಲಿ ಹಲವಾರು ವಿಘ್ನಗಳು ಎದುರಾಗಿದ್ದವು.ಈ ವಿಷಯ ತಿಳಿಯುತ್ತಲೇ ದರ್ಶನ್​ ಅವರೇ ಖುದ್ದಾಗಿ ತೆರಳಿ ರತ್ನಕ್ಕನವರಿಗೆ ಧೈರ್ಯ ತುಂಬಿದ್ದಾರೆ. ಮುಹೂರ್ತದಿಂದ ಹಿಡಿದು ಪ್ರತಿ ಹೆಜ್ಜೆಯಲ್ಲೂ ಸಾಥ್​ ನೀಡಿದ್ದಾರೆ.

 

ನೀನಾಸಂ ವಿಧ್ಯಾರ್ಥಿಗಳಿಂದ ಮೂಡಿಬರುತ್ತಿರುವ ಹಿಕೋರ ಚಿತ್ರ ಸೆಟ್ಟೇರಿ ಒಂದು ವರ್ಷ ಮುಗಿದಿದ್ದು ಬಹುತೇಕ ಕೆಲಸಗಳು ಮುಗಿಯುತ್ತಾ ಬಂದಿವೆ. ಕೃಷ್ಣಪೂರ್ಣ ನಿನಾಸಂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಸ್ವತಃ ದರ್ಶನ್ ಚಿತ್ರದ ಪ್ರತಿಯೊಂದು ಕೆಲಸದ ಬಗ್ಗೆ ವಿಚಾರಣೆ ಮಾಡುತ್ತಿದ್ದಾರೆ. ಅಲ್ಲದೆ ಚಿತ್ರದ ಟ್ರೈಲರ್ ಅಥವಾ ಟೀಸರ್ ಲಾಂಚ್ ಸೇರಿದಂತೆ, ಚಿತ್ರ ಬಿಡುಗಡೆಗೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಕೈ ತುತ್ತು ಕೊಟ್ಟವಳನ್ನ ಮರೆಯದೆ ಆಕೆಗೆ ಬೆನ್ನೆಲುಬಾಗಿ ನಿಂತಿರುವ ದಾಸನ ಈ ಹೃದಯ ಶ್ರೀಮಂತಿಕೆ ಸಧ್ಯ ಎಲ್ಲೆಡೆ ಇಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ .

Sponsored :

Related Articles