ಅಂಗಡಿಗೆ ಹೋಗಿ ಬರ್ತೇನಂತ ಹೋದ ಮಗ ಎಲ್ಲಿ ಹೋದ? ಇದೊಂದು ವಿಚಿತ್ರ ಘಟನೆ!!

2057

 ಆ ತಾಯಿಗೆ ಅವನೆ ಜಗತ್ತಾಗಿದ್ದ.ಮಗ ವಯಸ್ಸಿಗೆ ಬರುತ್ತಿದ್ದಂತೆ ತಾಯಿ ಮದುವೆ ಮಾಡಲು ಮುಂದಾಗಿದ್ಲು.ಐದಾರು ಕಡೆ ಮಗನಿಗೆ ಹುಡುಗಿಯನ್ನು ನೋಡಿ ಬಂದಿದ್ರು.ಹತ್ತಾರು ಕಡೆ ಹುಡುಗಿ ನೋಡಿದ್ರು ಯಾವುದೇ ಪ್ರಯೋಜನವಾಗಿರಲಿಲ್ಲ.ಆದ್ರೆ ಒಂದುವರೆ ತಿಂಗಳ ಹಿಂದೆ ಮಗ ನಾಪತ್ತೆಯಾಗಿದ್ದಾನೆ.ಅಂಗಡಿಗೆ ಹೋಗಿ ಬರ್ತೀನಿ ಎಂದು ಹೋದ ವಯಸ್ಸಿನ ಮಗ ಮರಳಿ ಮನೆಗೆ ಬಂದಿಲ್ಲ.ಮಗನ ಚಿಂತೆಯಲ್ಲಿ ತಾಯಿ ಹಾಸಿಗೆ ಹಿಡದಿದ್ದಾಳೆ.ಒಂದುವರೆ ತಿಂಗಳಿಂದ ಮಗ,ಮಗ ಎಂದು ಗೋಗರೆಯುತ್ತಿದ್ದಾಳೆ.ಅಷ್ಟಕ್ಕೂ ಆ ತಾಯಿ ಯಾರೂ ಮಗ ಮನೆ ಬಿಟ್ಟು ಹೋಗಲು ಕಾರಣ ಏನು ಅಂತೀರಾ ಈ ಸ್ಟೋರಿ ನೋಡಿ.

