ಸಿಲಿಕಾನ ಸಿಟಿಯ ನೂತನ ಉಪಮೇಯರ್​ ಇನ್ನಿಲ್ಲ- ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ರಮೀಳಾ ಉಮಾಶಂಕರ್​!

1129
9900071610

 

ad

ದೀಢಿರ ಕಾಣಿಸಿಕೊಂಡ ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಬೆಂಗಳೂರಿನ ಉಪಮೇಯರ್​ ರಮೀಳಾ ಉಮಾಶಂಕರ್​​ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಅವರಿಗೆ 44 ವರ್ಷ ವಯಸ್ಸಾಗಿತ್ತು. ನವೆಂಬರ್ 28 ರಂದು ನಡೆದ ಬಿಬಿಎಂಪಿ ಮೇಯರ್- ಉಪಮೇಯರ್ ಚುನಾವಣೆಯಲ್ಲಿ ಉಪಮೇಯರ್ ಆಗಿ ಆಯ್ಕೆಯಾಗಿದ್ದ ರಮಿಳಾ ಅವರು ಮೊನ್ನೆಯಷ್ಟೇ ಉಪಮೇಯರ್​ ಅಧಿಕಾರ ಸ್ವೀಕರಿಸಿದ್ದರು.

ಮೊನ್ನೆ ಮೇಯರ್​ ನಡೆಸಿದ ರಾತ್ರಿ ರೌಂಡ್ಸ್ ವೇಳೆಯೂ ರಮೀಳಾ ಮೇಯರ್​ ಗಂಗಾಂಬಿಕಾಗೆ ಸಾಥ್ ನೀಡಿದ್ದರು. ನಿನ್ನೆ ಬೆಳ್ಳಗ್ಗೆಯಿಂದಲೂ ಮುಖ್ಯಮಂತ್ರಿ ಎಚ್.ಡಿ.ಕುಮಾರ್ ಹಾಗೂ ಉಪಮುಖ್ಯಮಂತ್ರಿ ಪರಮೇಶ್ವರ್​ ಜೊತೆಗೆ ಹಲವು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಆರೋಗ್ಯವಾಗಿಯೇ ಇದ್ದರು. ಅಲ್ಲದೇ ಮನೆಯಲ್ಲಿ ಇಂದು ಪಿತೃಪಕ್ಷ ಆಚರಣೆಗೂ ಸಿದ್ಧತೆ ನಡೆಸಿದ್ರು ಎನ್ನಲಾಗಿದೆ.

 

ತಡರಾತ್ರಿ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದ್ದು ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಅವರ ನಿವಾಸದಲ್ಲೇ ದೇಹವನ್ನು ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಸಂಜೆ ನೆಲಮಂಗಲದ ಅವರ ಪತಿಯ ತೋಟದಲ್ಲೇ ಅವರ ಅಂತ್ಯಸಂಸ್ಕಾರ ನಡೆಯಲಿದೆ. ಮೃತ ರಮಿಳಾ ಅವರು ಪತಿ ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

 

ಜೆಡಿಎಸ್​ನಿಂದ 2015 ರಲ್ಲಿ ಕಾವೇರಿಪುರ ವಾರ್ಡ್​ನಿಂದ ಜೆಡಿಎಸ್​ ಪಕ್ಷದಿಂದ ಕಾರ್ಪೋರೇಟರ್​ ಆಗಿ ಆಯ್ಕೆಯಾಗಿದ್ದರು. ಈ ಹಿಂದೆಯೂ ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದರಾದರೂ ಆಯ್ಕೆಯಾಗಿರಲಿಲ್ಲ. ಈ ಭಾರಿ ಉಪಮೇಯರ್ ಆಗಿ ಆಯ್ಕೆಯಾದರೂ ಕೂಡ ಜಯರಾಯ ಅವರನ್ನು ಆಡಳಿತ ನಡೆಸಲು ಬಿಡದೇ ಇರೋದು ನಿಜಕ್ಕೂ ದುರಂತವೇ ಸರಿ.

 

Sponsored :


9900071610