ರಸ್ತೆ ಮಧ್ಯೆ ಮಾನವೀಯತೆ ಮೆರೆದ ಲವ್ಲಿ ಸ್ಟಾರ್ ಪ್ರೇಮ್! ಇಷ್ಟಕ್ಕೂ ಪ್ರೇಮ್ ಮಾಡಿದ ಕೆಲಸವೇನು ಗೊತ್ತಾ?!

3292
9900071610

ರಾಜ್ಯದಲ್ಲಿ ಉಂಟಾದ ಮಹಾ ಪ್ರವಾಹದ ಅಬ್ಬರಕ್ಕೆ ನಲುಗಿ ಹೋಗಿರುವ ಸಂತ್ರಸ್ತರಿಗೆ ಸ್ಯಾಂಡಲ್ ವುಡ್, ಬಾಲಿವುಡ್ ಸೇರಿದಂತೆ ಹಲವು ಕಡೆಗಳಿಂದ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ಈ ಮಧ್ಯೆ ಸ್ಯಾಂಡಲ್‍ವುಡ್ ನಟ ನೆನಪಿರಲಿ ಪ್ರೇಮ್ ಉತ್ತರ ಕನ್ನಡದ ನೆರೆ ಸಂತ್ರಸ್ತರ ನೆರವಿಗೆ  ಧಾವಿಸುವ ದಾರಿಮಧ್ಯೆ ಮಾನವೀಯತೆ ಮೆರೆದಿದ್ದಾರೆ.

ad

ರಣಭೀಕರ ಮಳೆಯಿಂದಾಗಿ ಉತ್ತರ ಕರ್ನಾಟಕದ ಜನ ಅಕ್ಷರಶಃ ನಿರಾಶ್ರಿತಗಿದ್ದಾರೆ. ಅಲ್ಲಿನ ಜನತೆಯ ನೆರವಿಗಾಗಿ ಲವ್ಲಿ ಸ್ಟಾರ್ ಪ್ರೇಮ್ ಇಂದು ಉ.ಕರ್ನಾಟಕ ಕಡೆ ಪ್ರಯಾಣ ಬೆಳೆಸಿದ್ದು, ಪ್ರಯಾಣದ ಮದ್ಯೆ ದ್ವಿಚಕ್ರ ವಾಹನದ ಸವಾರನೊಬ್ಬ ಅಪಘಾತಕ್ಕೀಡಾಗಿ ಗಾಯಗೊಂಡಿರುವದನ್ನು ಕಂಡು ಕೂಡಲೇ ಆ ವ್ಯಕ್ತಿಯ ನೆರವಿಗೆ ಧಾವಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.

ತುಮಕೂರು ಶಿರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಅಪಘಾತವಾಗಿದ್ದ ವ್ಯಕ್ತಿ ಕಂಡು ಕೂಡಲೇ ಕಾರು ನಿಲ್ಲಿಸಿದ ಪ್ರೇಮ್ ನೀರುಕೊಟ್ಟಿದ್ದಾರೆ. ಬಳಿಕ ಗಾಯಗೊಂಡು ನೋವಿನಿಂದ ಬಳಲುತ್ತಿದ್ದ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡಿ ಆ್ಯಂಬ್ಯಲೆನ್ಸ್ ಗೆ ಫೊನ್ ಮಾಡಿದ್ದಾರೆ. ಆ ಮೂಲಕ ನಟ ಪ್ರೇಮ್ ಸಿನಿಮಾಗಳಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲು ಹಿರೋವಿನ ಗುಣವನ್ನ ಮೆರೆದಿದ್ದಾರೆ.

Sponsored :


9900071610