ವಿವಿಪ್ಯಾಟ್​ ಪರಿಶೀಲನೆಗೆ ಸುಪ್ರೀಂ ಮೊರೆ ಹೋದ ಸಂಸ್ಥೆ! ನಾನ್​ಸೆನ್ಸ್​​ ಎಂದ ಸುಪ್ರೀಂಕೋರ್ಟ್!!

799

ಇನ್ನೇನು ಲೋಕಸಭಾ ಫಲಿತಾಂಶಕ್ಕೆ ಕ್ಷಣಗಣನೆ ನಡೆದಿರುವ ಬೆನ್ನಲ್ಲೇ, 2019ರ ಮತ ಎಣಿಕೆ ವೇಳೆ ಶೇ 100 ರಷ್ಟು ವಿವಿ ಪ್ಯಾಟ್​ ಸ್ಲಿಪ್​ ಪರಿಶೀಲನೆ ಮಾಡಬೇಕೆಂದು ಕೋರಿ ಸುಪ್ರೀಂಗೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ್ದು, ಇದೊಂದು ನಾನ್​ಸೆನ್ಸ್​ ಎಂದು ಅಭಿಪ್ರಾಯಿಸಿದೆ.

ad

ಮೇ 23 ರಂದು ಲೋಕಸಭಾ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಇದರ ಬೆನ್ನಲ್ಲೇ, ಚೆನೈ ಮೂಲದ ಟೆಕ್​ ಫಾರ್​ ಆಲ್​ ಸಂಸ್ಥೆ ಮತ ಎಣಿಕೆ ವೇಳೆ ಶೇ 100 ರಷ್ಟು ವಿವಿ ಪ್ಯಾಟ್​​ ಸ್ಲಿಪ್​ ಪರಿಶೀಲನೆ ಮಾಡಬೇಕೆಂದು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಜಸ್ಟೀಸ್​​ ಅರುಣ್ ಮಿಶ್ರಾ ಇದೊಂದು ನಾನ್​ಸೆನ್ಸ್​ . ಈ ಮೊದಲು ಶೇ 50 ರಷ್ಟು ವಿವಿ ಪ್ಯಾಟ್​​ ಪರಿಶೀಲನೆಗೆ ವಿರೋಧ ಪಕ್ಷಗಳು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿಗಳೇ ವಜಾಗೊಳಿಸಿದ್ದಾರೆ.

ಹೀಗಿದ್ದಾಗಲೂ ಮತ್ತೆ ಅರ್ಜಿ ಸಲ್ಲಿಸಿದ್ದೀರಲ್ಲಾ ಎಂದು ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡರು. ಇನ್ನು ಸುಪ್ರೀಂ ಕೋರ್ಟ್​ ಈ ಆದೇಶ ಲೋಕಸಭಾ ಚುನಾವಣೆಯ ಬಳಿಕ ವಿವಿಪ್ಯಾಟ್​ ವಿಶ್ವಸಾರ್ಹತೆಯ ಬಗ್ಗೆ ಮಾತನಾಡುವ ಹುಮ್ಮಸ್ಸಿನಲ್ಲಿದ್ದ ರಾಜಕೀಯ ಪಕ್ಷಗಳಿಗೆ ತೀವ್ರ ಮುಖಭಂಗ ತಂದಿದೆ ಎಂದರೇ ತಪ್ಪಾಗಲಿಕ್ಕಿಲ್ಲ.

Sponsored :

Related Articles