ಎಲ್ಲಿದ್ದಿಯಮ್ಮ ರಮ್ಯ? ಎನ್ನುವ ಮೂಲಕ ಪದ್ಮಾವತಿಗೆ ಟಾಂಗ್ ನೀಡಿದ ಶಿಲ್ಪಾ ಗಣೇಶ್

2230
9900071610

ಸ್ಯಾಂಡಲ್ ವುಡ್ ನಟಿ ಹಾಗೂ ಕಾಂಗ್ರೆಸ್ ಸಾಮಾಜಿಕ ಜಾಲಾತಾಣ ಮುಖ್ಯಸ್ಥೆ ರಮ್ಯಾ ರವರಿಗೆ ನಟ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪ ಗಣೇಶ್ ರಮ್ಯಾ ಎಲ್ಲಿದಿಯಮ್ಮಾ ? ಎಲ್ಲಿ ನಿಮ್ಮ ಅಧ್ಯಕ್ಷ ರಾಹುಲ್ ? ಎಂದು ಟ್ವೀಟ್ ಮಾಡುವ ಮೂಲಕ ಟಾಂಗ್ ನೀಡಿದ್ದಾರೆ.

ad

ನಿನ್ನೆಯಷ್ಟೇ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ದೇಶದಾದ್ಯಂತ ಮೋದಿ ಅಲೆ ಎದ್ದಿದ್ದು, ಈ ಹಿಂದಿನ ಲೋಕಸಭಾ ಚುನಾವಣೆಗಿಂತ ಈ ಬಾರಿ ಭಾರತೀಯ ಜನತಾ ಪಾರ್ಟಿ ಪಕ್ಷದ ಗೆಲುವು ದೊಡ್ಡದಾಗಿಯೇ ಮೇಲು ಗೈ ಸಾಧಿಸಿದೆ. ಇನ್ನೂ ಹಲವು ರಾಜ್ಯದಲ್ಲಿಯೂ ಕಾಂಗ್ರೆಸ್ ಪಕ್ಷಕ್ಕೆ ಒಂದು ಸೀಟ್ ನನ್ನು ಬಿಟ್ಟು ಕೊಡದೆ ಗೆಲ್ಲುವ ಮೂಲಕ ಬಿಜೆಪಿ ಪಕ್ಷ ಜಯಭೇರಿ ಬಾರಿಸಿದ್ದು, ಭಾರತದಲ್ಲಿ ಮೋದಿ ಹೊಸ ಇತಿಹಾಸವನ್ನೆ ಸೃಷ್ಟಿ ಮಾಡಿದ್ದಾರೆ. ಜೊತೆಗೆ ಭಾರತೀಯ ಜನತೆ ಮತ್ತೊಮ್ಮೆ ನಮೋಗೆ ಜೈಕಾರ ಹಾಕಿದ್ದಾರೆ. ಈಗಾಗಲೇ ಮೋದಿ ಗೆಲುವಿಗೆ ದೇಶ ವಿದೇಶಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಅಲ್ಲದೆ ಮೋದಿ ಗೆಲುವನ್ನು ನಮೋ ವಿರೋಧಿಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ.

 

ಅಲ್ಲದೇ ಈ ಹಿಂದೆ ಹಲವು ಬಾರಿ ಪ್ರಧಾನಿ ಮೋದಿ ಕುರಿತು ಪದೇ ಪದೇ ಟ್ವೀಟ್ ಮಾಡುವ ಮೂಲಕ ಮೋದಿ ಕಾಲೆಳೆದು ಟೀಕೆಗಾರರ ಕೆಂಗಣ್ಣಿಗೆ ಗುರಿಯಾಗುತ್ತಿದ್ದ ಕಾಂಗ್ರೆಸ್ ವಕ್ತಾರೆ ರಮ್ಯಾ ಮೋದಿ ಗೆಲುವಿನ ಬಳಿಕ ಸದ್ದಿಲ್ಲದಂತೆ ಗಪ್ ಚುಪ್ ಆಗಿರುವುದನ್ನು ಕುರಿತು ಭಾರತೀಯ ಜನತಾ ಪಕ್ಷದ ಕಾರ್ಯಕರ್ತೆ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪ ಗಣೇಶ್ ಟ್ವೀಟ್ ಮಾಡುವ ಮೂಲಕ ಸಖತ್ ಟಾಂಗ್ ನೀಡಿದ್ದಾರೆ. ಸದ್ಯ ಈ ಟ್ವೀಟ್ ಈಗ ಎಲ್ಲೆಡೆ ವೈರಲ್ ಆಗಿದೆ.

ರಮ್ಯಾ ಎಲ್ಲಿದಿಯಮ್ಮಾ ? ಎಲ್ಲಿ ನಿಮ್ಮ ಅಧ್ಯಕ್ಷ ರಾಹುಲ್ ? ಎಲ್ಲಿ ನಿಮ್ಮ ಫೇಕ್ ಅಕೌಂಟ್ ಸೈನ್ಯ? ಎಲ್ಲಿ ನಿಮ್ಮ ತಲೆಬುಡವಿಲ್ಲದ ಟ್ವೀಟ್ಗಳು? ಎಲ್ಲೋಯ್ತು ನಿಮ್ಮ ಆಧಾರವಿಲ್ಲದ ಆರೋಪಗಳು? ಅದಕ್ಕೆ ಹೇಳೋದು ಇನ್ನೊಬ್ಬರ ಬಗ್ಗೆ ಆಪಾದನೆ ಮಾಡೋ ಮೊದಲು ತಮ್ಮ ಬಗ್ಗೆ ತಮಗೆ ತಿಳಿದಿರಬೇಕು. ಎಂದು ವ್ಯಂಗ ಮಾಡುವುದರ ಮೂಲಕ ಶಿಲ್ಪ ಗಣೇಶ್ ರಮ್ಯಾಗೆ ಟಾಂಗ್ ನೀಡಿದ್ದಾರೆ.

 

Sponsored :


9900071610