ಶಿವರಾಜ್‌ ಕುಮಾರ್ ಮನೆಗೆ ಹೊಸ ಅತಿಥಿಯ ಆಗಮನ ..

20129

ಶಿವರಾಜ್‌ ಕುಮಾರ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಅದು 1 ಕೋಟಿ ರೂಪಾಯಿ ಬೆಲೆಬಾಳುವ ಕಪ್ಪು ಬಣ್ಣದ ವೋಲ್ವೊ S-90 ಕಾರು. ಲೇಟೆಸ್ಟ್ ಎಡಿಶನ್‌ ಕಾರು ಇದಾಗಿದ್ದು, ಭಾರತಕ್ಕೆ ಬಂದಿರೋ ಮೊದಲ ವೋಲ್ವೊ ಎನ್ನಲಾಗ್ತಿದೆ.

 

ad

 

ಈ ಲಕ್ಷುರಿ ಕಾರು ಖರೀದಿಸಿದ ಶಿವಣ್ಣ ನಿನ್ನೆ ಪೂಜೆ ಸಲ್ಲಿಸಿದ್ದಾರೆ. ಈ ಕಾರು ಡೀಸೆಲ್ ಇಂಜಿನ್​ ಹೊಂದಿದ್ದು, 1969 ಸಿಸಿ ಇಂಜಿನ್ ಕೆಪಾಸಿಟಿ ಇದೆ. 18 ಕಿ.ಮೀ ಪರ್ ಲೀಟರ್ ಮೈಲೇಜ್ ನೀಡುತ್ತದೆ. ಆಡಾಪ್ಟಿವ್ ಕ್ರೂಜ್ ಕಂಟ್ರೋಲ್, ಲೇನ್ ಡಿಪಾರ್ಚರ್ ವಾರ್ನಿಂಗ್ ಹೀಗೆ ಹಲವು ಹೊಸ ವಿಶೇಷತೆ ಹೊಂದಿದೆ. ಮೊನ್ನೆಯಷ್ಟೆ ಪುನೀತ್​ ರಾಜ್​​ಕುಮಾರ್ ತಮ್ಮ ಪತ್ನಿಗೆ ಲ್ಯಾಮಬೋರ್ಗಿನಿ ಕಾರ್ ಗಿಫ್ಟ್​ ಮಾಡಿದ್ರು. ಇದೀಗ ಶಿವಣ್ಣ ಹೊಸ ಕಾರನ್ನ ಪರ್ಚೆಸ್ ಮಾಡಿದ್ದಾರೆ..

Sponsored :

Related Articles