ಟಿಟಿಡಿ ಸದಸ್ಯ ಸ್ಥಾನಕ್ಕೆ ಸುಧಾಮೂರ್ತಿ ರಾಜೀನಾಮೆ! ಇಷ್ಟಕ್ಕೂ ರಾಜೀನಾಮೆಗೆ ಅಸಲಿ ಕಾರಣವೇನು ಗೊತ್ತಾ?!

4064

ದೇಶದ ಪ್ರತಿಷ್ಠಿತ ಹಾಗೂ ಶೃದ್ಧೆಯ ಧಾರ್ಮಿಕ ಕೇಂದ್ರವಾದ ತಿರುಪತಿ ತಿಮ್ಮಪ್ಪ ದೇವಾಲಯದ ಆಡಳಿತ ಮಂಡಳಿಯ ಸದಸ್ಯೆಯಾಗಿದ್ದ ಇನ್ಪೋಸಿಸ್​ ಚೇರ್ ಪರ್ಸನ್​ ಸುಧಾಮೂರ್ತಿ ತಮ್ಮ ಟ್ರಸ್ಟ್​ ಬೋರ್ಡ್​ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.


ಆಂಧ್ರಪ್ರದೇಶದ ನೂತನ ಸಿಎಂ ಆಗಿ ಜಗನ್ ಮೋಹನ್ ರೆಡ್ಡಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಟಿಟಿಡಿ ಆಡಳಿತ ಮಂಡಳಿಗೆ ಮೇಜರ್ ಸರ್ಜರಿ ಮಾಡುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಅಲ್ಲದೇ ಟಿಟಿಡಿ ಬೋರ್ಡ್ ಅಧ್ಯಕ್ಷರಾಗಿ ಜಗನ್ ತಮ್ಮ ಸಂಬಂಧಿ ವೈ.ವಿ.ಸುಬ್ಬಾ ರೆಡ್ಡಿಯವರನ್ನು ಭೇಟಿ ಮಾಡುತ್ತಾರೆ ಎನ್ನಲಾಗುತ್ತದೆ.

ad


ಅಲ್ಲದೇ ಟಿಟಿಡಿ ಬೋರ್ಡ್​ಗೆ ನೇಮಕವಾಗಲಿದ್ದಾರೆ ಎನ್ನಲಾದ ವೈ.ವಿ.ಸುಬ್ಬಾರೆಡ್ಡಿ ಕ್ರಿಶ್ಚಿಯನ್​ ಎಂಬ ಮಾತು ಕೂಡಾ ಕೇಳಿಬಂದಿದ್ದು, ರಾಷ್ಟ್ರದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಈ ಎಲ್ಲ ಬೆಳವಣಿಗೆಯ ಮಧ್ಯೆ ಸುಧಾಮೂರ್ತಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.


ಈ ಬಗ್ಗೆ ಸ್ಪಷ್ಟನೆ ನೀಡಿದ ಸುಧಾಮೂರ್ತಿ, ಈ ಹಿಂದಿನ ಸರ್ಕಾರ ನನ್ನನ್ನು ಟಿಟಿಡಿ ಸದಸ್ಯರನ್ನಾಗಿ ನೇಮಿಸಿತ್ತು. ಆದರೆ ಈಗ ಸರ್ಕಾರ ಬದಲಾಗಿರುವುದರಿಂದ ನಾನು ಸದಸ್ಯೆಯಾಗಿ ಮುಂದುವರಿಯುವುದು ಸೂಕ್ತವಲ್ಲ ಎಂದು ನಾನು ರಾಜೀನಾಮೆ ನೀಡಿದ್ದೇನೆ. ಒಂದೊಮ್ಮೆ ಈ ಸರ್ಕಾರವೂ ನನ್ನನ್ನು ಸದಸ್ಯೆಯನ್ನಾಗಿ ಮುಂದುವರಿಸಲು ಇಚ್ಛಿಸಿದಲ್ಲಿ ನಾನು ಮುಂದುವರೆಯುತ್ತೇನೆ ಎಂದಿದ್ದಾರೆ.


2017 ರಲ್ಲಿ ಸುಧಾಮೂರ್ತಿಯವರನ್ನು ಟಿಟಿಡಿ ಸದಸ್ಯೆಯನ್ನಾಗಿ ಈ ಹಿಂದಿನ ಸಿಎಂ ನೇಮಿಸಿದ್ದರು. ಬಳಿಕ 2018 ರಲ್ಲೂ ಸುಧಾಮೂರ್ತಿಯವರನ್ನು ಸದಸ್ಯೆಯನ್ನಾಗಿ ಮುಂದುವರಿಸಿದ್ದರು.

ಇದೀಗ ಸುಧಾಮೂರ್ತಿ ರಾಜೀನಾಮೆ ನೀಡಿದ್ದಾರೆ. ಟಿಟಿಡಿ ಬೋರ್ಡ್​ ನೇಮಕ ಸಧ್ಯ ಆಂಧ್ರಪ್ರದೇಶದ ಚರ್ಚೆಯ ವಿಷಯವಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ವೈ.ವಿ.ರೆಡ್ಡಿ ಹಾಗೂ ನಟ ಮೋಹನ್ ಬಾಬು ಹೆಸರು ಕೂಡ ಕೇಳಿಬಂದಿದೆ.

Sponsored :

Related Articles