ಬಿಜೆಪಿಗೆ ತುಪ್ಪದ ಹುಡುಗಿ! ಕಮಲ ಮುಡಿಯಲಿದ್ದಾರೆ ನಟಿ ರಾಗಿಣಿ!!

166
9900071610

ಸ್ಯಾಂಡಲ್​ವುಡ್​ನ ಮತ್ತೊಬ್ಬ ನಟಿ ರಾಜಕಾರಣದ ರಂಗಪ್ರವೇಶ ಮಾಡಲಿದ್ದಾರೆ. ತುಪ್ಪದ ಹುಡುಗಿ ನಟಿ ರಾಗಿಣಿ ದ್ವಿವೇದಿ ಅವರು ಭಾರತೀಯ ಜನತಾ ಪಕ್ಷ ಸೇರಲಿದ್ಧಾರೆ..  ಲೋಕಸಭೆ ಚುನಾವಣೆ ಮತದಾನದ ದಿನ ಹತ್ತಿರವಾಗಿರುವಾಗಲೇ ನಟಿ ರಾಗಿಣಿ ಬಿಜೆಪಿಗೆ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ. ಶೀಘ್ರದಲ್ಲೇ ಅವರು ಕಮಲ ಪಾಳಯಕ್ಕೆ ಧುಮುಕಲಿದ್ದಾರೆ.

ad

ಕಳೆದ ವಾರವಷ್ಟೇ ರಾಗಿಣಿ ಅವರು ಬಿಜೆಪಿಯ ಕರ್ನಾಟಕ ಉಸ್ತುವಾರಿ ಮುರಳೀಧರ್ ರಾವ್ ಅವರನ್ನು ಭೇಟಿ ಮಾಡಿದ್ದರು. ಅವರ ಮೂಲಕವೇ ರಾಗಿಣಿ ಅವರು ಬಿಜೆಪಿಯ ರಂಗ ಪ್ರವೇಶ ಮಾಡಲಿದ್ದಾರೆ. ಶೀಘ್ರದಲ್ಲಿ ನಟಿ ರಾಗಿಣಿ ದ್ವಿವೇದಿ ಅವರು ರಾಜಕಾರಣಕ್ಕೆ ಧುಮುಕಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ  ಎನ್ನುವುದು ನಿಶ್ಚಿತವೆನ್ನಲಾಗಿದೆ.

ಮೊನ್ನೆಯಷ್ಟೇ ಹೋಟೆಲ್​​ನಲ್ಲಿ ನಟಿ ರಾಗಿಣಿ ಅವರು ರಂಪಾಟ ಮಾಡಿಕೊಂಡಿದ್ದರು. ತುಪ್ಪದ ಬೆಡಗಿಗಾಗಿ  ಆಕೆಯ ಬಾಯ್​​ ಪ್ರೆಂಡ್​​ ರಾಗಿಣಿ ಎದುರೇ ಜಗಳ ಮಾಡಿಕೊಂಡಿದ್ದರು. ಸ್ಯಾಂಡಲ್​ವುಡ್​ನಲ್ಲಿ ವಿವಾದಗಳಿಂದಲೇ ಫೇಮಸ್ ಆದ ನಟಿ ರಾಗಿಣಿ ದ್ವಿವೇದಿ. ಇಂಥಾ ವಿವಾದಿತ ನಟಿ ನೋಡಿ ಜನ ನಿಜಕ್ಕೂ ಬಿಜೆಪಿಗೆ ವೋಟ್ ಹಾಕ್ತಾರಾ..? ಎಂದು ಟೀಕೆಗಳು ಸಹ ಕೇಳಿಬಂದಿವೆ.

Ragini Dwivedi Hot Saree Stills

ಲೋಕಸಭೆ ಚುನಾವಣೆ ಸನಿಹದಲ್ಲಿರುವಾಗ ಸ್ಟಾರ್ ನಟಿಯನ್ನು ಪಕ್ಷ ಕ್ಕೆ ಸೇರಿಸಿಕೊಳ್ಳುವ ಮೂಲಕ ಮತಗಳನ್ನು ಸೆಳೆಯಲು ಕಮಲ ಪಾಳಯ ತಂತ್ರ ಹೆಣೆದಿದೆ ಎಂದು ಹೇಳಲಾಗುತ್ತಿದೆ. ಇಂದು ನಡೆಯುವ ಸಮಾರಂಭದಲ್ಲಿ ಮಾಜಿ ಸಚಿವ ಅರವಿಂದ್ ಲಿಂಬಾವಳಿ ಸುಮ್ಮಖದಲ್ಲಿ ರಾಗಿಣಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.

Sponsored :


9900071610