ಜೆಡಿಎಸ್ ವಿರುದ್ದ ಬಹಿರಂಗ ವಾರ್ ಗೆ ಇಳಿದ ಸಿದ್ದರಾಮಯ್ಯ !! ಬಟಾಬಯಲಾದ ದೋಸ್ತಿ ಕಚ್ಚಾಟ !!

844

ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಮತ್ತು ಜೆಡಿಎಸ್ ಅಧ್ಯಕ್ಷರೇ ಇದೀಗ ಬಹಿರಂಗವಾಗಿ ಕಾದಾಟಕ್ಕೆ ಶುರುವಿಟ್ಟುಕೊಂಡಿದ್ದಾರೆ. ಇದೀಗ ಮೈತ್ರಿ ಉಳಿಯುತ್ತಾ ಉರುಳುತ್ತಾ ಎಂಬ ಪ್ರಶ್ನೆ ತಾರ್ಕಿಕ ಮಟ್ಟಕ್ಕೆ ಹೋಗಿದೆ.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ವಿರುದ್ಧ ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿರುವ ಸಿದ್ಧರಾಮಯ್ಯ ಟ್ವಿಟರ್ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಎಚ್.ವಿಶ್ವನಾಥ ಇಂಥ ಕಿಡಿಗೇಡಿ ಹೇಳಿಕೆಗಳಿಗೆ ಕುಖ್ಯಾತರು. ಈ ಮೊದಲು ಜಿ.ಟಿ.ದೇವೆಗೌಡರು, ಈಗ ಎಚ್. ವಿಶ್ವನಾಥ್ ಮುಂದೆ ಯಾರೋ ಗೊತ್ತಿಲ್ಲ ‌. ಮೈತ್ರಿ ಧರ್ಮ ನನ್ನ ಬಾಯಿ ಕಟ್ಟಿಹಾಕಿದೆ ಎನ್ನುವ ಮೂಲಕ ಸಿದ್ಧರಾಮಯ್ಯ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ad

ಅಲ್ಲದೇ ಅವರಿಗೆ ದೇವರು ಒಳ್ಳೆ ಬುದ್ಧಿ ಕೊಡಲಿ ಎಂದಿರುವ ಸಿದ್ಧ ರಾಮಯ್ಯ ನನ್ನನ್ನು ಗುರಿಯಾಗಿಸಿ ನಡೆಯುತ್ತಿರುವ ಇಂಥ ಟೀಕೆಗಳ ಬಗ್ಗೆ ಜೆಡಿಎಸ್ ವರಿಷ್ಠರು ಗಮನ ಹರಿಸಲಿ ಎಂದು ಜೆಡಿಎಸ್ ವರಿಷ್ಠರಿಗೆ ಟ್ವೀಟ್ ಮೂಲಕವೇ ಟಾಂಗ್ ನೀಡಿದ್ದಾರೆ ‌.

ಸಮ್ಮಿಶ್ರ ಸರ್ಕಾರದಲ್ಲಿ ಮೈತ್ರಿ ಧರ್ಮ ಪಾಲಿಸಬೇಕಾದ ಅನಿವಾರ್ಯತೆ ನನ್ನ ಬಾಯಿ ಕಟ್ಟಿಹಾಕಿದೆ. ಹೀಗಾಗಿ ನಾನು ವಿಶ್ವನಾಥ ಹೇಳಿಕೆಗಳಿಗೆ ವಿವರವಾಗಿ ಪ್ರತಿಕ್ರಿಯಿಸಲಾರೆ ಎನ್ನುವ ಮೂಲಕ ಸಿದ್ಧು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ‌.

ನಿನ್ನೆ ವಿಶ್ವನಾಥ ಮೈಸೂರು ಮತ್ತು ಮಂಡ್ಯದಲ್ಲಿ ಸಿದ್ದರಾಮಯ್ಯ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿ, ಸಿದ್ಧರಾಮಯ್ಯಗೆ ಅಧಿಕಾರದ ಚಪಲವಿದ್ದು, ಸಿಎಂ ಆಗಲು ನಾಲ್ಕೈದು ವರ್ಷ ಕಾಯುವ ತಾಳ್ಮೆ ಬೆಳೆಸಿಕೊಳ್ಳಲಿ ಎಂಬರ್ಥದಲ್ಲಿ ಟೀಕಿಸಿದ್ದರು.

ಇದಕ್ಕೆ ಸಿದ್ಧು ಕಲ್ಬುರ್ಗಿಯಲ್ಲಿ ತಿರುಗೇಟು ನೀಡಿದ್ದರು. ಇದೀಗ ಮತ್ತೆ ಸಿದ್ಧು ಟ್ವಿಟರ್ ಮೂಲಕ ಎಚ್.ವಿಶ್ವನಾಥ ಟೀಕಿಸಿದ್ದು ಈ ಸಿದ್ಧು ಮತ್ತು ವಿಶ್ವನಾಥ ನಡುವಿನ ವಾರ್ ಮತ್ತಷ್ಟು ಉಲ್ಬಣಗೊಳ್ಳುವ ಮುನ್ಸೂಚನೆ ಲಭ್ಯವಾಗುತ್ತಿದ್ದು, ಮೈಸೂರು ರಾಜಕಾರಣದಿಂದ ಆರಂಭವಾಗಿ ರಾಜ್ಯ ರಾಜಕಾರಣದ ಮೇಲೂ ಎಫೆಕ್ಟ್ ಮಾಡುತ್ತಿರುವ ಸಿದ್ಧು ವಿಶ್ವನಾಥ ಫೈಟಿಂಗ್ ಮೈತ್ರಿ ಸರ್ಕಾರದ ಮೇಲೆ ಯಾವ ಪರಿಣಾಮ ಬೀರಲಿದೆ ಅನ್ನೋದನ್ನು ಕಾದುನೋಡಬೇಕಿದೆ.

Sponsored :

Related Articles