“ಶಿವಣ್ಣ” ಸಿದ್ದಗಂಗಾ ಶಿವಕುಮಾರ ಸ್ವಾಮಿಗಳಾಗಿದ್ದೇಗೆ ಗೊತ್ತಾ ? 111 ನೇ ಹುಟ್ಟುಹಬ್ಬದ ಸೀಕ್ರೆಟ್ ಇದು !! ಹ್ಯಾಪಿ ಬರ್ತ್ ಡೇ ಸ್ವಾಮೀಜಿ

2156
Siddaganga Mutt Shivakumara Swamiji's 111th Birthday.
Siddaganga Mutt Shivakumara Swamiji's 111th Birthday.
9900071610

ಸಿದ್ದಗಂಗಾ ಶಿವಕುಮಾರಸ್ವಾಮೀಜಿ ಇಡೀ ಭರತ ಭೂಮಿಗೆ ಮಾಧರಿ ಸ್ವಾಮೀಜಿಯಾಗಿದ್ದಾರೆ. ಬಸವಣ್ಣನ ಆಶಯಗಳನ್ನು ಸದ್ದಿಲ್ಲದೆ ಜಾರಿ ಮಾಡುತ್ತಿರುವ ಸ್ವಾಮೀಜಿಗಳು ದೇಶವಿದೇಶಗಳಲ್ಲಿ ಭಕ್ತರನ್ನು ಹೊಂದಿದ್ದಾರೆ.

ad

ಬಹುತೇಕರಿಗೆ ಶಿವಕುಮಾರಸ್ವಾಮಿಗಳ ಹುಟ್ಟು, ಬಾಲ್ಯ ಹೇಗಿತ್ತು ಅನ್ನೋದು ಗೊತ್ತಿಲ್ಲ. ಅವರ ಈಗಿನ ಬದುಕಿನ ಜೊತೆಗೆ ಪೂರ್ವಾಶ್ರಮದ ಬದುಕಿನ ಬಗ್ಗೆ ಇಲ್ಲಿದೆ ಮಾಹಿತಿ.ಮಾಗಡಿ ತಾಲೂಕಿನ ವೀರಾಪುರದ ಹೊನ್ನಪ್ಪ ಮತ್ತು ತಾಯಿ ಗಂಗಮ್ಮ ನವರಿಗೆ ಎಪ್ರಿಲ್ 1, 1904 ರಲ್ಲಿ ಶಿವಣ್ಣನವರಾಗಿ ಜನಿಸಿ, 1913 ರಲ್ಲಿ ಪ್ರಾಥಮಿಕ ಮತ್ತು 1921 ರಲ್ಲಿ ಮಾಧ್ಯಮಿಕ ವಿದ್ಯಾಭ್ಯಾಸವನ್ನು ನಾಗವಲ್ಲಿಯಲ್ಲಿ ಮುಗಿಸಿ 1922 ರಲ್ಲಿ ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿತು 1926 ರಲ್ಲಿ ಎಸ್ ಎಸ್ ಎಲ್ ಸಿ ಪೂರೈಸಿದರು.

