ಸಿದ್ಧರಾಮಯ್ಯ ಒಬ್ಬ ದುರಂಹಕಾರಿ! ಮಾನ ಮರ್ಯಾದೆ ಇದ್ದರೆ ಅವರು ರಾಜೀನಾಮೆ ನೀಡಲಿ! ಎಕ್ಸಿಟ್​ ಪೋಲ್​ ಬೆನ್ನಲ್ಲೇ ರೋಷನ್​ ಬೇಗ್ ಆಕ್ರೋಶ ಸ್ಪೋಟ!!

773

ಎಕ್ಸಿಟ್​​ ಪೋಲ್​ ಹೊರಬರುತ್ತಿದ್ದಂತೆ ಕಾಂಗ್ರೆಸ್​ ಒಳಬೇಗುದಿ ಹೊರಬಿದ್ದಿದ್ದು, ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಅಲ್ಪಸಂಖ್ಯಾತ ನಾಯಕ ಹಾಗೂ ಮಾಜಿ ಸಚಿವ ರೋಷನ್ ಬೇಗ್​ ಕಿಡಿಕಾರಿದ್ದಾರೆ. ನೇರವಾಗಿ ಸಿದ್ಧರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿರುವ ರೋಷನ್ ಬೇಗ್, ಸಿದ್ದರಾಮಯ್ಯ ಒಬ್ಬ ದುರಹಂಕಾರಿ. ಸಿದ್ಧರಾಮಯ್ಯನವರ ಧರ್ಮ ಒಡೆಯುವ ನೀತಿಯಿಂದ ಕಾಂಗ್ರೆಸ್​ ಸಂಖ್ಯೆ ಪಾತಾಳಕ್ಕೆ ಕುಸಿಯಿತು ಎಂದು ನೇರವಾಗಿ ಆರೋಪಿಸಿದ್ದಾರೆ.

ad

ಬೆಂಗಳೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ, ಸಿದ್ದು ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ ರೋಷನ್ ಬೇಗ್, ಇದು ನನ್ನೊಬ್ಬನ ಅಭಿಪ್ರಾಯವಲ್ಲ. ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರ ನೋವು. ಸಿದ್ಧರಾಮಯ್ಯನವರಿಂದ ಕಾಂಗ್ರೆಸ್​ ಪಕ್ಷ ಹಾಳಾಯಿತು. ಎಕ್ಸಿಟ್ ಪೋಲ್​ ನೋಡಿದ್ರೇ ಹೊಟ್ಟೆ ಉರಿಯುತ್ತಿದೆ ನಮಗೆ. ಇದಕ್ಕೆಲ್ಲ ಸಿದ್ಧರಾಮಯ್ಯ ನೇರಹೊಣೆ. ಮರ್ಯಾದೆ ಇದ್ದರೇ, ಈ ಸೋಲಿನ ನೈತಿಕ ಹೊಣೆ ಹೊತ್ತು ಸಿದ್ಧರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ರಾಜೀನಾಮೆ ಕಾಂಗ್ರೆಸ್​ಗೆ ಹಾಗೂ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.


ಸಿದ್ಧರಾಮಯ್ಯನವರ ದುರಹಂಕಾರ ಹಾಗೂ ಡೋಂಟ್​ಕೇರ್​ ವ್ಯಕ್ತಿತ್ವದಿಂದಾಗಿ, ಕಾಂಗ್ರೆಸ್​ಗೆ ಧಕ್ಕೆಯಾಗಿದೆ. ಸಿದ್ಧರಾಮಯ್ಯ ಒಕ್ಕಲಿಗರನ್ನು ಬೈದು ಬೈದು ಪಕ್ಷದಿಂದ ದೂರಾಗಿಸಿದ್ರು. ಬಳಿಕ ಲಿಂಗಾಯತ್ ಪ್ರತ್ಯೇಕ ಧರ್ಮಕ್ಕೆ ಕೈಹಾಕಿ ಧರ್ಮ ಒಡೆದು ಕಾಂಗ್ರೆಸ್​​ ಸಂಖ್ಯೆ 79 ಕ್ಕೆ ಇಳಿಯುವಂತೆ ಮಾಡಿದ್ರು ಎಂದು ಕಿಡಿಕಾರಿದ್ದಾರೆ.

ಇನ್ನು ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ವಿರುದ್ಧವೂ ಕಿಡಿಕಾರಿದ ಬೇಗ್​, ವೇಣುಗೋಪಾಲ್ ಒಬ್ಬ ಬಪೂನ್​ ಇದ್ದಂತೆ. ಅವರಿಗೆ ವಾಸ್ತವದ ಅರಿವಿಲ್ಲ ಎಂದು ಟೀಕಿಸಿದ್ದರು. ಒಟ್ಟಿನಲ್ಲಿ ಎಕ್ಸಿಟ್​ ಪೋಲ್ ಹಾಗೂ ಚುನಾವಣೆ ಬಳಿಕ ಸಿದ್ಧರಾಮಯ್ಯನವರ ವಿರುದ್ಧ ಒಬ್ಬೊಬ್ಬರೇ ಕಾಂಗ್ರೆಸ್​​ ಹಾಗೂ ಮೈತ್ರಿ ನಾಯಕರು ಆಕ್ರೋಶ ವ್ಯಕ್ತಪಡಿಸಲು ಆರಂಭಿಸಿದ್ದು, ಈ ಸಾಲಿಗೆ ಇದೀಗ ಮಾಜಿ ಸಚಿವ ರೋಷನ್ ಬೇಗ್​ ಹೊಸ ಸೇರ್ಪಡೆ.

Sponsored :

Related Articles