ಮಂತ್ರಿ ಮಂಡಲ ಸೇರೋ ಅತೃಪ್ತರ ಕನಸಿಗೆ ಸುಪ್ರೀಂ ಬ್ರೇಕ್​​! ಅನರ್ಹತೆ ಆದೇಶಕ್ಕೆ ಸಿಕ್ಕಿಲ್ಲ ತಡೆಯಾಜ್ಞೆ!!

1573
9900071610

ಬಿಜೆಪಿ ಸರ್ಕಾರದ ಮಂತ್ರಿಮಂಡಳ ಸೇರಿ ಮಂತ್ರಿಯಾಗೋ ಕನಸಿನಲ್ಲಿದ್ದ ಅನರ್ಹ ಶಾಸಕರಿಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದ್ದು, ಬೇಗ ಮಂತ್ರಿಯಾಗೋ ಅನರ್ಹ ಶಾಸಕರ ಆಸೆಗೆ ಸುಪ್ರೀಕೋರ್ಟ್ ತಣ್ಣೀರೆರಚಿದೆ. ಅನರ್ಹತೆಯ ಕುರಿತು ಸ್ಪೀಕರ್ ಆದೇಶಕ್ಕೆ ಸುಪ್ರೀಂ ತಡೆ ನೀಡುತ್ತೆ ಅನ್ನೋ ಆಸೆಯಲ್ಲಿದ್ದ ಅನರ್ಹರಿಗೆ ಸುಪ್ರೀಂ ಶಾಕ್​ ನೀಡಿದ್ದು, ತುರ್ತು ವಿಚಾರಣೆ ಕೈಬಿಟ್ಟು ಅರ್ಜಿಯನ್ನು ರಿಜಿಸ್ಟ್ರಾರ್​ಗೆ ಸಲ್ಲಿಸಲು ಸೂಚಿಸಿದೆ.

ad


ಇದರಿಂದ ತುರ್ತು ವಿಚಾರಣೆ, ಸ್ಪೀಕರ್ ಆದೇಶಕ್ಕೆ ತಡೆಯಾಜ್ಞೆ ಹೀಗೆ ತಮ್ಮ ಅನರ್ಹತೆ ಸಮಸ್ಯೆ ಸುಲಭವಾಗಿ ಬಗೆಹರಿಯಲಿದೆ ಎಂದ ನೀರಿಕ್ಷೆಯಲ್ಲಿದ್ದ ಅನರ್ಹ ಶಾಸಕರಿಗೆ ಶಾಕ್​ ಎದುರಾಗಿದೆ. ತಮ್ಮನ್ನು ಅನರ್ಹಗೊಳಿಸಿ ಸ್ಪೀಕರ್​ ನೀಡಿದ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಅತೃಪ್ತರ ಪರ ವಕೀಲ ಮುಕುಲ್ ರೋಹ್ಟಗಿ ಅರ್ಜಿ ಸಲ್ಲಿಸಿದ್ದರು.

ಆದರೆ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ತ್ರೀ ಸದಸ್ಯ ಪೀಠದಿಂದ ಅರ್ಜಿ ತಿರಸ್ಕರಿಸಿದ್ದು, ಅಗಸ್ಟ್ 19ಕ್ಕೆ ವಿಚಾರಣೆ ನಡೆಸಿ ಎಂಬ ಅರ್ಜಿಯನ್ನು ನ್ಯಾಯಪೀಠ ರಿಜಿಸ್ಟಾರ್​ಗೆ ರವಾನಿಸಿದೆ. ನಿಮ್ಮ ಅರ್ಜಿಯನ್ನು ರಿಜಿಸ್ಟ್ರಾರ್​ಗೆ ರವಾನಿಸಿದ್ದೇವೆ. ಅರ್ಜೆಂಟ್​ ಇದ್ದರೇ ರಿಜಿಸ್ಟ್ರಾರ್ ಮುಂದೇ ಮೆಮೋ ಸಲ್ಲಿಸಿ ಎಂದು ನ್ಯಾಯಪೀಠ ರೋಹ್ಟಗಿಗೆ ಸೂಚನೆ ನೀಡಿದೆ.


ಇನ್ನು ಸುಪ್ರೀಂ ಕೋರ್ಟ್​ನಲ್ಲಿನ ಈ ಬೆಳವಣಿಗೆಯಿಂದ ಅಗಸ್ಟ್ 18 ರಂದು ಸಂಪುಟ ಸೇರೋ ಅತೃಪ್ತರ ಕನಸು ಭಗ್ನಗೊಂಡಂತಾಗಿದ್ದು, ಸ್ಪೀಕರ್ ಆದೇಶಕ್ಕೂ ತಡೆಯಾಜ್ಞೆ ಸಿಗದೇ ಇರೋದರಿಂದ ಬೈ ಎಲೆಕ್ಷನ್​ನಿಂದಲೂ ದೂರ ಉಳಿಯುವ ಭೀತಿ ಎದುರಾಗಿದೆ. ಈ ಮಧ್ಯೆ ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣಾ ಆಯೋಗಕ್ಕೆ ಮನವಿ ನೀಡಿದಲ್ಲಿ ಖಾಲಿ ಇರುವ ಅನರ್ಹರ 17 ಸ್ಥಾನಕ್ಕೆ ಎಲೆಕ್ಷನ್​ ಘೋಷಣೆಯಾಗಲಿದ್ದು, 3 ತಿಂಗಳೊಳಗೆ ನಡೆಯುವ ಎಲೆಕ್ಷನ್​ನಿಂದ ಅನರ್ಹರು ದೂರ ಉಳಿಯಬೇಕಾದ ಸ್ಥಿತಿ ಎದುರಾಗಿದೆ.

Sponsored :


9900071610