1927 ರಲ್ಲಿ ಆಗಿನ ಸಿದ್ದಗಂಗಾ ಮಠಾಧಿಪತಿಗಳಾದ ಉದ್ದಾನ ಶಿವಯೋಗಿಗಳವರೊಡನೆ ಶಿವಣ್ಣರಿಗೆ ಒಡನಾಟ ಆಯಿತು. ಇದೇ ವರ್ಷ ಎಂಟ್ರೆನ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿದರು.ವಿದ್ಯಾಬ್ಯಾಸ ನಿಮಿತ್ತ ಶಿವಣ್ಣ ಬೆಂಗಳೂರಿನಲ್ಲಿದ್ದರೂ ತುಮಕೂರಿನ ಮಠದ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದರು. ಅದೊಂದು ದಿನ ಹಿರಿಯ ಸ್ವಾಮೀಜಿಗಳು ಲಿಂಗಕೈರಾದರು ಎಂದು ಶಿವಣ್ಣನಿಗೆ ತಿಳಿದು ತುಮಕೂರಿಗೆ ಧಾವಿಸಿದರು. ಮಠದ ಭಕ್ತರಾಗಿದ್ದ ಶಿವಣ್ಣ ಸ್ವಾಮೀಜಿಗಳ ಅಂತ್ಯಕ್ರಿಯೆಯಲ್ಲಿ ಭಕ್ತಿಯಿಂದ ಭಾಗವಹಿಸಿ ವಿಧಿವಿಧಾನಗಳಲ್ಲಿ ತೊಡಗಿಸಿಕೊಂಡರು. ಮಠದ ಉತ್ತರಾಧಿಕಾರಿ ಚರ್ಚೆ ಬಂದಾಗ ಮಠದಲ್ಲಿ ಇದ್ದವರೆಲ್ಲರೂ ಶಿವಣ್ಣ ಹೆಸರು ಹೇಳಿದರು. ಹೋಗುವಾಗ ಸಾಮಾನ್ಯ ಭಕ್ತನಾಗಿ ಹೋಗಿದ್ದ ಶಿವಣ್ಣ ವಾಪಸ್ ಬರುವಾಗ ಶಿವಕುಮಾರಸ್ವಾಮಿಯಾಗಿ ಕಾವಿ ತೊಟ್ಟುಕೊಂಡಿದ್ದರು.

ಅಲ್ಲಿಂದ ನಂತರ ಶಿವಕುಮಾರಸ್ವಾಮಿಗಳು ಹಿಂದಿರುಗಿ ನೋಡಿದ್ದೇ ಇಲ್ಲ. ಅಪಾರ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ತ್ರಿವಿಧ ದಾಸೋಹ ಪ್ರಾರಂಬಿಸಿದರು.ಪ್ರತಿ ದಿನವೂ ಶ್ರೀಗಳು ಬೆಳಗಿನ ನಾಲ್ಕು ಗಂಟೆಗೆ ಎದ್ದು ಸ್ನಾನಮಾಡಿ, ಪೂಜಾಕೋಣೆಯಲ್ಲಿ ಒಂದು ತಾಸಿಗೂ ಹೆಚ್ಚು ಸಮಯ ಧ್ಯಾನದಲ್ಲಿ ತಲ್ಲೀನರಾಗುತ್ತಾರೆ. ನಂತರ ಇಷ್ಟಲಿಂಗ ಪೂಜೆ. ದೂರದಿಂದ ಸ್ವಾಮಿಗಳ ದರ್ಶನಕಾಗಿ ಬರುವ ಭಕ್ತರಿಗೆ ತ್ರಿಪುಂಡ ಭಸ್ಮವನ್ನು ಕೊಟ್ಟು ತಾವೂ ಧರಿಸಿ, ಪೂಜೆಯನ್ನು ಮುಗಿಸುತ್ತಾರೆ. ನಂತರ ಆಹಾರ ಸೇವನೆ, ಮುಂಜಾನೆ ಆರೂವರೆಗಂಟೆಗೆ. ಒಂದು ಅಕ್ಕಿ-ಇಡ್ಲಿ, ಸ್ವಲ್ಪ ಹೆಸರುಬೇಳೆ-ದಾಲ್, ‘ಸಿಹಿ’ ಹಾಗೂ ‘ಖಾರ ಚಟ್ನಿ’ ಸೇವನೆ. ಎರಡು ಪೀಸ್ ಸೇಬು. ಇದರ ಬಳಿಕ, ‘ಬೇವಿನ-ಚಕ್ಕೆ ಕಷಾಯ’ ಸೇವನೆಯಾಗುತ್ತದೆ.

