ಸಿಂಪಲ್​ ಬ್ಯೂಟಿಯ ಸಖತ್​​ ಪೋಟೋಶೂಟ್​! ಕಿಕ್ಕೇರಿಸುವ ಪೋಟೋ ಕಂಡು ದಂಗಾದ ಸ್ಯಾಂಡಲ್​ವುಡ್​​!!

9419
9900071610

ಕನ್ನಡ ಚಿತ್ರರಂಗದಲ್ಲಿ ನಿಧಾನವಾಗಿ ಉತ್ತುಂಗಕ್ಕೇರುತ್ತಿರೋ ನಟಿ ಆಶಿಕಾ ರಂಗನಾಥ್​.. ತನ್ನ ಮುದ್ದಾದ ಚೆಲುವಿನಿಂದಲೇ ಹುಡುಗರ ಹಾರ್ಟ್​ ಕದ್ದಿರೋ ಸುಂದರಿ ಈಕೆ.. ಆಶಿಕಾ ಒಂದೇ ಒಂದು ಮುಗುಳು ನಗೆ ಬೀರಿದ್ರೆ ಫ್ಯಾನ್​ಗೆ ಅದೇನೋ ಮನೋಲ್ಲಾಸ.. ಇದೀಗ ಈ ಸಿಂಪಲ್​ ಬ್ಯೂಟಿ ಹೊಸ ಫೋಟೋ ಶೂಟ್​ ಮಾಡಿಸಿದ್ದಾರೆ.. ಅದರ ಝಲಕ್ ಇಲ್ಲಿದೆ..

ad


ಸ್ಯಾಂಡಲ್​ವುಡ್​​ನಲ್ಲಿ ಆಶಿಕಾಗೆ ದೊಡ್ಡ ಅಭಿಮಾನಿ ಬಳಗ ಇದೆ. ಸಿನಿಮಾದಿಂದ ಸಿನಿಮಾಕ್ಕೆ ವಿಭಿನ್ನವಾಗಿ ಕಾಣಿಸಿಕೊಳ್ಳೋ ಆಶಿಕಾ ಕ್ರೇಜಿ ಹುಡುಗಿ.. ಈ ಕ್ರೇಜಿ ಬ್ಯೂಟಿ ಈಗ ಹೊಸ ಫೋಟೋ ಶೂಟ್​ ಮಾಡಿಸಿದ್ದಾರೆ.

ಆಶಿಕಾ ಎಲ್ಲಾ ಕಾಸ್ಟ್ಯೂಮ್​ನಲ್ಲು ಸೊಗಸಾಗಿ ಕಾಣಿಸ್ತಾರೆ. ವೆಸ್ಟರ್ನ್​ ಆಗಿರ್ಲಿ ಮಾಡ್ರನ್ ಆಗಿರ್ಲಿ ಆಶಿಕಾ ಬ್ಯೂಟಿಗೆ ಆ ಡ್ರೆಸ್ಸೇ ಕರಗಿ ಹೊಗುತ್ತೆ. ಈ ಫೋಟೋ ಶೂಟ್​ನಲ್ಲಿ ಆಶಿಕಾ ಕಲರ್​ಫುಲ್​ ಕಾಸ್ಟ್ರೂಮ್​ ತೊಟ್ಟು ಮಸ್ತ್​ ಮಸ್ತ್​ ಪೋಸ್​ ಕೊಟ್ಟಿದ್ದಾರೆ.

ಆಶಿಕಾ ಫೋಟೋ ಶೂಟ್​ ನೋಡ್ತಿದ್ರೆ ಟ್ರೆಂಡಿ ಅನ್ನಿಸುತ್ತೆ. ಸಾಮಾನ್ಯವಾಗಿ ನಾಯಕಿಯರು ಆರು ತಿಂಗಳಿಗೆ ಒಮ್ಮೆಯಾದ್ರು ಒಂದು ಫೋಟೋ ಶೂಟ್ ಮಾಡಿಸ್ತಾರೆ. ಹಾಗೆ ಈ ಕೇಜಿ ಬ್ಯೂಟಿ ಕೂಡ ತನ್ನ ಖರಿಯರ್​ ಗ್ರೋತ್​​ಗೆ ಈಗ ಸ್ಪೆಷಲ್ ಫೋಟೋ ಶೂಟ್ ಮಾಡಿಸಿದ್ದಾರೆ.

ಮೂರ್ನಾಲ್ಕು ಕಾಸ್ಟ್ಯೂಮ್​ನಲ್ಲಿ ಆಶಿಕಾ ಸ್ಲೋಮೋಶನ್​ ಪೋಸ್​ ಕೊಟ್ಟಿದ್ದಾರೆ. ಹಾಟ್​ ಅವತಾರ ಇಲ್ಲದಿದ್ರೂ ನೋಡುಗರಿಗೆ ಸೈಲೆಂಟ್​ ಆಗಿಯೇ ಕಿಕ್ಕೇರಿಸುತ್ತೆ. ಈ ಫೋಟೋಶೂಟ್​ ವೀಡಿಯೋ ಈಗ ವೈರಲ್​ ಆಗ್ತಿದೆ.


ಆಶಿಕಾ ರಂಗನಾಥ್​ ಅಪ್ಪಟ ಕನ್ನಡ ಚೆಲುವೆ.. ಹಾಸನದಲ್ಲಿ ಹುಟ್ಟು ತುಮಕೂರಿನಲ್ಲಿ ಬೆಳೆದ ಹೆಣ್ಣುಮಗಳು. ಮನೆಮಗಳ ಲುಕ್​ ಇರೋ ಆಶಿಕಾ ಈಗ ಕನ್ನಡ ಸಿನಿಮಾ ರಂಗದಲ್ಲಿ ಮಿಂಚುತ್ತಿರೋ ಬ್ಯೂಟಿ. ಕ್ರೇಜಿ ಬಾಯ್​ ಚಿತ್ರದಿಂದ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ನಟಿ.

ಆಶಿಕಾ ಇದುವರೆಗೂ ನಟಿಸಿದ ಎಲ್ಲ ಚಿತ್ರಗಳಲ್ಲಿ ಸೈಲಂಟ್‌, ಟ್ರಡೀಷನಲ್‌ ಹಾಗೂ ಡಿ ಗ್ಲಾಮ್‌ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ರು. ಈಗ ಈ ಫೋಟೋ ಶೂಟ್ ನೋಡ್ತಿದ್ರೆ ಮುಂಬರೋ ಸಿನಿಮಾಗಲಲ್ಲಿ ಟ್ರೆಂಡಿಯಾಗಿ ಮಿಂಚಲಿದ್ದಾರೆ ಅನ್ನಿಸುತ್ತೆ..

Sponsored :


9900071610