ಗ್ರಾಹಕರಿಗೆ ಎಸ್​ಬಿಐ ಶಾಕ್​- ಎಟಿಎಂ ಡ್ರಾ ಮಿತಿ 40 ರಿಂದ 20 ಕ್ಕೆ ಇಳಿಕೆ!

920
9900071610

 

ad

ಈಗಾಗಲೇ ಎಟಿಎಂಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಣ ಸಿಗುತ್ತಿಲ್ಲ ಎಂಬ ಗ್ರಾಹಕರ ದೂರಿನ ನಡುವೆಯೇ ಎಸ್​ಬಿಐ ಸಮೂಹದ ಬ್ಯಾಂಕ್​​ಗಳು ಗ್ರಾಹಕರಿಗೆ ಶಾಕ್ ನೀಡಿದೆ. ಎಸ್​ಬಿಐ ಸಮೂಹ ಬ್ಯಾಂಕ್​ಗಳು ತಮ್ಮ ಎಟಿಎಂ ಹಣ ಡ್ರಾ ಮಿತಿ ಇಳಿಕೆಗೊಳಿಸಿದ್ದು, ಗ್ರಾಹಕರಿಗೆ ಶಾಕ್ ನೀಡಿದೆ.
ಇನ್ನು ಮುಂದೇ ಎಸ್​ಬಿಐ ಸಮೂಹದ ಎಟಿಎಂಗಳಲ್ಲಿ ದಿನವೊಂದಕ್ಕೆ ಕೇವಲ 20 ಸಾವಿರ ರೂಪಾಯಿ ಮಾತ್ರ ಡ್ರಾ ಮಾಡಬಹುದಾಗಿದೆ. ಇದುವರೆಗೂ 40 ಸಾವಿರ ಇದ್ದ ವಿತ್​ ಡ್ರಾ ಮಿತಿ ಇದೀಗ 20 ಸಾವಿರಕ್ಕೆ ಇಳಿಕೆಯಾಗಿದ್ದು, ಇದರಿಂದ ವ್ಯಾಪಾರಸ್ಥರಿಗೆ ಸಮಸ್ಯೆ ಉಂಟಾಗಲಿದೆ.

ಡಿಜಿಟಲ್​ ಬ್ಯಾಂಕಿಂಗ್​ಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹೀಗೆ ಎಟಿಎಂನಿಂದ ಡ್ರಾ ಮಿತಿಯನ್ನು ಕಡಿತಗೊಳಿಸಲಾಗಿದೆ ಎಂದು ಎಸ್​ಬಿಐ ಹೇಳಿದೆ. ಅಕ್ಟೋಬರ್​ 31 ರಿಂದ ಈ ನಿಯಮ ಜಾರಿಗೆ ಬರಲಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜಾರಿಗೆ ಬರುವ ಈ ನಿಯಮ ಸಾರ್ವಜನಿಕರ ಹಬ್ಬದ ಶಾಪಿಂಗ್​ ಮೇಲೆ ಕಡಿವಾಣ ಹಾಕೋದಂತು ಗ್ಯಾರಂಟಿ.

Sponsored :


9900071610