ಜಾರಕಿ”ಹೋಳಾದ” ಕಾಂಗ್ರೆಸ್ ಜೊತೆಗಿನ ಸಾಹುಕಾರ್ ಸಂಬಂಧ !! ಕಾಂಗ್ರೆಸ್ ಗೆ ಗುಡ್ ಬೈ ಹೇಳಲಿದ್ದಾರೆಯೇ ಸತೀಶ್ ಜಾರಕಿಹೋಳಿ !!

2579
Satish Jarkiholi
Satish Jarkiholi

ಬೆಳಗಾವಿ ಕಾಂಗ್ರೆಸ್ ಕಾರ್ಯಕರ್ತರ ಪಾಲಿನ ಸಾಹುಕಾರ್ ಆಗಿರುವ ಸತೀಶ್ ಜಾರಕಿಹೋಳಿಯವರು ಕಾಂಗ್ರೆಸ್ ಗೆ ಗುಡ್ ಬೈ ಹೇಳಲಿದ್ದಾರೆಯೇ ?

 

ad

ಇವತ್ತಿನ ರಾಜಕೀಯ ಬೆಳವಣಿಗೆಗಳು ಇಂತದ್ದೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ. ಎಐಸಿಸಿ ಕಾರ್ಯದರ್ಶಿಯಾಗಿರುವ ಸತೀಶ್ ಜಾರಕೀಹೋಳಿ ನಾಳೆ ಪ್ರಮುಖ ಕಾಂಗ್ರೆಸ್ ಮುಖಂಡರ ಸಭೆಯನ್ನು ಬೆಳಗಾವಿಯಲ್ಲಿ ಕರೆದಿದ್ದಾರೆ. ಈ ಸಭೆಯನ್ನು ಅತೃಪ್ತರ ಸಭೆ ಎನ್ನಲಾಗುತ್ತಿದ್ದು, ನಾಳೆ ಸತೀಶ್ ಜಾರಕೀಹೋಳಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆಯನ್ನು ಪ್ರಕಟ ಮಾಡಲಿದ್ದಾರೆ ಎನ್ನಲಾಗಿತ್ತು. ಸತೀಶ್ ಜಾರಕಿಹೋಳಿಯವರು ಕಾಂಗ್ರೆಸ್ ಜೊತೆ ಅತೃಪ್ತಿಯನ್ನು ಹೊಂದಿದ್ದಾರೆ ಎಂದು ಬಹಿರಂಗಗೊಳ್ಳುತ್ತಿದ್ದಂತೆ ಜೆಡಿಎಸ್ ಮುಖಂಡರು ಜಾರಕಿಹೋಳಿಯವರನ್ನು ಸಂಪರ್ಕಿಸಿದ್ದಾರೆ. ಯಾವುದೇ ಪಕ್ಷಕ್ಕೆ ಯಾವುದೇ ಆಶ್ವಾಸನೆ ನೀಡದ ಜಾರಕಿಹೋಳಿ, ನಾಳೆ ಆಪ್ತರ ಸಭೆಯಲ್ಲಿ ನಿರ್ಧರಿಸುವ ತೀರ್ಮಾನಕ್ಕೆ ಬಂದಿದ್ದಾರೆ.

 

ಸತೀಶ್ ಜಾರಕಿಹೋಳಿ ಸಭೆ ವಿಚಾರ ಕಾಂಗ್ರೆಸ್ ಪಕ್ಷಕ್ಕೆ ತಿಳಿಯುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಕರೆದು ಚರ್ಚಿಸಿದ್ದಾರೆ. ಸುಮಾರು ಒಂದು ಗಂಟೆಗಳ ಜಾರಕಿಹೋಳಿ ಜೊತೆ ಚರ್ಚೆ ನಡೆಸಿದ ಕೆ ಸಿ ವೇಣುಗೋಪಾಲ್, ಕೊನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರ ಜೊತೆಗೂ ಜಾರಕಿಹೋಳಿಯವರನ್ನು ಕೂರಿಸಿ ಸಭೆ ನಡೆಸಿದ್ದಾರೆ. ಇಂದು ಬೆಳಿಗ್ಗಿನಿಂದ ಸಂಜೆಯವರೆಗೆ ಇಷ್ಟೆಲ್ಲಾ ಬೆಳವಣಿಗೆಗಳು ನಡೆದವು.

