ಇನ್ಮುಂದೆ 5 ತರಗತಿ ಪಠ್ಯದಲ್ಲಿ ಸೂಪರ್ ಸ್ಟಾರ್​ ರಜನಿಕಾಂತ್​! ತಲೈವಾ ಸಾಧನೆ ಪರಿಚಯಿಸಲು ತಮಿಳುನಾಡು ಸರ್ಕಾರದ ಪ್ಲ್ಯಾನ್!!

350
9900071610

ಸ್ಯಾಂಡಲ್ ವುಡ್ ನ ನಟ ಸಾರ್ವಭೌಮ ಡಾ. ರಾಜ್ ಕುಮಾರ್, ಪಂಡರಿ ಬಾಯಿ ಸೇರಿದಂತೆ ಹಲವು ಸ್ಟಾರ್ ಗಳ ಜೀವನ ಮತ್ತು ಸಾಧನೆಗಳು ಶಾಲಾ ಮಕ್ಕಳ ಪಠ್ಯಗಳಲ್ಲಿ ಈಗಾಗಲೇ ಪ್ರಕಟವಾಗಿದೆ. ಇದೀಗಾ ಇದೇ ಸಾಲಿಗೆ ಕಾಲಿವುಡ್ ನಟ ಸೂಪರ್ ಸ್ಟಾರ್ ರಜನಿಕಾಂತ್ ಹೊಸ ಸೇರ್ಪಡೆ.

ad

ಹೌದು ತಮಿಳುನಾಡಿನಲ್ಲಿ ಇನ್ಮುಂದೆ ಶಾಲಾಮಕ್ಕಳಿಗೆ ರಜನಿಕಾಂತ್​ ಜೀವನ ಪಠ್ಯವಾಗಲಿದೆ. ಸೂಪರ್ ಸ್ಟಾರ್ ಖ್ಯಾತಿಯ ರಜನಿಕಾಂತ್ ಜೀವನ ಮತ್ತು ಸಾಧನೆ ಕುರಿತಂತೆ 5ನೇ ತರಗತಿಯ ಶಾಲಾ ಮಕ್ಕಳ ಪಠ್ಯಕ್ರಮದಲ್ಲಿ ಸೇರಿಸಲು ತಮಿಳುನಾಡಿನ ಶಿಕ್ಷಣ ಇಲಾಕೆ ನಿರ್ಧರಿಸಿದೆ.

ರಾಜಕೀಯ, ಕಲೆ, ಸಾಹಿತ್ಯ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಜೀವನವನ್ನು ತಮಿಳುನಾಡು ಶಿಕ್ಷಣ ಇಲಾಖೆ ಮಕ್ಕಳ ಪಠ್ಯ ಪುಸ್ತಕದಲ್ಲಿ ಸೇರಿಸಿ ಅವರ ಬದುಕು ಹಾಗೂ ಅವರ ಸಾಧನೆಯ ಬಗೆಗೆ ಮಕ್ಕಳಿಗೆ ಪರಿಚಯಿಸುತ್ತಾ ಬಂದಿದೆ.

 

ಸದ್ಯ ಬಡತನದಲ್ಲೇ ಹುಟ್ಟಿ ಬೆಳೆದ ರಜಿನಿಕಾಂತ್ ಬದುಕು, ವೃತ್ತಿ ಜೀವನ ,ಸಾಧನೆ ಅವರ ಕಠಿಣ ಪರಿಶ್ರಮ ಹಾಗೂ ಪ್ರಯತ್ನದಿಂದ ಯಶಸ್ಸಿನ ಉತ್ತುಂಗಕ್ಕೆ ಏರಿದ ರೀತಿ ಇನ್ನೂ ಹಲವು ವಿಚಾರಗಲನ್ನು ತಿಳಿಸುವ ಸಲುವಾಗಿ 5ನೇ ತರಗತಿಯ ಮಕ್ಕಳ ಪಠ್ಯಕ್ರಮದಲ್ಲಿ ‘Rags to Riches stories’ ಎಂಬ ಶೀರ್ಷಿಕೆಯಲ್ಲಿ ಪಠ್ಯ ಬರೆಯಲಾಗಿದ್ದು, ರಜಿನಿಕಾಂತ್ ರ ಬಗೆಗೆ ಪರಿಚಯ ಮಾಡಿಕೊಡಲಾಗಿದೆ.

ಇನ್ನೂ ಈ ವಿಚಾರ ಬಹಿರಂಗವಾಗುತ್ತಿದಂತೆ ರಜನಿಕಾಂತ್ ಅಭಿಮಾನಿಗಳು ರಾಜನಿಕಾಂತ್ ಪರ ಜೈಕಾರ ಹಾಕುತ್ತಾ, ರಜನಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಹಾಲಿನಾಭಿಷೇಕ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

 

 

Sponsored :


9900071610