ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಸಿಕ್ತು ಸ್ಪೆಷಲ್ ಗಿಫ್ಟ್! ದಚ್ಚುಗೆ ಗಿಫ್ಟ್​​ ಕೊಟ್ಟ ಸ್ಟಾರ್ ದಂಪತಿ ಯಾರು ಗೊತ್ತಾ?!

1327
9900071610

ಸ್ಯಾಂಡಲ್ ವುಡ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಪ್ರಾಣಿಗಳು ಆಂದರೆ ಅಚ್ಚು ಮೆಚ್ಚು. ಅವರ ಫಾರ್ಂ ಹೌಸ್​ನಲ್ಲಿ ದೇಶ-ವಿದೇಶದ ಹಲವು ಪ್ರಾಣಿ-ಪಕ್ಷಿಗಳು ದರ್ಶನ ಪ್ರಾಣಿಪ್ರೇಮಕ್ಕೆ ಸಾಕ್ಷಿಯಾಗಿವೆ. ಹೀಗಿರುವಾಗಲೇ, ಸ್ಯಾಂಡಲ್​ವುಡ್​ ಸ್ಟಾರ್ ದಂಪತಿಯೊಂದು ದಚ್ಚು ಸ್ಪೆಶಲ್​ ಗಿಫ್ಟ್​ ನೀಡಿದೆ. ಅದೇನು ಅಂದ್ರಾ ಇಲ್ಲಿದೆ ಡಿಟೇಲ್ಸ್​..

ad

ದರ್ಶನ್ ಎಲ್ಲ ಹೀರೋಗಳ ಚಿತ್ರಗಳಿಗೂ ಅಪಾರವಾಗಿ ಬೆಂಬಲಿಸುತ್ತಾರೆ.  ಇದೇ ಚಿರಂಜೀವಿ ಸರ್ಜಾ ಹಾಗೂ ಮೇಘನಾ ದಂಪತಿ ದರ್ಶನ್​ ಪ್ರೀತಿ,ಅಭಿಮಾನಕ್ಕೆ ಮಣಿದು ಮುದ್ದಾದ ನಾಯಿಮರಿಯೊಂದನ್ನು ಕೃತಜ್ಞತೆಯ ರೂಪದಲ್ಲಿ ದರ್ಶನ್​ಗೆ ಉಡುಗೊರೆಯಾಗಿ ನೀಡಿದ್ದಾರೆ.

ಇನ್ನು ಚಿರಂಜೀವಿ ಸರ್ಜಾ ನಾಯಕರಾಗಿರುವ “ಸಿಂಗ’ ಚಿತ್ರದ “ಬ್ಯೂಟಿಫ‌ುಲ್‌ ಹುಡುಗಿ’ ಹಾಡನ್ನು ಇತ್ತೀಚೆಗೆ ದರ್ಶನ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಮೇಘನಾ ರಾಜ್‌ ನಾಯಕಿಯಾಗಿರುವ “ಇರುವುದೆಲ್ಲವ ಬಿಟ್ಟು’ ಚಿತ್ರಕ್ಕೂ ದರ್ಶನ್‌ ಸಾಥ್‌ ಕೊಟ್ಟಿದ್ದರು. ಇನ್ನು ದರ್ಶನ್ ನಟನೆಯ ‘ಕುರುಕ್ಷೇತ್ರ’ ಸಿನಿಮಾದಲ್ಲಿ ಮೇಘನಾ ರಾಜ್ ಕೂಡ ಅಭಿನಯಸಿದ್ದಾರೆ.

 

ಇನ್ನು ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿರುವ ಮೇಘನಾ, “ದರ್ಶನ್‌ ಸರ್‌ ನಮ್ಮ ಕುಟುಂಬ ಸದಸ್ಯರಿದ್ದಂತೆ. ಅವರಿಗೆ ನಮ್ಮ ಕಡೆಯಿಂದ ಈ ಪ್ರೀತಿಯ ಉಡುಗೊರೆ’ ಎಂದಿದ್ದಾರೆ. ದರ್ಶನ್ ಅವರಿಗೆ ಚಿರು ನಾಯಿಮರಿಯನ್ನು ನೀಡುವಾಗ ಫೋಟೋ ಕ್ಲಿಕ್ಕಿಸಿಕೊಂಡಿದ್ದು,ಇನ್‍ಸ್ಟಾಗ್ರಾಂನಲ್ಲಿ , ಆ ಫೋಟೋವನ್ನು ಮೇಘನಾ ಅವರು ಶೇರ್ ಮಾಡಿಕೊಂಡಿದ್ದಾರೆ.ಈಗ ಫೋಟೋ ಸಖತ್ ವೈರಲ್ ಆಗಿದೆ.

Sponsored :


9900071610