ಬಿಜೆಪಿಗೂ ರೆಡ್ಡಿಗೂ ಸಂಬಂಧ ಇಲ್ಲ ಅಂದ್ರು ಶಾ – ಬಿಜೆಪಿ ಕಾರ್ಯಕ್ರಮದಲ್ಲಿ ಸಕ್ರಿಯರಾದ್ರು ರೆಡ್ಡಿ- ಬಿಜೆಪಿಯಲ್ಲಿ ನಡಿತಿರೋದೇನು?

4440

 

ಒಂದೆಡೆ ಬಿಜೆಪಿಯಲ್ಲಿ ಅಸಮಧಾನ ಭುಗಿಲೆಳುತ್ತಿದ್ದರೇ ಇನ್ನೊಂದೆಡೆ ಬಿಜೆಪಿಯಲ್ಲೇ ಬಿಜೆಪಿ ನಾಯಕರ ಮಾತಿಗೆ ಬೆಲೆ ಇಲ್ವಾ ಅನ್ನೋ ಅನುಮಾನ ಸೃಷ್ಟಿಯಾಗಿದೆ. ಹೌದು ಅವತ್ತು ಕರ್ನಾಟಕಕ್ಕೆ ಬಂದಿದ್ದ ಬಿಜೆಪಿ ಚುನಾವಣಾ ಚಾಣಾಕ್ಯ ಅಮಿತ್ ಶಾ ಬಿಜೆಪಿಗೂ ಜನಾರ್ಧನ ರೆಡ್ಡಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದರು. ಆದರೇ ಇದೀಗ ಶ್ರೀರಾಮುಲು ನಾಮಿನೇಶನ್​ ವೇಳೆ ರೆಡ್ಡಿಯೇ ನಾಯಕತ್ವ ವಹಿಸಿದ್ದು, ಬಿಜೆಪಿಯವರು ಹೇಳುವುದು ಒಂದು ಮಾಡುವುದು ಇನ್ನೊಂದು ಎಂಬ ಮಾತಿಗೆ ಪುಷ್ಠಿ ಸಿಕ್ಕಂತಾಗಿದೆ.

ad

ಹೌದು ಇಂದು ಚಿತ್ರದುರ್ಗದ ಮೊಳಕಾಲ್ಮೂರಿನಲ್ಲಿ ಶ್ರೀರಾಮುಲು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು. ಆದರೇ ವೇಳೆ ಬಿಜೆಪಿ ನಾಯಕರ ಜೊತೆ ಜನಾರ್ಧನ್ ರೆಡ್ಡಿ ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಶ್ರೀರಾಮುಲು ಗೆಲ್ಲಿವುಸುವುದೇ ನನ್ನ ಗುರಿ ಎಂದಿದ್ದ ಜನಾರ್ಧನ್ ರೆಡ್ಡಿ, ಶ್ರೀರಾಮುಲು ಪರ ಪ್ರಚಾರ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಬಿಎಸ್​ವೈ ಜೊತೆ ವೇದಿಕೆಯನ್ನು ಹಂಚಿಕೊಂಡಿದ್ದಾರೆ. ಅಂದು ಶಾ ಬಹಿರಂಗವಾಗಿಯೇ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಘಂಟಾಘೋಷವಾಗಿ ಹೇಳಿದ್ದರು. ಆದರೂ ರೆಡ್ಡಿ ಬಿಜೆಪಿಯ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ತಿರೋದು ಶಾ ಮಾತಿಗೂ ಬಿಜೆಪಿಯಲ್ಲಿ ಬೆಲೆ ಇಲ್ಲವಾ ಅನ್ನೋ ಅನುಮಾನ ಮೂಡಿಸಿದೆ.
ಮುಖ್ಯಮಂತ್ರಿಯಾಗುವ ಕನಸಿನಲ್ಲಿ ಶಾ-ಮೋದಿ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುತ್ತಿರುವ ಬಿಎಸ್​ವೈ, ಅದ್ಯಾಕೆ ಈ ವಿಚಾರದಲ್ಲಿ ಹೈಕಮಾಂಡ್​ ಆಜ್ಞೆ ಮೀರಿ ನಡೆಯುತ್ತಿದ್ದಾರೆ? ಹೈಕಮಾಂಡ್​ಗೆ ಬೇಡವಾದ ಜನಾರ್ಧನ ರೆಡ್ಡಿ ರಾಜ್ಯ ಬಿಜೆಪಿಗೆ ಅನಿವಾರ್ಯವೇ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.

 

 

Sponsored :

Related Articles