ಗಾಯಕಿ ಪ್ರೇಮಲತಾ ದಿವಾಕರ್ ಗೆ ಮತ್ತೆ ಸಂಕಷ್ಟ- ಬ್ಲಾಕ್​ಮೇಲ್​ ಪ್ರಕರಣದಲ್ಲಿ ಸಿಐಡಿ ಬಿ ರಿಪೋರ್ಟ್​ ತಿರಸ್ಕರಿಸಿದ ನ್ಯಾಯಾಲಯ!

3439
Singer Premalatha diwakar
Singer Premalatha diwakar

ರಾಮಚಂದ್ರಾಪುರ ಮಠದ ರಾಘವೇಶ್ವರ್ ಭಾರತೀಶ್ರೀಗಳ ವಿರುದ್ಧ ಅತ್ಯಾಚಾರದ ಆರೋಪ ಮಾಡಿ ಸುದ್ದಿಯಾಗಿದ್ದ ಸಂತ್ರಸ್ಥೆ ಪ್ರೇಮಲತಾ ದಿವಾಕರ್ ಇದೀಗ ಮತ್ತೊಮ್ಮೆ ಸಂಕಷ್ಟಕ್ಕಿಡಾಗಿದ್ದಾರೆ.

 

ad

ಶ್ರೀರಾಮಚಂದ್ರಾಪುರಮಠದ ವಿರುದ್ಧದ ಬ್ಲಾಕ್​ಮೇಲ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಮಲತಾ ದಿವಾಕರ್ ಸೇರಿದಂತೆ ಇತರ ಆರೋಪಿಗಳ ವಿರುದ್ಧ ತನಿಖಾ ತಂಡ ಸಿಐಡಿ ಸಲ್ಲಿಸಿದ್ದ ಬಿ ರಿಪೋರ್ಟ್​ನ್ನು ನ್ಯಾಯಾಲಯ ತಿರಸ್ಕರಿಸಿದೆ.
ಮಠದ ವಿರುದ್ಧದ ಬ್ಲಾಕ್ ಮೇಲ್​​ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಸಲ್ಲಿಸಿದ್ದ ಬಿ ರಿಪೋರ್ಟ್​ನ್ನು ಹೊನ್ನಾವರ ನ್ಯಾಯಾಲಯವೂ ತಿರಸ್ಕರಿಸಿದ್ದು, ಇದರಿಂದ ರಾಜ್ಯ ತನಿಖಾ ಸಂಸ್ಥೆಗೆ ತೀವ್ರ ಮುಖಭಂಗವಾದಂತಾಗಿದೆ. ಸೂಕ್ತ ಸಾಕ್ಷ್ಯಾಧಾರಗಳಿದ್ದರೂ ತನಿಖಾ ತಂಡ ಬಿ ರಿಪೋರ್ಟ್ ಸಲ್ಲಿಸಿದೆ ಎಂದು ಮಠದ ಭಕ್ತರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ನ್ಯಾಯಾಲಯ ಬಿ ರಿಪೋರ್ಟ್ ತಿರಸ್ಕರಿಸಿದೆ. ಇದರಿಂದ ಪ್ರೇಮಲತಾ ಸಂಕಷ್ಟಕ್ಕೊಳಾಗಿದ್ದಾರೆ.

 

 

 

ಮಠದ ಭಕ್ತರಾಗಿದ್ದ ದಿವಾಕರ್ ಶಾಸ್ತ್ರಿ, ಪ್ರೇಮಲತಾ ದಿವಾಕರ್, ಸಿ ಎಮ್ ಎನ್ ಶಾಸ್ತ್ರಿ ಮತ್ತು ಇತರರು ಶ್ರೀರಾಮಚಂದ್ರಾಪುರ ಮಠದ ವಿರುದ್ಧ ಬ್ಲಾಕ್ ಮೇಲ್ ಮಾಡಿರುವ ಬಗ್ಗೆ ಮಠದ ಭಕ್ತರು ಹೊನ್ನಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ನೀಡಿತ್ತು. ಆದರೇ ತನಿಖೆ ನಡೆಸಿದ ಸಿಐಡಿ ಸಾಕ್ಷಾಧಾರಗಳಿದ್ದರೂ ‘ಬಿ’ ರಿಪೋರ್ಟ್ ಸಲ್ಲಿಸಿತ್ತು ಎನ್ನಲಾಗಿದೆ.
ಈ ಹಿಂದೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ರಾಘವೇಶ್ವರ್ ಶ್ರೀಗಳ ಮೇಲೆ ಮಾಡಲಾಗಿದ್ದ ದೋಷಾರೋಪಣೆಯನ್ನು ತಿರಸ್ಕರಿಸಿದ್ದ ನ್ಯಾಯಾಲಯ, ಶ್ರೀಗಳು ನಿರ್ದೋಷಿ ಎಂದು ಆದೇಶಿಸಿತ್ತು. ಇದೀಗ ಶ್ರೀಮಠದ ವಿರುದ್ಧ ಮಾಡಲಾಗಿದ್ದ ಬ್ಲಾಕ್ ಮೇಲ್ ಪ್ರಕರಣಕ್ಕೆ ಸಿಐಡಿ ಸಲ್ಲಿಸಿದ್ದ ಬಿ ರಿಪೋರ್ಟ್ ಅವನ್ನು ನ್ಯಾಯಾಲಯ ತಿರಸ್ಕರಿಸಿದ್ದು, ಈ ಎರಡು ಆದೇಶಗಳಿಂದ ಮಠದ ವಿರುದ್ಧ ಷಡ್ಯಂತ್ರ ನಡೆದಿದೆ. ಎಂಬ ವಾದಕ್ಕೆ ಈಗ ಪುಷ್ಠಿ ದೊರೆತಂತಾಗಿದೆ.

Sponsored :

Related Articles