ಯಶ್​ ಅಭಿಮಾನಿಗಳಿಗೆ ಶಾಕಿಂಗ್​​ ನ್ಯೂಸ್​​! ಇನ್ನು ಸ್ಟಾರ್ಟ್​ ಆಗಿಲ್ಲ ಕೆಜಿಎಫ್​-2 ಚಿತ್ರೀಕರಣ! ಕಾರಣ ಏನು ಗೊತ್ತಾ?!

1335
9900071610

ರಾಕಿಂಗ್ ಸ್ಟಾರ್ ಯಶ್​ ಮೊನ್ನೆಯಷ್ಟೆ ತಮ್ಮ ಮಗಳ ಫೋಟೋವನ್ನ ಟ್ವೀಟ್​ ಮಾಡಿ ಅಭಿಮಾನಿಗಳ ಮುಖದಲ್ಲಿ ಸಂತಸ ಮೂಡಿಸಿದ್ರು. ಆದ್ರೆ ಈಗ ರಾಕಿ ಭಾಯ್​​​ ಅಭಿಮಾನಿಗಳಿಗೆ ಬೇಜಾರಾಗೋ ಸುದ್ದಿಯೊಂದು ಹೊರ ಬಿದ್ದಿದೆ.. ಏನದು..? ಈ ಸ್ಟೋರಿನ ಫಾಲೋ ಮಾಡಿ ನಿಮ್ಗೆ ಗೊತ್ತಾಗುತ್ತೆ.

ad

ಹೌದು, ಇದು ರಾಕಿಂಗ್ ಸ್ಟಾರ್ ಯಶ್​ ಹಾಗು ಅವ್ರ ಅಭಿಮಾನಿಗಳಿಗೆ ನಿರಾಸೆಯಾಗೋ ಸುದ್ದಿ. ಆದ್ರೆ ಕೆಜಿಎಫ್-2 ಸಧ್ಯಕ್ಕೆ ಟೇಕಾಫ್​ ಆಗ್ತಿಲ್ಲ ಅನ್ನೋ ಸುದ್ದಿ ಹೊರ ಬಿದ್ದಿದೆ.ಮಿಸ್ಟರ್ ರಾಮಾಚಾರಿಯ ಮಹಾ ಸಿನಿಮಾ ಕೆಜಿಎಫ್​​-2 ಮೇ ಫಸ್ಟ್​ ವೀಕ್​ನಿಂದ ಶುರುವಾಗ್ಬೇಕಿತ್ತು. ಹೀಗಾಗಿ ಸಿನಿಮಾ ಟೀಂ ಆಡಿಷನ್​ ಮಾಡಿ ಕಲಾವಿಧರನ್ನ ಸೆಲೆಕ್ಟ್​ ಮಾಡಿದ್ರು. ಆದ್ರೆ ಕೆಜಿಎಫ್​ ಚಾಪ್ಟರ್​-2 ಸಧ್ಯಕ್ಕೆ ನಿಂತಿದೆ. ರಾಕಿ ಭಾಯ್ ಸಿನಿಮಾ ಸಧ್ಯಕ್ಕೆ ಟೇಕಾಫ್​ ಆಗದೇ ಇರೋದೇಕೆ ಗೊತ್ತಾ.? ಸಿನಿಮಾದ ಶೂಟಿಂಗ್​​ಗೆ ಇನ್ನೂ ಏನೂ ಪ್ರಿಪೇರ್ ಆಗಿಲ್ಲ.

ಕೆಜಿಎಫ್​-2 ಶೂಟಿಂಗ್​ಗೆ ಕಥೆ, ಪ್ಲಾನ್​ ಆರ್ಟಿಸ್ಟ್​ ಎಲ್ಲವೂ ರೆಡಿ ಇದೆ. ಆದ್ರೆ ಕೆಜಿಎಪ್​​​​ ಸೆಟ್​ ಮಾತ್ರ ಇನ್ನು ರೆಡಿಯಾಗಿಲ್ಲ. ಇತ್ತೀಚೆಗಷ್ಟೆ ಕೆಜಿಎಫ್​-2 ಸೆಟ್​ಗೆ ವಿಸೀಟ್​​ ಕೊಟ್ಟಿದ್ದ ಯಶ್ ಹಾಗು ನಿರ್ಮಾಪಕ ವಿಜಯ್ ಕಿರಗಂದೂರು ಕೆಜಿಎಫ್​ ಸೆಟ್​​ ಹೆಚ್ಚು ಕ್ವಾಲಿಟಿ ಬೇಕು.. ಇನ್ನು ಅಧ್ಬುತವಾಗಿ ಸೆಟ್ ನಿರ್ಮಾಣ ಮಾಡಿ ಅಂತ ಚಿತ್ರತಂಡಕ್ಕೆ ಹೇಳಿದ್ದಾರೆ. ಇದು ಸಿನಿಮಾದ ಶೂಟಿಂಗ್ ಮುಂದಕ್ಕೆ ಹೋಗೋದಕ್ಕೆ ಕಾರಣ.

ಕೆಜಿಎಫ್​ ಚಾಪ್ಟರ್-1 ಸೂಪರ್​ ಡೂಪರ್​ ಹಿಟ್​ ಆಗಿದ್ದೇ ಆಗಿದ್ದು, ಚಾಪ್ಟರ್-2 ಮೇಲೆ ಇಡೀ ದೇಶದ್ಯಾಂತ ದೊಡ್ಡ ಆಸೆ ಇಟ್ಕೊಂಡಿದ್ದಾರೆ. ಹೀಗಾಗಿ ಸಿನಿಮಾದ ಕ್ವಾಲಿಟಿ, ಕ್ವಾಂಟಿಟಿ ಎಲ್ಲೂ ಕಡಿಮೆ ಆಗ್ಬಾರ್ದು ಅದ್ಧೂರಿ ಸೆಟ್​​ ಹಾಕಲಾಗ್ತಿದೆ. ಕೆಜಿಎಫ್​​​ 2 ಸೆಟ್ಗೆ ಬರೋಬ್ಬರಿ 8 ರಿಂದ 10 ಕೋಟಿ ಖರ್ಚು ಮಾಡಲಾಗ್ತಿದೆಯಂತೆ… ಹೀಗಾಗಿ ಇನ್ನೂ ಒಂದು ತಿಂಗಳು ಕೆಜಿಎಫ್ ಶೂಟಿಂಗ್ ಲೇಟ್​ ಆಗುತ್ತೆ ಅಂತ ಹೇಳಲಾಗ್ತಿದೆ.

ಕೆಜಿಎಫ್​​​ ಚಾಪ್ಟರ್​-2 ಶೂಟಿಂಗ್ 25ರಷ್ಟು ಮುಗಿದಿದೆ. ಹೀಗಾಗಿ ಇದೇ ಡಿಸೆಂಬರ್​ನಲ್ಲಿ ರಾಕಿ ಭಾಯ್​ ಮತ್ತೆ ಬೆಳ್ಳಿತೆರೆಲ್ಲಿ ಸೌಂಡ್ ಮಾಡಲಿದ್ದಾರೆ ಅಂತ ಹೇಳಲಾಗ್ತಿತ್ತು,. ಆದ್ರೆ ಈಗ ಶೂಟಿಂಗ್ ಡಿಲೇ ಆಗ್ತಿರೋದ್ರಿಂದ ಈ ವರ್ಷದ ಡಿಸೆಂಬರ್​ನಲ್ಲಿ ಕೆಜಿಎಫ್​-2 ತೆರೆ ಕಾಣೋದು ಡೌಟ್​.

Sponsored :


9900071610