ರಾತ್ರಿ ಹತ್ತೂವರೆಗೆ ಸ್ವಾಮೀಜಿಯ ಮಲಗುವ ವೇಳೆ. ಪುಸ್ತಕ ಓದಿ ಮಲಗುವ ಹವ್ಯಾಸವಿಟ್ಟುಕೊಂಡಿದ್ದಾರೆ. ಇದು
ಕನಿಷ್ಟ ಅರ್ಧತಾಸಾದರೂ ನಡೆಯುತ್ತದೆ. ಹನ್ನೊಂದು ಗಂಟೆಗೆ ಮಲಗುತ್ತಾರೆ. ಓದಿನೊಂದಿಗೆ ಆರಂಭವಾಗುವ ಶ್ರೀಗಳ ದಿನಚರಿ, ಓದಿನೊಂದಿಗೆ ಮುಕ್ತಾಯವಾಗುತ್ತದೆ. ಹಲವು ದಿನಗಳಲ್ಲಿ, ಕೆಲವಾರು ಧಾರ್ಮಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಾರೆ. ಆಹ್ವಾನಿಸುವ ಭಕ್ತರ ಮನೆಗಳಿಗೂ ಭೇಟಿನೀಡುತ್ತಾರೆ. ದೂರದ ಊರುಗಳಿಗೂ ಓಡಾಡುತ್ತಾರೆ. ಪ್ರಸಾದ ಸ್ವೀಕರಿಸುವ ವೇಳೆಯಲ್ಲಿ ಮಾತ್ರ ಬಿಸಿನೀರು ಸೇವಿಸುತ್ತಾರೆ. ಬಾಕೀ ಸಂದರ್ಭದಲ್ಲಿ ಏನನ್ನೂ ಸೇವಿಸುವುದಿಲ್ಲ. ಕಳೆದ 8 ದಶಕಗಳ ಜೀವನ ಇದೇ ರೀತಿ ಸಾಗಿದೆ. ಶ್ರೀಗಳ ಆರೋಗ್ಯ ಇಂದಿಗೂ ಚೆನ್ನಾಗಿಯೇ ಇದೆ.

12 ನೇ ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣನವರ “ಕಾಯಕವೇ ಕೈಲಾಸ” ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಗಳು. ಮಾರ್ಚ್ 3, 1930 ರಲ್ಲಿಇವರು ಶ್ರೀಮಠದ ಜವಾಬ್ದಾರಿಯನ್ನು ಹೊತ್ತು ಅಂದಿನಿಂದ ನಿರಂತರವಾಗಿ ಮಠ, ಧರ್ಮ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ.ದೇಶ ಮತ್ತು ಸಮಾಜದ ಪ್ರಗತಿಯ ಬಗ್ಗೆ ಕಳಕಳಿಯಿರುವ ಸ್ವಾಮೀಜಿಯವರು ಮುಂದಿನ ಪೀಳಿಗೆಯ ಬೆಳವಣಿಗೆಗಾಗಿ ಪಣತೊಟ್ಟಿರುವರು. ಇವರು ಸಮಾಜದ ಎಷ್ಟೋ ಗಣ್ಯರ ಬಾಲ್ಯ ಜೀವನಗಳ ಪರಿವರ್ತನೆಗೆ ಕಾರಣವಾಗಿದ್ದಾರೆ. ತಮ್ಮ ಮಠದಲ್ಲಿ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಆಶ್ರಯವನಿತ್ತು ತ್ರಿವಿಧ ದಾಸೋಹವನ್ನು ಸತತವಾಗಿ ನಡೆಸುತ್ತಾ ಬಂದಿದ್ದಾರೆ. ಇಂತಹ ಸ್ವಾಮೀಜಿ ಯನ್ನು ಪಡೆದ ಕನ್ನಡ ಮಾತೆಯೇ ಅದೃಷ್ಟಶಾಲಿ. ಹ್ಯಾಪಿ ಬರ್ತ್ ಡೇ ಸ್ವಾಮೀಜಿ.

Sponsored :


9900071610