ವಿಶಾಖಾಪಟ್ಟಣಂನಲ್ಲಿ ಹೊತ್ತಿ ಉರಿದ ಹಡಗು! ಸಮುದ್ರಕ್ಕೆ ಜಿಗಿದು ಪ್ರಾಣ ಉಳಿಸಿಕೊಂಡ 28 ಸಿಬ್ಬಂದಿ!!

913

ವಿಶಾಖಾಪಟ್ಟಣಂನ ಹಡಗೊಂದರಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡ ಪರಿಣಾಮ, ಹಡಗಿನ 29 ಸಿಬ್ಬಂದಿ ಪ್ರಾಣ ಉಳಿಸಿಕೊಳ್ಳಲು ಸಮುದ್ರಕ್ಕೆ ಜಿಗಿದ ಘಟನೆ ನಡೆದಿದೆ.


ಸಪೋರ್ಟ್ ವೆಸಲ್​ ಕೋಸ್ಟಲ್​​ ಜಾಗ್ವಾರನಲ್ಲಿ ಬೆಳಗ್ಗೆ ಈ ಘಟನೆ ನಡೆದಿದ್ದು, ಇದ್ದಕ್ಕಿದ್ದಂತೆ ಹಡಗಿನ ಒಳಗೆ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಆತಂಕಕ್ಕೊಳಗಾದ ಸಿಬ್ಬಂದಿಗಳು ಸಮುದ್ರಕ್ಕೆ ಹಾರಿ ಜೀವ ಉಳಿಸಿಕೊಂಡಿದ್ದಾರೆ.

ad

ಹಡಗಿನ ಸಿಬ್ಬಂದಿ ಪ್ರಾಣ ಉಳಿಸಿಕೊಳ್ಳಲು ಸಮುದ್ರಕ್ಕೆ ಜಿಗಿಯುತ್ತಿದ್ದಂತೆ ಸಮೀಪದಲ್ಲೇ ಇದ್ದ ಭಾರತೀಯ ಕರಾವಳಿ ರಕ್ಷಣಾ ಹಡಗು ರಾಣಿ ರಾಶ್ಮೀನಿ ಸಿಬ್ಬಂದಿಯ ರಕ್ಷಣೆಗೆ ಧಾವಿಸಿ 28 ಸಿಬ್ಬಂದಿಯನ್ನು ರಕ್ಷಿಸಿದ್ದು, ಓರ್ವ ನಾಪತ್ತೆಯಾಗಿದ್ದಾನೆ. ಹಡಗಿನಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಳ್ಳಲು ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ಆದರೇ ಹಡಗು ಸಂಪೂರ್ಣ ಉರಿದು ಹೋಗಿದ್ದು, ಅಪಾರ ಪ್ರಮಾಣದ ಹಾನಿ ಅಂದಾಜಿಸಲಾಗಿದೆ.

Sponsored :

Related Articles