ಗಾಯಕ ರಘು ದೀಕ್ಷಿತ್​​ ಹಾಗೂ ಮಯೂರಿ ಬಾಳಲ್ಲಿ ಬಿರುಕು! ವಿಚ್ಛೇಧನಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ ತಾರಾದಂಪತಿ!!

6849

ಒಬ್ಬರು ಹಾಡುಹಕ್ಕಿಯಾದರೇ, ಇನ್ನೊಬ್ಬರು ನಾಟ್ಯರಾಣಿ. ಒಬ್ಬರನ್ನೊಬ್ಬರು ಮೆಚ್ಚಿ ಮದುವೆಯಾದ ಈ ಸ್ಟಾರ್ ದಂಪತಿಯ ಬದುಕಿನಲ್ಲಿಗ ಈಗ, ಬಿರುಕು ಮೂಡಿದೆ. ಒಂದಾಗಿ ಬಾಳಲು ಸಾಧ್ಯವಿಲ್ಲ ಎಂದು ನಿರ್ಧರಿಸಿರುವ ದಂಪತಿ ವಿಚ್ಛೇಧನಕ್ಕೆ ಮುಂದಾಗಿದ್ದಾರೆ.


ಹೌದು ಅಂತಾರಾಷ್ಟ್ರೀಯ ಮಟ್ಟದ ಗಾಯಕ ರಘು ದೀಕ್ಷಿತ್ ಹಾಗೂ ನಟಿ, ನೃತ್ಯಗಾತಿ ಮಯೂರಿ ದಾಂಪತ್ಯ ಜೀವನ ಮುರಿದುಬಿದ್ದಿದ್ದು, ಇಬ್ಬರೂ ಕೂಡ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ad


ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ದಂಪತಿ ವಿಚ್ಚೇಧನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಕಳೆದ ಒಂದು ವರ್ಷದಿಂದ ರಘು ದೀಕ್ಷಿತ್ ಮತ್ತು ಮಯೂರಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ವಿಚ್ಛೇಧನಕ್ಕಾಗಿ ಸಲ್ಲಿಸಲಾದ ಅರ್ಜಿ ವಿಚಾರಣೆ ಹಂತದಲ್ಲಿದೆ.


ಕಳೆದ ವರ್ಷ ಗಾಯಕ ರಘು ದೀಕ್ಷಿತ್​ ಮೇಲೆ ಗಾಯಕಿಯೊಬ್ಬರು ಮೀ ಟೂ ಆರೋಪ ಸಹ ಮಾಡಿದ್ದರು. ಆ ವೇಳೆಯಲ್ಲೇ ಅವರ ದಾಂಪತ್ಯದಲ್ಲಿ ಬಿರುಕು ಮೂಡಿರುವ ಸಂಗತಿ ಕೂಡ ಬೆಳಕಿಗೆ ಬಂದಿತ್ತು.

ಇದೀಗ ಈ ವಿಚಾರ ಅಧಿಕೃತವಾಗಿದ್ದು, ಈ ತಾರಾಜೋಡಿ ವೈವಾಹಿಕ ಬದುಕಿಗೆ ಕಾನೂನಾತ್ಮಕ ಅಂತ್ಯ ಹಾಡಲು ಮುಂದಾಗಿದ್ದಾರೆ.

Sponsored :

Related Articles