ಈ ವರ್ಷವೂ ಗೂಗಲ್ ಸರ್ಚ್​ನಲ್ಲಿ ನಂ 1 ಸ್ಥಾನ ಉಳಿಸಿಕೊಂಡ ಸೆಲಿಬ್ರೆಟಿ! ಪ್ರಧಾನಿ ಮೋದಿಯನ್ನೇ ಹಿಂದಿಕ್ಕಿದ ಈ ಸುಂದರಿ ಯಾರು ಗೊತ್ತಾ?!

3792
9900071610

ಪ್ರತಿವರ್ಷದ ಹಾಗೆಯೇ ಈ ವರ್ಷವು ಕೂಡ ಗೂಗಲ್ ನಲ್ಲಿ ಸರ್ಚ್​ ಆದವರು ಯಾರು ? ಎಂಬ ಪ್ರಶ್ನೆಗೆ ಅಚ್ಚರಿಯ ಉತ್ತರವೊಂದು ಸಿಕ್ಕಿದೆ ಏನಪ್ಪಾ ಅದು ಅಂತೀರಾ? ಹೌದು ಈ ವರ್ಷದ ಅರ್ಧದಷ್ಟು ಭಾಗ ಈಗಾಗಲೇ ಮುಗಿದಿದೆ. ಇನ್ನೂ ಈ ವರ್ಷದಲ್ಲಿ ಅತೀ ಹೆಚ್ಚು ಗೂಗಲ್ ನಲ್ಲಿ ಸರ್ಚ್​ ಆದವರು ಯಾರು ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಆದರೆ ಈ ಭಾರಿ ಅತಿ ಹೆಚ್ಚು ಸರ್ಚ್​ಗೊಳಗಾದವರು ಯಾರು ಎಂಬ ಪ್ರಶ್ನೆಗೆ ನಿಮ್ಮ ಉತ್ತರ ಮೋದಿ ಎಂದಾಗಿದ್ದಲ್ಲಿ ತಪ್ಪು. ಇಷ್ಟಕ್ಕೂ ಈ ಭಾರಿ ಅತಿಹೆಚ್ಚು ಸರ್ಚ್​ಗೊಳಗಾದವರು ಯಾರು ಗೊತ್ತಾ ಮತ್ಯಾರು ಮಾದಕ ಕನ್ಯೆ ಸನ್ನಿ ಲಿಯೋನ್​.

ad

ಯಾರು ಗೂಗಲ್​ನ ಜನಪ್ರಿಯ ವ್ಯಕ್ತಿ ಎಂದರೇ ಸಾಮಾನ್ಯವಾಗಿ ಎಲ್ಲರೂ ಪ್ರಧಾನಿ ನರೇಂದ್ರ ಮೋದಿ ಇರಬಹುದು ಎಂದು ಹೇಳುತ್ತಾರೆ. ಏಕೆಂದರೆ ಈ ವರ್ಷದ ಲೋಕಸಭಾ ಸಭಾಚುನಾವಣೆಯಲ್ಲಿ ಹೆಚ್ಚು ಗಮನ ಸೆಳೆದಿದ್ದರು, ಅಲ್ಲದೆ ಅತೀ ಹೆಚ್ಚು ಮತ ಪಡೆದು ಮತ್ತೊಮ್ಮೆ ಭಾರತದ ಪ್ರಧಾನಿ ಸ್ಥಾನಕ್ಕೇರಿದೆರು. ಅಲ್ಲದೆ ಇಡೀ ಭಾರತದ್ಯಾಂತ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕೇಸರಿ ಬಾವುಟ ರಾರಾಜಿಸಿತ್ತು. ಹಾಗಾಗಿ ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆದ ಭಾರತೀಯ ಸೆಲೆಬ್ರಿಟಿ ಪಟ್ಟಿಯಲ್ಲಿ ಪ್ರಧಾನಿ ಮೋದಿ ಮೊದಲ ಸ್ಥಾನದಲ್ಲಿರಬಹುದು ಎಂದು ಯೋಚಿಸಿರುತ್ತೀರಾ. ಆದರೆ ಹಾಗಾಗಿಲ್ಲ.

ಈ ವರ್ಷದ ಆಗಸ್ಟ್ ತಿಂಗಳವರೆಗೂ ಗೂಗಲ್ ನಲ್ಲಿ ಹೆಚ್ಚು ಸರ್ಚ್ ಆದವರ ಪೈಕಿ ಮೊದಲ ಸ್ಥಾನದಲ್ಲಿರುವುದು ಬಾಲಿವುಡ್ ನ ಹಾಟ್ ಬೆಡಗಿ ಸನ್ನಿ ಲಿಯೋನ್ . ಕಳೆದ ಬಾರಿಯೂ ಗೂಗಲ್ ನಲ್ಲಿ ಸರ್ಚ್​ ಆದವರ ಪೈಕಿ ನಂ.1 ಸ್ಥಾನ ಕಾಯ್ದಿರಿಸಿಕೊಂಡಿದ್ದ ಸನ್ನಿ ಲಿಯೋನ್ ಈ ಬಾರಿಯೂ ಸಹ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಅಲ್ಲದೆ ಅಸ್ಸಾಂ, ಮಣಿಪುರ್ ಭಾಗದವರು ಗೂಗಲ್ ನಲ್ಲಿ ಸನ್ನಿ ಲಿಯೋನ್ ರನ್ನು ಹೆಚ್ಚು ಹುಡುಕಲ್ಪಟ್ಟಿದ್ದಾರೆ ಎನ್ನಲಾಗಿದೆ. ಇನ್ನೂ ಈ ವಿಚಾರ ತಿಳಿದ ಬಳಿಕ ಮಾತನಾಡಿದ ಸನ್ನಿ ”ಈ ವಿಷ್ಯ ನನಗೆ ನನ್ನ ಅಭಿಮಾನಿಗಳಿಂದ ತಿಳಿಯಿತು. ನಿರಂತರವಾಗಿ ನನಗಾಗಿ ಇರುವ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ. ಇದು ಅದ್ಭುತ ಅನುಭವ” ಎಂದು ಹೇಳುವ ಮೂಲಕ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಇನ್ನೂ ಈ ಬಾರಿ ಪ್ರಕೃತಿ ವಿಕೋಪದಿಂದಾಗಿ ಉತ್ತರ ಕರ್ನಾಟಕದ ಹಲವು ಪ್ರದೇಶಗಳು ಮುಳುಗಿ ಹೋಗಿದ್ದು, ಕರ್ನಾಟಕದ ನೆರೆ ಸಂತ್ರಸ್ತರಿಗೆ ಪರಿಹಾರವಾಗಿ ಸನ್ನಿ ಸುಮಾರು 2 ಕೋಟಿ ನೆರವು ನೀಡಿದ್ದಾರೆ ಎನ್ನಲಾಗುತ್ತಿದೆ.

Sponsored :


9900071610