ಸ್ಯಾಂಡಲ್​ವುಡ್​ನಲ್ಲಿ ಮೋಡಿ ಮಾಡ್ತಿದೆ ಓ..ಪ್ರೇಮವೇ!!

270

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಧ್ಯ ಎಲ್ಲೆಡೆ ಓ ಪ್ರೇಮದ್ದೇ ಮಾತು..ಅರೆ ಇದೇನಿದು ಓ ಪ್ರೇಮ,ಪ್ರೀತಿ ಅಂತಿದ್ದಾರೆ ಅಂತ ಕನ್ಫೂಸನ್ ಆಗ್ಬೇಡಿ..ಓ ಪ್ರೇಮವೇ ಅನ್ನೋದು ಸ್ಯಾಂಡಲ್ ವುಡ್ ನಲ್ಲಿ ಹೊಸದಾಗಿ ರಿಲೀಸ್ ಆಗಿರೋ ಹೊಸ ರೀತಿ ಸಿನಿಮಾ.ಹಾಗಿದ್ರೆ ಅದ್ದೂರಿಯಾಗಿರೋ ಓ ಪ್ರೇಮವೇ ಸ್ಪೆಶಾಲಿಟಿ ಏನು? ಇಲ್ಲಿದೆ ಆಬಗ್ಗೆ ಸ್ಪೆಶಲ್ ರಿಪೋರ್ಟ್.

ಓ ಪ್ರೇಮವೇ…ಸ್ಯಾಂಡಲ್ ವುಡ್ ಸಿನಿ ಪ್ರೇಕ್ಷಕರಿಗೆ ಪಕ್ಕಾ ಮನೋರಂಜನೆ ನೀಡ್ತಿರೋ ಹೊಸ ಬಗೆಯ ಸಿನಿಮಾ.ಪ್ರೇಮಿಗಳಿಗೆ ಮತ್ತಷ್ಟು ಶಕ್ತಿ ತುಂಬೋಕೆ ರೆಡಿಯಾಗಿರೋ ಡಿಫರೆಂಟ್ ಸ್ಟೋರಿ ಲೈನ್ ಹೊಂದಿರೋ ಚಿತ್ರ..ಇದೀಗ ಈ ಚಿತ್ರ ಅದ್ದೂರಿಯಾಗಿ ರಿಲಿಸ್ ಆಗಿದ್ದು ಪ್ರೇಕ್ಷಕರಿಗೆ ಮಸ್ತ್ ಮನೋರಂಜನೆ ನೀಡ್ತಿದೆ. ಹೌದು,,,ಓ ಪ್ರೇಮವೇ ಸಿನಿಮಾ ಈಗಾಗ್ಲೇ ಎಲ್ಲೆಡೆ ಬಿಡುಗಡೆಯಾಗಿದೆ..ನೋಡಿಗರು ಕೂಡ ಈ ಚಿತ್ರಕ್ಕೆ ಕ್ಲೀನ್ ಬೌಲ್ಡ್ ಆಗ್ತಿದ್ದಾರೆ.ಪಕ್ಕಾ ರೊಮ್ಯಾಂಟಿಕ್ ಕಥೆ ಇರೋ ಇರೋ ಈ ಸಿನಿಮಾದ ಟ್ರೇಲರ್ ಪ್ರೇಕ್ಷಕ ಪ್ರಭುಗಳಿಗೆ ಇಷ್ಟವಾಗಿದ್ದು,ಸಿನಿಮಾದ ಮೇಲಿದ್ದ ನೀರಿಕ್ಷೆಗೆ ಉತ್ತರಸಿಕ್ಕಿದೆ.

