ಸಲ್ಮಾನ್ ಖಾನ್​ ಜೊತೆ ಕಿಚ್ಚ ಸುದೀಪ್ ಸಖತ್ ಡ್ಯಾನ್ಸ್​! ಇಬ್ಬರು ದಿಗ್ಗಜರಿಗೆ ಡ್ಯಾನ್ಸ್ ಹೇಳಿಕೊಟ್ಟಿದ್ದ್ಯಾರು ಗೊತ್ತಾ?!

527

ಕಿಚ್ಚ ಸುದೀಪ್  ಸಲ್ಮಾನ್​ ಖಾನ್​ ಜೊತೆ ಸಿನಿಮಾ ಮಾಡ್ತಿರೋದು ಈಗ ಹಳೆ ವಿಷಯ. ಅದರಲ್ಲೇನು ಹೊಸ ವಿಷ್ಯ ಅಂದ್ರಾ, ಸಲ್ಮಾನ್ ಖಾನ್​​ ಜೊತೆ ಸ್ಕ್ರಿನ್​ ಹಂಚಿಕೊಳ್ತಿರೋ ಸುದೀಪ್ ಈಗ ಸಲ್ಮಾನ್​ ಜೊತೆ ಡ್ಯಾನ್ಸ್ ಮಾಡಿ ಸುದ್ದಿಯಾಗಿದ್ದಾರೆ.  ಹೌದು ಈಗ ಪ್ರಭುದೇವ, ಸಲ್ಮಾನ್ ಖಾನ್ ಜೊತೆಗೆ ಸುದೀಪ್ ಮಸ್ತ್ ಡ್ಯಾನ್ಸ್ ಮಾಡಿದ್ದು ಸಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ .

ad

 

ಡ್ಯಾನ್ಸ್​ನಿಂದಲೇ ಫೇಮಸ್ ಆಗಿರೋ ಪ್ರಭುದೇವ ಸಲ್ಮಾನ್ ಖಾನ್ ಮತ್ತು  ಕಿಚ್ಚ ಸುದೀಪ್​ಗೆ ಡ್ಯಾನ್ಸ್ ಹೇಳಿಕೊಟ್ಟಿದ್ದು ಇನ್ನೊಂದು ವಿಶೇಷ. ಹೌದು   ಪ್ರಭುದೇವ ತಮ್ಮ ಶೈಲಿಯ ಡ್ಯಾನ್ಸ್ ಸಲ್ಮಾನ್ ಹಾಗೂ ಸುದೀಪ್ ಗೆ ಪ್ರಭುದೇವ ಹೇಳಿ ಕೊಟ್ಟಿದ್ದು . ಈ ವಿಡಿಯೋವನ್ನು ಸಲ್ಮಾನ್ ಖಾನ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 

ಇನ್ನು ಸಲ್ಮಾನ್ ಖಾನ್ ನಟನೆಯ ‘ದಬಾಂಗ್ 3’ ಸಿನಿಮಾದಲ್ಲಿ ಸುದೀಪ್ ಕಾಣಿಸಿಕೊಳ್ಳುತ್ತಿದ್ದು. ಈ ಚಿತ್ರದ  ಮುಖ್ಯ ಪಾತ್ರದಲ್ಲಿ ಕಿಚ್ಚ ಅಭಿನಯಿಸುತ್ತಿದ್ದಾರೆ.ಇನ್ನು ಪ್ರಭುದೇವ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದು. ಬಾಲಿವುಡ್ ನಲ್ಲಿ ಕಿಚ್ಚ ಇದೇ ಮೊದಲ ಬಾರಿಗೆ ಸಲ್ಮಾನ್ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.ಈಗಾಗಲೇ ದಬಾಂಗ್ 3 ಸಿನಿಮಾದ ಚಿತ್ರೀಕರಣ ಆರಂಭವಾಗಿದೆ.   ಸೋನಾಕ್ಷಿ ಸನ್ಹಾ, ಅರ್ಬಾಜ್ ಖಾನ್, ಮಹೀ ಗಿಲ್, ನಿಖ್ತಿನ್ ಧೀರ್ ಇನ್ನು ಹಲವರು ನಟಿಸಲಿದ್ದಾರೆ.

Sponsored :

Related Articles