ಸಿಲಿಕಾನ ಸಿಟಿಯಲ್ಲಿ ಸನ್ನಿ ಲಿಯೋನ್- ನವೆಂಬರ್ 3 ರಂದು ಮ್ಯೂಸಿಕ್​ ನೈಟ್​ ರಂಗೇರಿಸಲಿದೆ ಸನ್ನಿ ಡ್ಯಾನ್ಸ್​ !

106
9900071610

 

ad

 2018 ರ ಹೊಸ ವರ್ಷಾಚರಣೆ ವೇಳೆ ಸನ್ನಿ ಲಿಯೋನ್​ ನೋಡೋ ಭಾಗ್ಯ ಕಳೆದುಕೊಂಡಿದ್ದ ಸಿಲಿಕಾನ ಸಿಟಿಯ ಸನ್ನಿ ಪ್ರಿಯರಿಗೆ ಸಿಹಿಸುದ್ದಿಯೊಂದು ಕಾದಿದೆ. ಹೌದು ಇದೇ ನವೆಂಬರ್​ 3 ರಂದು ದಿ.ಟೈಮ್ಸ್​ ಕ್ರಿಯೇಷನ್ಸ್​ ಬಾಲಿವುಡ್​ ಪ್ಯೂಶನ್ ಮ್ಯೂಸಿಕ್​ ನೈಟ್​ ಕಾರ್ಯಕ್ರಮಕ್ಕಾಗಿ ಬಾಲಿವುಡ್ ಬೆಡಗಿ ಸನ್ನಿಲಿಯೋನ್ ನಗರಕ್ಕೆ ಆಗಮಿಸಲಿದ್ದು, ಮೂರು ನೃತ್ಯಪ್ರದರ್ಶನ ನೀಡಿ ರಸಿಕರ ಮನಸೊರೆಗೊಳ್ಳಲಿದ್ದಾರೆ.
ಹಿಂದಿನ ಭಾರಿ ಭದ್ರತೆ ಕಾರಣಕ್ಕೆ ಕಾರ್ಯಕ್ರಮ ರದ್ದಾದ ಹಿನ್ನೆಲೆಯಲ್ಲಿ ಈ ಭಾರಿ ಸಾಕಷ್ಟು ಮುಂಜಾಗ್ರತೆಕೈಗೊಂಡಿರುವ ಕಾರ್ಯಕ್ರಮ ಆಯೋಜಕ ಹರೀಶ್​​ರವರು ಈಗಾಗಲೇ ಕಾರ್ಯಕ್ರಮಕ್ಕೆ ಅಗತವ್ಯವಾದ ಅನುಮತಿಯನ್ನು ಪೊಲೀಸ್ ಇಲಾಖೆಯಿಂದ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಕನ್ನಡ ಪರ ಸಂಘಟನೆಯ ಮುಖ್ಯಸ್ಥರನ್ನು ಹರೀಶ್​ರವರು ಭೇಟಿ ಮಾಡಿದ್ದು, ಅಲ್ಲಿಯೂ ಕೂಡ ಕನ್ನಡದ ಸೊಗಡಿನ ಜೊತೆ ನಡೆಯುವ ಈ ಕಾರ್ಯಕ್ರಮಕ್ಕೆ ಬೆಂಬಲ ದೊರೆತಿದೆ.

ಇನ್ನು ಈ ಕಾರ್ಯಕ್ರಮದಲ್ಲಿ ಹಾಟ್ ಬೆಡಗಿ ಸನ್ನಿಲಿಯೋನ್​, ಡಿಕೆ.ಬಾಸ್ ಚಿತ್ರದ ಶೇಷಮ್ಮ ಹಾಡು ಸೇರಿದಂತೆ ಒಟ್ಟು ಮೂರು ಹಾಡುಗಳಿಗೆ ಮೈಚಳಿ ಬಿಟ್ಟು ನರ್ತಿಸಲಿದ್ದಾರೆ. ಇನ್ನು ಸನ್ನಿಲಿಯೋನ್​ ಜೊತೆ ರಘು ದೀಕ್ಷಿತ್​ ಅವರು ಮ್ಯೂಸಿಕ್​ ಕೂಡ ಇರಲಿದೆ. ಹೆಬ್ಬಾಳದ ಮಾನ್ಯತಾ ಟೆಕ್​ ಪಾರ್ಕ್​ ಸನಿಹದಲ್ಲಿರುವ ವೈಟ್​ ಆರ್ಚಿಡ್​ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅಂದಾಜು 5 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.

 

ಯುವಕರ ಎದೆಬಡಿತ ಹೆಚ್ಚಿಸುವ ಈ ಕಾರ್ಯಕ್ರಮಕ್ಕೆ ಟಿಕೇಟ್​ಗಳು ಈಗಾಗಲೇ ಬುಕ್​ ಮೈ ಶೋ ಆ್ಯಪ್​​ನಲ್ಲಿ ಲಭ್ಯವಿದ್ದು, ಜನರು ಅದರಲ್ಲಿ ತಮ್ಮ ಟಿಕೇಟ್ ಕಾದಿರಿಸುವ ಮೂಲಕ ಸನ್ನಿಲಿಯೋನ್​ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಕೇವಲ ಡ್ಯಾನ್ಸ್ ಮಾತ್ರವಲ್ಲದೇ 15 ನಿಮಿಷಗಳ ಕಾಲ ಸನ್ನಿ ಲಿಯೋನ್ ಜೊತೆ ಸಂವಾದ ನಡೆಸುವ ಅವಕಾಶ ಕೂಡ ಪ್ರೇಕ್ಷಕರಿಗೆ ಸಿಗಲಿದೆ.
ಇನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸ್ವತಃ ಸನ್ನಿ ಲಿಯೋನ ಕೂಡ ಸಾಕಷ್ಟು ಉತ್ಸುಕರಾಗಿದ್ದು, ಈ ಬಗ್ಗೆ ಕನ್ನಡದಲ್ಲಿ ನಮಸ್ತೆ ಬೆಂಗಳೂರು ಎನ್ನುವ ವಿಡಿಯೋವೊಂದನ್ನು ಸಿದ್ಧಪಡಿಸಿ ಸನ್ನಿಲಿಯೋನ ತಮ್ಮ ಪೇಸ್​ ಬುಕ್​ ಪೇಜ್​ನಲ್ಲಿ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ದೀಪಾವಳಿ ವೇಳೆಯಲ್ಲಿ ನಗರದಲ್ಲಿ ಸನ್ನಿ ಲಿಯೋನ್​ ಎಂಬ ತೌಸಂಡ್​ ವಾಲ್ಟ್​​ ದೀಪ ಬೆಳಗಲಿದ್ದು, ಯುವಜನತೆಯನ್ನು ಹುಚ್ಚೆಬ್ಬಿಸುವುದಂತು ಗ್ಯಾರಂಟಿ.

Sponsored :


9900071610