ಬಿಟಿವಿಯ ಪ್ರಧಾನ ನಿರೂಪಕ ಶೇಷಕೃಷ್ಣಗೆ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ

258

ಹರ್ಮನ್ ಮೊಗ್ಲಿಂಗ್ ಪ್ರಶಸ್ತಿಯನ್ನ ಮುಂದಿನ ದಿನದಲ್ಲಿ ಸರಕಾರದಿಂದಲೆ ನೀಡುವಂತಾಗಬೇಕು ಎಂದು ಪ್ರಶಸ್ತಿ ಸ್ವೀಕರಿಸಿದ ಶೇಷಕೃಷ್ಣ ಅಭಿಪ್ರಾಯ ಪಟ್ಟಿದ್ದಾರೆ.

ಅವರು ಕಾರವಾರದಲ್ಲಿ ಪತ್ರಿಕಾ ದಿನಾಚರಣೆಯಂದು ಕರ್ನಾಟಕ ಜರ್ನಲಿಸ್ಟ್ ಯೂನಿಯ್ ನೀಡುವ ರಾಜ್ಯಮಟ್ಟದ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ ಸ್ವೀಕರಿಸಿ ಮಾತ್ನಾಡಿದ್ದರು. ನಿಜಕ್ಕೂ ಇಂದು ಕಾರವಾರದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸರಕಾರ ಮಾಡಬೇಕಾಗಿರುವ ಅದ್ಬುತ ಕೆಲಸವನ್ನ ಮಾಡತ್ತಾ ಇದೆ. ಇಂದು ನಾವೇಲ್ಲಾ ಮಾಧ್ಯಮ ಕ್ಷೇತ್ರದಲ್ಲಿ ಇದ್ದೇವೆ ಅಂದ್ರೆ ಅದಕ್ಕೆಲ್ಲಾ ಮೂಲಕ ಕಾರಣರಾಗಿರೋದು ಹರ್ಮನ್ ಮೊಗ್ಲಿಂಗ್.. ಅವರು ಅಂದು ಹುಟ್ಟುಹಾಕಿದ ಮಾಧ್ಯಮ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಆದ್ರೆ ಇಂದೂ ಯಾರು ಸಹ ಅವರ ನೆನಪು ಮಾಡಿಕೊಂಡಿಲ್ಲ. ಆದ್ರೆ ಆ ಮಾಹಾನ್ ನಾಯಕನನ್ನ ಇಂದು ಕಾರವಾರದಲ್ಲಿ ನೆನಪಿಸಿಕೊಂಡು ಅವರದೇ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವು ಸಂತೋಷವನ್ನ ತಂದಿದೆ ಎಂದ್ರು.

ad

ಇನ್ನೂ ಮಾಧ್ಯಮದಲ್ಲಿ ಕೆಲಸ ಮಾಡಬೇಕೇಂದ್ರ ಸುಲಭದ ಕೆಲಸವಲ್ಲ. ವರದಿಗಾರರಾದವರು ತುಂಬಾ ಜಾಗುರತಿಯಿಂದ ಕೆಲಸ ಮಾಡಬೇಕಾಗಿದೆ.ಪತ್ರಕರ್ತರಾದವರಿಗೆ ಬೇಗನೆ ಹೆಸರು ಬರತ್ತೆ. ಆದ್ರೆ ಅದನ್ನ ಉಳಿಸಿಕೊಳ್ಳುವುದು ತುಂಬಾ ಕಷ್ಟ.ಒಂದೇ ಒಂದು ಕಪ್ಪು ಚುಕ್ಕೆ ಬಂದ್ರೂ ಅನುಮಾನದ ದೃಷ್ಟಿಯಿಂದ ನೋಡತ್ತಾರೆ. ಸಮಾಜ ನಮ್ಮನ್ನ ನೋಡತ್ತಾ ಇರತ್ತೆ. ಪತ್ರಕರ್ತನಾದವನಿಗೆ ಮೈ ಎಲ್ಲಾ ಕಣ್ಣಾಗಿರಬೇಕು.

ಹಿಂದಿನ ಜರ್ನಲಿಸ್ಟ್ ಗಳಿಗೂ ಈಗಿನ ಜರ್ನಲಿಸ್ಟ್ ಗಳಿಗೂ ಭಾರೀ ಬದಲಾವಣೆ ಆಗಿದೆ.ಈಗ ಜರ್ನಲಿಸ್ಟ್ ಗಳನ್ನ ಹೀರೋಗಳ ತರಹ ನೋಡುತ್ತಾ ಇದ್ದಾರೆ. ಆದ್ರೆ ಯಾರು ಸಹ ಅದನ್ನ ದುರುಪಯೋಗ ಮಾಡಕೊಳ್ಳದ ರೀತಿಯಲ್ಲಿ ವರದಿಗಾರನಾದವರು ನೋಡಿಕೊಳ್ಳಬೇಕು ಎಂದ ಅವರು. ಹರ್ಮನ್ ಮೊಗ್ಲಿಂಗ್ ಬಗ್ಗೆ ಮುಂದಿನ ದಿನದಲ್ಲಿ ಅವರ ಪರಿಚಯವಾಗಬೇಕು ಅಂತಾ ಹೇಳಿದ್ರು.

ಇದೆ ಸಮಯದಲ್ಲಿ ಕಾರವಾರ ಕಾರ್ಯನಿರತ ಪತ್ರಕರ್ತರ ಸಂಘದಿಂದ, ಟಿ ವಿ 5 ನ್ಯೂಸ್ ನ ಶ್ರೀನಾಥ ಜೋಶಿ, ವಸಂತ ಭಟ್ ಕತಗಾಲ, ಪಾಂಡುರಂಗ ಹರಿಕಾಂತ ಅವರನ್ನ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ‌ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾಧ್ಯಕ್ಷ ಕಡತೋಕ ಮಂಜು, ಜಿಲ್ಲಾಧಿಕಾರಿ ಎಸ್ ಎಸ್ ನಕುಲ್, ಶಾಸಕಿ ರೂಪಾಲಿ ನಾಯ್ಕ, ಸುವರ್ಣ ನ್ಯೂಸ್ ಸಂಪಾದಕ ರವಿ ಹೆಗಡೆ. ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಟಿ ಬಿ ಹರಿಕಾಂತ ಹಾಜರಿದ್ದರು.

Sponsored :

Related Articles