ad

ಟೈಟಲ್ ಪ್ಲಸ್ ಪಾಯಿಂಟ್ ಆಗಿರೋ ಪ್ರೀತಿಯ ರಾಯಭಾರಿಯಲ್ಲಿ ಪಕ್ಕಾ ಯೂಥ್ಸ್ ಓರಿಯೆಂಟೆಡ್ ಕಥೆಯಿದೆ.
ಚಿತ್ರದಲ್ಲಿ ಒಂದು ಮಹತ್ವದ ಕಥೆ ಇದ್ದು ಪ್ರೇಮ ಕಥೆಯನ್ನ ಸೇರಿಸಿ ಸುಂದರವಾದ ಕಥೆಯನ್ನ ಹೆಣೆದಿದ್ದಾರೆ ನಿರ್ದೇಶಕ ಮನೋಜ್ ಕುಮಾರ್…ಹೌದು…..ಹರೆಯದ ಕನವರಿಕೆ, ಹುಡುಕಾಟದ ಪ್ರೇಮ ಕಹಾನಿ ಹೊತ್ತಿರುವ ‘ಓ ಪ್ರೇಮವೇ’ ಸಿನಿಮಾ ಎಲ್ಲಾ ವರ್ಗದ ಸಿನಿ ಪ್ರೇಕ್ಷಕರಿಗೂ ಇಷ್ಟವಾಗ್ತಿದೆ.ಇನ್ನೂ ,,,ಪ್ರೀತಿಯೇ ಶಾಶ್ವತ ಅನ್ನೋ ಸಂದೇಶ ಸಾರಿರುವ ‘ಓ ಪ್ರೇಮವೇ’ ಚಿತ್ರ ಹರೆಯದ ಹುಡುಗ ಹುಡುಗಿಯರ ಮನಸ್ಸು ಗೆಲ್ತಿರೋದಂತು ಸುಳ್ಳಲ್ಲ.

ಸಖತ್ ರಿಚ್ ಆಗಿ ಮೂಡಿ ಬ.ಂದಿರೋ ಓ ಪ್ರೇಮವೇ ಚಿತ್ರದಲ್ಲಿ ಒಂದೊಳ್ಳೆ ಸಂದೇಶ ಸಾರೋ ಕಥೆ ಇದೆ.ಆ್ಯಕ್ಷನ್,ಸೆಂಟಿಮೆಂಟ್,ಜೊತೆ ಮಹತ್ವದ ಸಂದೇಶ ಸಾರೋ ಸ್ಟೋರಿ ಲೈನ್ ಚಿತ್ರದಲ್ಲಿದೆ.ವಿಶೇಷ ಅಂದ್ರೆ ಚಿತ್ರದಲ್ಲಿ ತ್ರಿಕೋನ ಪ್ರೇಮ ಕಥೆಯೊಂದನ್ನು ಆಯ್ಕೆ ಮಾಡಿಕೊಂಡು ಸ್ವತಃ ನಾಯಕನಾಗಿ ಅಭಿನಯಿಸುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ ಮೊಗ್ಗಿನ ಮನಸ್ಸಿನ ಮನೋಜ್.. ನಿಷ್ಕಲ್ಮಷ ಪ್ರೀತಿ ಹುಡುಕುವ ಹುಡುಗ.ಆದ್ರೆ ಶ್ರೀಮಂತ ಹುಡುಗನ ಸಂಗ ಬಯಸೋ ಹುಡುಗಿ. ಒಂದಿಷ್ಟು ಹಾಸ್ಯ ನಾಯಕನ ಎಂಟ್ರಿಗೆ ಭರ್ಜರಿ ಹೊಡೆದಾಟ.ನಾಯಕ, ನಾಯಕಿ ನಡುವೆ ಮುಸುಕಿನ ಗುದ್ದಾಟ ಈ ನಡುವೆಯೇ ಮತ್ತೊಬ್ಬ ನಾಯಕಿಯ ಪ್ರವೇಶ. ಕೊನೆಗೆ, ಅವಳಿಗೂ ದಕ್ಕದ ನಾಯಕ.ಕೊನೆಗೆ ನಾಯಕನ ಪರಿಸ್ಥತಿ ಯಾವ ಹಂತಕ್ಕೆ ತಲುಪುತ್ತೆ ಅನ್ನೋದೇ ಚಿತ್ರದ ಕಥಾಹಂದರ.