ಹೀಗೆ ಕಣ್ಣೀರು ಹಾಕುತ್ತಿರೋ ತಾಯಿಯ ದ್ರಶ್ಯ.ಮತ್ತೊಂದಡೆ ಮಗನ ಫೋಟೋ ಹಿಡಿದು ಮಗನ ಬರುವಿಕೆಗಾಗಿ ಕೂತ ಜೀವ.ಇನ್ನೊಂದೆಡೆ ತಲೆಯ ಮೇಲೆ ಕೈಹೊತ್ತು ಮಾನಸಿಕವಾಗಿದೆ ಎನ್ನುತ್ತಿರೋ ತಾಯಿ.ಹೌದು ಇವೆಲ್ಲ ದ್ರಶ್ಯಗಳು ಕಂಡು ಬಂದಿದ್ದು ಕೊಪ್ಪಳದಲ್ಲಿ.ಕೊಪ್ಪಳ ತಾಲೂಕಿನ ಚಿಲವಾಡಗಿ ಗ್ರಾಮದ ಶಶಿಕಲಾ ಎಂಬುವರ ಮನೆಯಲ್ಲಿ ಇದೀಗ ನೀರವ ಮೌನ ಆವರಿಸಿದೆ.ಯಾಕಂದ್ರೆ ಕಳೆದ ಒಂದುವರೆ ತಿಂಗಳ ಹಿಂದೆ ಶಶಿಕಲಾ ಹಿರೇಮಠ ಮಗ ಮಂಜುನಾಥ್ ಮನೆಯಿಂದ ನಾಪತ್ತೆಯಾಗಿದ್ದಾನೆ.ನಾಪತ್ತೆಯಾದ ದಿನದಿಂದ ಶಶಿಕಲಾ ದಿನನಿತ್ಯ ಕಣ್ಣೀರು ಸುರಿಸುತ್ತಿದ್ದಾರೆ.ಅಸಲಿಗೆ ಮಂಜುನಾಥ್ ನಾಪತ್ತೆಯಾಗಲು ಕಾರಣ ಕೇಳಿದ್ರೆ ನೀವು ಶಾಕ್ ಆಗ್ತೀರಾ.ಮಂಜುನಾಥ್ ಗೆ ಇದೀಗ 24 ವರ್ಷ.ತಾಯಿ ಮಗನ ಮದುವೆ ಮಾಡಲು ತಯಾರಿ ನಡೆಸಿದ್ರು.ಹತ್ತಾರು ಕಡೆ ಹುಡಗಿಯರನ್ನ ನೋಡಿ ಬಂದಿದ್ರು.ಆದ್ರೆ ಹುಡಗಿ ನೋಡೋಕೆ ಹೋದ ಸಂದರ್ಭದಲ್ಲಿ ಹುಡಗಿ ಮನೆ ಕಡೆಯವರು ಆಸ್ತಿ ಎಷ್ಟಿದೆ ಎಂದು ಕೇಳತಿದ್ರಂತೆ.ವಿಪರ್ಯಾಸ ಅಂದ್ರೆ ಮಂಜುನಾಥ್ ಗೆ ಯಾವುದೇ ಹೊಲ ಆಸ್ತಿ ಇಲ್ಲ.ಹೀಗಾಗಿ ಎಲ್ಲರೂ ಹುಡುಗಿಯನ್ನ ಕೊಡೋಕೆ ಹಿಂದೂ ಮುಂದು ನೋಡಿದ್ರಂತೆ.ಹತ್ತಾರು ಕಡೆ ಹೋದಾಗಲು ಎಲ್ಲರೂ ಹೊಲ ಆಸ್ತಿಯನ್ನ ಕೇಳಿದ ಪರಿಣಾಮ ಮಂಜುನಾಥ್ ಗೆ ಇರುಸು ಮುರುಸು ಉಂಟಾಗಿತ್ತಂತೆ.ಅದೆ ಸಂದರ್ಭಕ್ಕೆ ತಾಯಿ ದುಡಿಯಲು ಹೋಗು ಎಂದು ಗದಗರಿಸಿದ್ದಾಳೆ.ಇವೆರಡು ಕಾರಣಕ್ಕೆ ಒಂದುವರೆ ತಿಂಗಳ ಮನೆ ಬಿಟ್ಟು ಹೋದ ಮಂಜುನಾಥ್ ಮನೆ ಬಿಟ್ಟು ಹೋಗಿದ್ದಾನೆ.ಇದುವರೆಗೂ ಎಲ್ಲಿದಾನೆ ಅನ್ನೋದು ಗೊತ್ತಾಗಿಲ್ಲ.ಇದ್ರಿಂದ ನೊಂದ ತಾಯಿ ಶಸಿಕಲಾ ಹಾಸಿಗೆ ಹಿಡದಿದ್ದಾಳೆ.ಮಗನಿಗಾಗಿ ಕಾದು ಕುಳತಿದ್ದಾಳೆ.ಹೇಗಾದ್ರೂ ಮಾಡಿ ನನ್ನ ಮಗನನ್ನ ಹುಡುಕಿ ಕೊಡಿ ಎಂದು ಕೈ ಮುಗಿದು ಕೇಳಿಕೊಳ್ಳುತ್ತಿದ್ದಾಳೆ.

 

ad

 

 

