ರಾಷ್ಟ್ರರಾಜಧಾನಿ ತಲುಪಿದ ರಾಜ್ಯ ಭಿನ್ನಮತ-ಇದು ಕೈ ಕಲಹದ ಕ್ಲೈಮ್ಯಾಕ್ಸ್​!

2583

 

ad

ಜಾರಕಿಹೊಳಿ ಬ್ರದರ್ಸ್​ ಅಸಮಧಾನದಿಂದ ಕಂಗಾಲಾಗಿದ್ದ ಕಾಂಗ್ರೆಸ್​ ಇನ್ನು ಜಾರಕಿಹೊಳಿ ಬ್ರದರ್ಸ ಮನವೊಲಿಸಲು ಇನ್ನಿಲ್ಲದ ಸರ್ಕಸ್​ ನಡೆಸಿದೆ. ರಾಜ್ಯ ರಾಜಧಾನಿಯಲ್ಲಿ ನಡೆಯುತ್ತಿದ್ದ ಹೈಡ್ರಾಮಾಗಳೆಲ್ಲ ದೆಹಲಿಗೆ ಶಿಫ್ಟ್​ ಆಗಿದ್ದು, ರಾಷ್ಟ್ರರಾಜಧಾನಿಯಲ್ಲಿ ಕಾಂಗ್ರೆಸ್​ ರಾಜಕೀಯ ಹೈಡ್ರಾಮ ಮುಂದುವರೆದಿದೆ.
ರಾಜ್ಯ ಸರ್ಕಾರದ ಎದೆಯಲ್ಲಿ ನಡುಕ ಮೂಡಿಸಿದ್ದ ಕಾಂಗ್ರೆಸ್​ ನ ಹಿರಿಯ ನಾಯಕ ಸತೀಶ್ ಜಾರಕಿಹೊಳಿ ಇಂದು ಕಾಂಗ್ರೆಸ್​ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಭೇಟಿ ಮಾಡಿ ರಾಜಕೀಯ ವಿಚಾರಗಳ ಕುರಿತು ಚರ್ಚೆ ಮಾಡಲಿದ್ದಾರೆ. ಈಗಾಗಲೇ ಸತೀಶ್​ ಜಾರಕಿಹೊಳಿ ಜೊತೆ ಮುಖಾಮುಖಿ ಮಾತುಕತೆ ನಡೆಸಲು ವೇಣುಗೋಪಾಲ್​ಗೆ ರಾಹುಲ್​ ಗಾಂಧಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ವೇಣುಗೋಪಾಲ್ ಜೊತೆ ಸತೀಶ್ ಜಾರಕಿಹೊಳಿ ಮಾತುಕತೆ ನಡೆಸಲಿದ್ದಾರೆ. ಇದರ ಬಳಿಕ ಸತೀಶ್​ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿ ಮಾಡಲಿದ್ದಾರೆ. ಇನ್ನು ಈ ಭೇಟಿ ವೇಳೆ ಯಾವುದೇ ರಾಜ್ಯ ನಾಯಕರಿಗೆ ಅವಕಾಶವಿಲ್ಲ ಎನ್ನಲಾಗಿದೆ.
ಕೇವಲ ಸತೀಶ್ ಜಾರಕಿಹೊಳಿ ಮಾತ್ರವಲ್ಲದೇ, ಮಾಜಿ ಸಿಎಂ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ದೆಹಲಿಯಲ್ಲೇ ಬೀಡು ಬಿಟ್ಟಿದ್ದಾರೆ. ಒಟ್ಟಿನಲ್ಲಿ ರಾಜ್ಯದ ರಾಜಕೀಯ ಹಂಗಾಮಾ ಇದೀಗ ದೆಹಲಿಯ ಅಂಗಳ ಸೇರಿದೆ.

Sponsored :

Related Articles