ಬಿಜೆಪಿ ಒತ್ತಡಕ್ಕೆ ಮಣಿದ ಸ್ಪೀಕರ್​! ಅಧಿವೇಶನ ಗುರುವಾರಕ್ಕೆ ಮುಂದೂಡಿಕೆ! ಸರ್ಕಾರ ಉಳಿಸಲು ಕೊನೆ ಸರ್ಕಸ್​ ಆರಂಭ!!

447
9900071610

ಸರ್ಕಾರದ ವಿಶ್ವಾಸಮತ ಯಾಚನೆಗೆ ಗುರುವಾರ ಸಮಯಾವಕಾಶ ನಿಗದಿಯಾದ ಬೆನ್ನಲ್ಲೇ, ವಿರೋಧ ಪಕ್ಷಗಳ ಒತ್ತಾಯಕ್ಕೆ ಮಣಿದ ಸ್ಪೀಕರ್ ರಮೇಶ್ ಕುಮಾರ್ ವಿಧಾನಸಭೆ ಅಧಿವೇಶನವನ್ನು ಗುರುವಾರಕ್ಕೆ ಮುಂದೂಡಿದ್ದಾರೆ.

ad


ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆಗೆ ಸಮಯಾವಕಾಶ ಕೋರಿದ ಬೆನ್ನಲ್ಲೇ, ಕಲಾಪ ಸಲಹಾ ಸಮಿತಿ ಸಭೆ ನಡೆಸಿದ ಸ್ಪೀಕರ್ ವಿರೋಧ ಪಕ್ಷದ ನಾಯಕರ ಸಮ್ಮುಖದಲ್ಲಿ ವಿಶ್ವಾಸಮತಯಾಚನೆಗೆ ಮುಹೂರ್ತ ನಿಗದಿ ಪಡಿಸಿದರು. ಈ ವೇಳೆ ಬಿಎಸ್​ವೈ ಸಿಎಂ ಕುಮಾರಸ್ವಾಮಿ ಇಂದೇ ವಿಶ್ವಾಸಮತ ಯಾಚಿಸಬೇಕೆಂದು ಪಟ್ಟು ಹಿಡಿದರು.


ಆದರೆ ಬಿಎಸ್​ವೈ ಮನವೊಲಿಸಿದ ಸ್ಪೀಕರ್ ರಮೇಶ್ ಕುಮಾರ ನಾಳೆ ಸುಪ್ರೀಂ ಕೋರ್ಟ್​ ತೀರ್ಪಿನ ಬಳಿಕ ವಿಶ್ವಾಸಮತಕ್ಕೆ ಅವಕಾಶ ಕಲ್ಪಿಸೋಣ ಎಂದು ಸಮಾಧಾನಿಸಿದರು. ಅಲ್ಲದೇ ಗುರುವಾರ 11 ಗಂಟೆಗೆ ವಿಶ್ವಾಸಮತ ಯಾಚನೆಗೆ ಅವಕಾಶ ಕಲ್ಪಿಸಿದ್ದಾರೆ.
ಇನ್ನು ವಿಶ್ವಾಸಮತಯಾಚನೆಗೆ ಸಮಯಾವಕಾಶ ನಿಗದಿಯಾಗುತ್ತಿದ್ದಂತೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ನಾಯಕರು, ಸರ್ಕಾರ ಬಹುಮತ ಕಳೆದುಕೊಂಡಿದೆ. ಹೀಗಿರುವಾಗ ಅಧಿವೇಶನ ನಡೆಸುವುದು ಮತ್ತು ಆಡಳಿತ ಯಂತ್ರವನ್ನು ಚಲಾಯಿಸುವುದು, ಮಸೂದೆಗಳನ್ನು ಅಂಗೀಕರಿಸುವುದು, ನಿರ್ಣಯಕೈಗೊಳ್ಳುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.


ಹೀಗಾಗಿ ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದ ಸ್ಪೀಕರ್ ರಮೇಶ್ ಕುಮಾರ್ ಅಧಿವೇಶನವನ್ನು ಗುರುವಾರಕ್ಕೆ ಮುಂದೂಡಿದ್ದಾರೆ. ಇದರಿಂದ ಆಡಳಿತದಲ್ಲಿರುವ ಮೈತ್ರಿ ಸರ್ಕಾರಕ್ಕೆ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳುವ ಕಸರತ್ತಿಗೆ ಎರಡು ದಿನದ ಕಾಲಾವಕಾಶ ಸಿಕ್ಕಂತಾಗಿದೆ.

Sponsored :


9900071610