ಸಾರಾ ಅಲಿ ಖಾನ್ ತಮ್ಮ ಚಿಕ್ಕಮ್ಮ ಕರೀನಾ ಕಪೂರ್​ ಬಗ್ಗೆ ಏನಂದ್ರು ಗೊತ್ತಾ?! ಸಂದರ್ಶನದಲ್ಲಿ ಹೊರಬಿತ್ತು ಅಚ್ಚರಿ ಹೇಳಿಕೆ!!

3840

ಎಲ್ಲ ನಟಿಯರಿಗೆ ಮನೆ ಹೊರಗೆ ಕಾಂಪಿಟೀಟರ್​ ಇದ್ದರೇ, ಬಾಲಿವುಡ್ ನ ಕ್ಯೂಟ್ ಡಾಲ್, ನಟಿ ಸಾರಾ ಅಲಿ ಖಾನ್ ಗೆ ಮನೆಯಲ್ಲೇ ಪ್ರತಿ ಸ್ಪರ್ಧಿಯಿದ್ದಾರೆ. ಇದ್ಯಾರು ಮನೆಯಲ್ಲಿರೋ  ಪ್ರತಿಸ್ಪರ್ಧಿ ಅಂದ್ರಾ….ಅದು ಮತ್ಯಾರು ಅಲ್ಲ, ಸಾರಾ ಅಲಿ ಖಾನ್ ಚಿಕ್ಕಮ್ಮ ಹಾಗೂ ಬಾಲಿವುಡ್​ ಬೇಬೋ  ಕರಿನಾ ಕಪೂರ್​.

 

ad

ಇಷ್ಟಕ್ಕೂ ಒಂದೇ ಮನೆಯಲ್ಲಿರೋ ಈ ಇಬ್ಬರು ಬಾಲಿವುಡ್​ ಬೆಡಗಿಯರು ಪರಸ್ಪರ ಹೇಗಿದ್ದಾರೆ? ಯಾವ ತರದ ಬಾಂಧವ್ಯ ಹೊಂದಿದ್ದಾರೆ ಅನ್ನೋ  ಅನುಮಾನ ಕಾಡುತ್ತಿರುತ್ತೆ. ಇಂತಹ ಪ್ರಶ್ನೆಗಳು ಸಾರಾ ಅಲಿ ಖಾನ್​ಗೆ ಆಗಾಗ ಎದುರಾಗುತ್ತಿರುತ್ತಂತೆ. ಇತ್ತೀಚಿಗೆ ಸಂದರ್ಶನದಲ್ಲಿ ಎದುರಾದ ಪ್ರಶ್ನೆಗೆ ಸಾರಾ ಅಲಿ ಖಾನ್​ ಅಚ್ಚರಿಯ ಉತ್ತರವೊಂದನ್ನು ನೀಡಿದ್ದಾರೆ.

 

 

 

ಸಾರಾ,  ನಿಮಗೆ ಕರೀನಾ ಬಗ್ಗೆ ಏನನ್ನಿಸುತ್ತೆ ಅನ್ನೋ ಪ್ರಶ್ನೆಗೆ,  ಕರೀನಾ ನನಗೆ ಫ್ರೆಂಡ್, ಅದಕ್ಕಿಂತ ಹೆಚ್ಚಾಗಿ ತನ್ನ ತಂದೆಯ ಪತ್ನಿ ಅಷ್ಟೇ. ನಾನು ಅವರನ್ನು ಗೌರವಿಸುತ್ತೇನೆ. ಅಲ್ಲದೆ ಅವರು ನನ್ನ ತಂದೆಯನ್ನು ಖುಷಿಯಾಗಿ ನೋಡಿಕೊಳ್ಳುತ್ತಾರೆ. ನಾನು ಹಾಗೂ ಕರೀನಾ ಒಂದೇ ವೃತ್ತಿಯಲ್ಲಿ ಇರುವ ಕಾರಣ ನಮ್ಮ ಪ್ರಪಂಚವೊಂದೇ ಎಂದು ಹೇಳಿದ್ದಾರೆ.

ಅಲ್ಲದೇ ಕಳೆದ ವರ್ಷ ಸಾರಾ ಖ್ಯಾತ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ನನ್ನ ತಾಯಿಯೇ ಅಪ್ಪನ ಮತ್ತೊಂದು ಮದುವೆಗೆ ರೆಡಿ ಮಾಡಿದ್ದರು ಎಂದು ಹೇಳಿದ್ದರು.

 

ಕರೀನಾ ಕೂಡಾ ಸಾರಾ ಗೆ ಒಬ್ಬ ಉತ್ತಮ ಸ್ನೇಹಿತಯಾಗಿ ಇರಲು ಬಯಸುತ್ತಾರಂತೆ. ಅಲ್ಲದೇ ನಿಮಗೆ ಈಗಾಗಲೇ ಅದ್ಭುತ ತಾಯಿ ಸಿಕ್ಕಿದ್ದಾರೆ. ನಾನು ನಿಮ್ಮ ಒಳ್ಳೆಯ ಸ್ನೇಹಿತೆ ಆಗಲು ಸಾಧ್ಯ ಎಂದು ಸ್ವತಃ ಕರೀನಾ ಹೇಳಿದ್ದಾರಂತೆ. ಇನ್ನು ಸಾರಾ ಕರೀನಾಳನ್ನ ಚೋಟಿ ಮಾ (ಚಿಕ್ಕ ಅಮ್ಮ) ಎಂದು ಕರೆದರೆ ಅವರು ಹಾಗೆ ಕರೆಯಬೇಡ ಎಂದು ಹೇಳುತ್ತಾರಂತೆ.

ಇನ್ನು ಸೈಫ್ ಅಲಿ ಖಾನ್, ಅಮೃತ ಸಿಂಗ್ ಜೊತೆ ವಿಚ್ಚೇದನವಾದ ಬಳಿಕ ಕರೀನಾ ಕಪೂರ್​ನನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಈ ಜೋಡಿಗೆ ಪ್ರೀತಿಯ ಸಂಕೇತವಾಗಿ ತೈಮೂರ್ ಎಂಬು ಮುದ್ದಾದ ಒಂದು ಗಂಡು ಮಗು ಕೂಡಾ ಇದೆ.

Sponsored :

Related Articles