ಇನ್ನು ಶಶಿಕಲಾ ವೃತ್ತಿಯಲ್ಲಿ ಅಂಗನವಾಡಿ ಶಿಕ್ಷಕಿಯರಾಗಿ ಕೆಲಸ ಮಾಡ್ತೀದಾರೆ.ಪತಿ ವೀರಯ್ಯ ಕಳೆದ ಐದಾರು ವರ್ಷಗಳ ಹಿಂದೆನೆ ಮರಣ ಹೊಂದಿದ್ದಾರೆ.ವೀರಯ್ಯ ಹಾಗೂ ಶಶಿಕಲಾ ದಂಪತಿಗೆ ಮಂಜುನಾಥ್ ಒಬ್ಬನೆ ಪುತ್ರ.ತಂದೆ ತೀರಿದ ಬಳಿಕ ಮಂಜುನಾಥ್ ಕೊಪ್ಪಳದ ಕಿರಾಣಿ ಅಂಗಡಿಯೊಂದರಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ.ತಾಯಿ ಹಾಗೂ ಮಗ ಇಬ್ಬರು ಸಂತೋಷದಿಂದಲೇ ಕಾಲ ಕಳೆಯುತ್ತಿದ್ರು.ದುಡಿದ ಹಣದಲ್ಲಿ ಸಾಲ ಸೋಲ ಮಾಡಿ ಮನೆಯನ್ನ ಕಟ್ಟಿಕೊಂಡಿದ್ರು.ಮನೆಯನ್ನ ಹೊರತುಪಡಿಸಿ ಮಂಜುನಾಥ್ ಗೆ ಯಾವುದೇ ಆಸ್ತಿ ಇರಲಿಲ್ಲ.ಆದ್ರೆ ಹುಡಗಿ ನೋಡೋಕೆ ಹೋದ ಸಂದರ್ಭದಲ್ಲಿ ಎಲ್ಲರೂ ಹೊಲ ಎಷ್ಟಿದೆ ಎಂದು ಕೇಳತಿದ್ರಂತೆ.ಹೊಲ ಇಲ್ಲ ಎಂದ ತಕ್ಷಣ ಹುಡಗಿ ಕೊಡೋದಿಲ್ಲ ಎಂದು ವಾಪಸ್ ಕಳಸಿದ್ರಂತೆ.ಹೀಗಾಗಿ ಮಂಜುನಾಥ್ ಮನನೊಂದು ಮನೆ ಬಿಟ್ಟು ಹೋಗಿದ್ದಾನೆ ಅನ್ನೋದು ಸ್ಥಳೀಯರು ಮಾತನಾಡುತ್ತಿದ್ದಾರೆ.ಇದ್ದೊಬ್ಬ ಮಗ ಮನೆ ಬಿಟ್ಟು ಹೋಗುತ್ತಿದ್ದಂತೆ ತಾಯಿ ಹಾಸಿಗೆ ಹಿಡದಿದ್ದಾಳೆ.ಅಲ್ದೆ ಮಾನಸಿಕವಾಗಿ ಜರ್ಜರಿತವಾಗಿದ್ದಳಂತೆ.ತಡರಾತ್ರಿ ಎದ್ದು ಕೆಲವು ಸಾರಿ ಆತ್ಮಹತ್ಯೆಗೂ ಯತ್ನಿಸಿದ್ರಂತೆ.ನೆರೆಹೊರೆಯವರು ನೊಡಿ ತಡೆಹಿಡದಿದ್ದಾರೆ.ಇದೀಗ ಶಶಿಕಲಾ ಸಹೋದರಿ ಶಾಂತಾ ಎಲ್ಲವನ್ನೂ ಬಿಟ್ಟು ಶಶಿಕಲಾರನ್ನ ನೋಡಿಕೊಳ್ಳುತ್ತಿದ್ದಾರೆ.ಯಾವಾಗ ಏನಾಗುತ್ತೆ ಅನ್ನೋ ಭಯದಿಂದ ಸಹೋದರಿ ಶಾಂತಾ ದಿನದೂಡುತ್ತಿದ್ದಾರೆ.ಹೇಗಾದ್ರೂ ಮಾಡಿ ಮಂಜುನಾಥ್ ಮನೆಗೆ ಬರಲಿ ನನಗೆ ಕಷ್ಟ ನೋಡಲಾಗ್ತಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ.

 

 

ಒಟ್ಟಾರೆಯಾಗಿ ಹುಡುಗಿ ನೋಡಲು ಹೋದಂತಹ ಸಂದರ್ಭದಲ್ಲಿ ಆದ ಅವಮಾನದಿಂದಲೇ ಮಂಜುನಾಥ್ ಮನೆ ಬಿಟ್ಟು ಹೋಗಿದ್ದಾನೆ ಅನ್ನೋದು ಗ್ರಾಮಸ್ಥರ ಮಾತು.ಇದ್ದೊಬ್ಬ ತಾಯಿಯನ್ನ ಬಿಟ್ಟು ಹೋದ ದಿನದಿಂದ ತಾಯಿ ಸಾವು ಬದುಕಿನ  ಮಧ್ಯೆ ಹೋರಾಟ ಮಾಡುತ್ತಿದ್ದಾಳೆ.ಒಂದುವರೆ ತಿಂಗಳಿಂದ ಅನ್ನ ನೀರು ಬಿಟ್ಟ ತಾಯಿ ಮಂಜುನಾಥ್ ಬರುವಿಕೆಗಾಗಿ ಕಾದು ಕುಳತಿದ್ದಾಳೆ.ಆದಷ್ಟು ಬೇಗ ಮಂಜುನಾಥ್ ಮನೆಗೆ ಬರಲಿ ಅನ್ನೋದು ನಮ್ಮ ಆಶಯ.

 

ವರದಿ: ರವಿಕುಮಾರ ಬಿ ಟಿವಿ ಕೊಪ್ಪಳ..

 

 

Sponsored :

Related Articles