 

ಸತೀಶ್ ಜಾರಕಿಹೋಳಿಯವರು ಕಾಂಗ್ರೆಸ್ ಪಕ್ಷದೊಳಗಿರುವ ವೈಚಾರಿಕ ಹಿನ್ನಲೆಯ ಬುದ್ದಿಜೀವಿ. ಮಾತು, ಭಾಷಣ ಕಡಿಮೆ. ಆದರೆ ಜನರಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸುವಲ್ಲಿ ಪಕ್ಷದ ಚೌಕಟ್ಟಿನ ಆಚೆಗೆ ಬಂದು ವ್ಯಾಪಕ ಕೆಲಸ ಮಾಡುತ್ತಿದ್ದಾರೆ. ಇದೇ ಕಾರಣಕ್ಕಾಗಿ ರಾಜ್ಯದ ಪ್ರಗತಿಪರ ಮಠಾಧೀಶರು, ಬುದ್ದಿಜೀವಿಗಳು ಸತೀಶ್ ಜಾರಕಿಹೋಳಿ ಜೊತೆಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಆಪ್ತರ ಗುಂಪು 2013 ರಲ್ಲಿ ಗೆಲ್ಲಲು ಮುಖ್ಯ ಕಾರಣ ಸತೀಶ್ ಜಾರಕಿಹೋಳಿ. ಸಚಿವನಾಗೋದರ ಮೂಲಕ ಶೋಷಿತರಿಗೆ ಏನಾದರೂ ಮಾಡಬೇಕು ಎಂದುಕೊಂಡು ಸಮಾಜ ಕಲ್ಯಾಣ ಇಲಾಖೆಯನ್ನು ಕೇಳಿದ್ದರು. ಆದರೆ ಹಣ ಹರಿದುಬರುವ ಅಬಕಾರಿ ಇಲಾಖೆಯನ್ನು ನೀಡಲಾಗಿತ್ತು. ಮದ್ಯದ ವ್ಯವಹಾರವನ್ನು ಬಿಟ್ಟಿದ್ದ ಸತೀಶ್ ಜಾರಕಿಹೋಳಿಗೆ ಹಣ ಮಾಡುವ ಉದ್ದೇಶ ಇಲ್ಲದೇ ಇದ್ದಿದ್ದರಿಂದ ಅಬಕಾರಿ ಖಾತೆಗೆ ರಾಜೀನಾಮೆ ನೀಡಿದ್ದರು. ನಂತರ ಅವರಿಗೆ ಸಣ್ಣ ಕೈಗಾರಿಕೆಗಳ ಖಾತೆ ನೀಡಲಾಗಿತ್ತು. ಅದಕ್ಕೂ ರಾಜೀನಾಮೆ ಶಾಸಕರಾಗಿ ರಾಜ್ಯಾಧ್ಯಂತ ವೈಚಾರಿಕ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ನಿರತರಾಗಿದ್ದರು.

ಮಾನವ ಬಂಧುತ್ವ ವೇದಿಕೆಯನ್ನು ಸ್ಥಾಪಿಸಿದ್ದ ಸತೀಶ್ ಜಾರಕಿಹೋಳಿ ರಾಜ್ಯಾಧ್ಯಂತ ಕಾರ್ಯಕರ್ತರ ಪಡೆಯನ್ನು ಹೊಂದಿದ್ದಾರೆ. ಕಾಂಗ್ರೆಸ್ ನಲ್ಲಿ ಅಂತಹ ಚಟುವಟಿಕೆಗಳಿಗೆ ಪೂರಕ ವಾತಾವರಣವಿಲ್ಲ ಎಂಬುದು ಸತೀಶ್ ಜಾರಕಿಹೋಳಿ ನೋವು.

ಸದ್ಯ ಸತೀಶ್ ಜಾರಕಿಹೋಳಿ ತನ್ನ ಮುಂದಿನ ರಾಜಕೀಯ ನಡೆಯ ಬಗ್ಗೆ ಆಪ್ತರ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ

Sponsored :

Related Articles