ಫಲಿಸಿತು ಅಭಿಮಾನಿಗಳ ಹಾರೈಕೆ! ಶಿವಣ್ಣ ಆಫರೇಶನ್​ ಸಕ್ಸಸ್​​! ಲಂಡನ್​ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಹ್ಯಾಟ್ರಿಕ್ ಹೀರೋ!!

898

ಲಕ್ಷಾಂತರ ಅಭಿಮಾನಿಗಳ ಹಾರೈಕೆಯಿಂದ ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ತಿಂಗಳುಗಳ ಕಾಲ ವಿಶ್ರಾಂತಿ ಪಡೆಯುವಂತೆ ಶಿವಣ್ಣನಿಗೆ ವೈದ್ಯರು ಸೂಚಿಸಿದ್ದಾರೆ.


ಕಳೆದ ಆರು ತಿಂಗಳಿನಿಂದ ಭುಜದ ನೋವಿನಿಂದ ಬಳಲುತ್ತಿದ್ದ ಶಿವಣ್ಣ ಕೆಲ ದಿನಗಳ ಹಿಂದೆಯಷ್ಟೇ, ಶಸ್ತ್ರ ಚಿಕಿತ್ಸೆಗಾಗಿ ಲಂಡನ್​ಗೆ ತೆರಳಿದ್ದರು. ಬುಧವಾರ ಶಿವಣ್ಣನವರಿಗೆ ಶಸ್ತ್ರ ಚಿಕಿತ್ಸೆ ನಡೆದಿದ್ದು, ಆಫರೇಶನ್​ ಸಕ್ಸಸ್​ ಆಗಿದ್ದು, ಶಿವಣ್ಣರನ್ನು ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆ.
ಶಿವಣ್ಣ ಆರೋಗ್ಯವಾಗಿದ್ದಾರೆ ಎಂದು ಶಿವಣ್ಣ ಆಪ್ತ ಹಾಗೂ ನಿರ್ಮಾಪಕ ಕೆ.ಪಿ.ಶ್ರೀಕಾಂತ್​ ಟ್ವಿಟರ್​ ಖಾತೆಯ ಮೂಲಕ ಸ್ಪಷ್ಟ ಪಡಿಸಿದ್ದಾರೆ.

ad


ಶಿವಣ್ಣನವರೊಂದಿಗೆ ಪತ್ನಿ ಗೀತಾ ಶಿವರಾಜಕುಮಾರ್ ಹಾಗೂ ಪುತ್ರಿ ನಿವೇದಿತಾ ಕೂಡ ಲಂಡನ್​ಗೆ ತೆರಳಿದ್ದು, ಪುನೀತ್ ರಾಜಕುಮಾರ್ ಶಿವಣ್ಣನೊಂದಿಗೆ ಇದ್ದು ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ.ಇನ್ನು ಶಿವಣ್ಣ ಆಫರೇಶನ್​ ಗೂ ಮುನ್ನ ನಟ ಅರ್ಬಾಜ್ ಖಾನ್ ಅವರನ್ನು ಭೇಟಿ ಮಾಡಿದ್ದರು.

ಕಳೆದ 6 ತಿಂಗಳ ಹಿಂದೆ ಪ್ರವಾಸಕ್ಕೆ ತೆರಳಿದ್ದ ವೇಳೆ ಹಿಮದಲ್ಲಿ ಜಾರಿ ಬಿದ್ದು ಶಿವಣ್ಣ ಗಾಯಗೊಂಡಿದ್ದು, ಆ ವೇಳೆ ಅವರಿಗೆ ಭುಜದ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಶೂಟಿಂಗ್​ ಮುಗಿಸಿದ ಶಿವಣ್ಣ ಹುಟ್ಟುಹಬ್ಬ ಆಚರಣೆಯನ್ನು ಕೈಬಿಟ್ಟು ಆಫರೇಶನ್​ಗಾಗಿ ಲಂಡನ್​ಗೆ ತೆರಳಿದ್ದರು.

Sponsored :

Related Articles