ನಿಜ ಜೀವನದಲ್ಲಿ ಸಂಭವಿಸಿದ ಘಟನೆಯೊಂದಕ್ಕೆ ಒಂದಿಷ್ಟು ಸಿನಿಮ್ಯಾಟಿಕ್ ಅಂಶಗಳನ್ನು ಸೇರಿಸಿ ಓ ಪ್ರೇಮವೇ ಚಿತ್ರದ ಕಥೆಯನ್ನು ರೂಪಿಸಲಾಗಿದೆ.ಯೆಸ್‘ಓ ಪ್ರೇಮವೇ’ ಸಿನಿಮಾ ಒಂದು ರೊಮ್ಯಾಂಟಿಕ್ ಲವ್ ಸೋರಿ. ಇಬ್ಬರು ನಾಯಕಿಯರ ನಡುವಿನ ಪ್ರೀತಿಯ ನವಿರಾದ ಕಥೆಯನ್ನು ಈ ಚಿತ್ರ ಒಳಗೊಂಡಿದ್ದು ಪಕ್ಕಾ ಫ್ಯಾಮಿಲಿ ಎಂಟ್ರಟೈನರ್ ಆಗಿದೆ.. ಚಿತ್ರದಲ್ಲಿ ಒಟ್ಟು5 ಹಾಡುಗಳಿದ್ದು ಕೇಳುಗರಿಗೆ ಇಷ್ಟವಾಗ್ತಿದೆ.ಜೊತೆಗೆ 5 ಸಾಂಗ್ಸ್ ಗಳು ಸಖತ್ ರಿಚ್ ಆಗಿ ಮೂಡಿ ಬಂದಿದ್ದು.ಪ್ರತಿ ಹಾಡುಗಳು ಕಲರ್ ಫುಲ್ ಆಗಿ ಮೂಡಿ ಬಂದಿದೆ. ಕೇಳುಗರಿಗೆ ಸಖತ್ ಕಿಕ್ ನೀಡ್ತಿರೋ ಓ ಪ್ರೇಮವೇಯ ಹಾಡುಗಳಿಗೆ ಜಯಂತ್ ಕಾಯ್ಕಿಣಿ, ಕವಿರಾಜ್, ಭರ್ಜರಿ ಚೇತನ್ ಗೀತ ಸಾಹಿತ್ಯಕ್ಕೆ ಸೋನು ನಿಗಂ, ಶ್ರೇಯ ಗೋಷಾಲ್, ವಿಜಯ ಪ್ರಕಾಶ್ ಟಿಪ್ಪು ಹಾಡಿದ್ದಾರೆ.ಎರಡು ಹಾಡುಗಳನ್ನು ಸ್ವಿಟ್ಜರ್ಲ್ಯಾಂಡ್‌ನಲ್ಲಿ ಚಿತ್ರೀಕರಿಸಲಾಗಿದೆ. ಓ ಪ್ರೇಮವೇ ಚಿತ್ರದಲ್ಲಿ ನಿರ್ದೇಶನದ ಜೊತೆಗೆ ಮನೋಜ್ ಕುಮಾರ್ ನಾಯಕ ನಟನಾಗಿಅದ್ಬುತವಾಗಿ ಕಾಣಿಸಿಕೊಂಡಿದ್ದು ನಿಕ್ಕಿ ಗಲ್ರಾಣಿ ಅಪೂರ್ವ ರೈ ನಾಯಕಿಯಾಗಿ ನಟಿಸಿದ್ದಾರೆ.ಇನ್ನೂಳಿದಂತೆರಂಗಾಯಣ ರಘು, ಸಾಧು ಕೋಕಿಲ, ಬುಲೆಟ್ ಪ್ರಕಾಶ್, ಪ್ರಶಾಂತ್ ಸಿದ್ದಿ ಹಾಗೂ ವಿಶೇಷ ಪಾತ್ರದಲ್ಲಿ ಹುಚ್ಚ ವೆಂಕಟ್ ತಮ್ಮ ಪಾತ್ರವನ್ನಅಚ್ಚು ಕಟ್ಟಾಗಿ ಅಭಿನಯಿಸಿದ್ದಾರೆ.

ಒಂಭತ್ತು ವರ್ಷಗಳ ನಂತ್ರ ನಟ ಮನೋಜ್ ಕುಮಾರ್ ನಿರ್ದೇಶಿಸಿ ನಟಿಸಿರೋ ಸಿನಿಮಾ ಓ ಪ್ರೇಮವೇಗೆ ಸಿ.ಟಿ ಚಂಚಲ ಕುಮಾರ್ ಹಣ ಹೂಡಿದ್ದಾರೆ..ರಾಜ್ಯಾದ್ಯಂತ 90ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ರಿಲೀಸ್ ಆಗಿರೋ ಓ ಪ್ರೇಮವಾಗೆ ಕಿರಣ್ ಹಂಪಾಪುರ ಛಾಯಾಗ್ರಹಣವಿದ್ದು,ಈ ಚಿತ್ರ ಮನೋರಂಜನೆಯ ರಸದೌತಣ ನೀಡೋದ್ರಲ್ಲಿ ಡೌಟೇ ಇಲ್ಲ.

Sponsored :

Related Articles