ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ! ಸ್ನಾತಕೋತ್ತರ ಪ್ರವೇಶಕ್ಕೆ ನೀಟ್-ಪಿಜಿ ಕೈಬಿಟ್ಟ ಕೇಂದ್ರ ಸರ್ಕಾರ!!

1835
9900071610

ಡಾಕ್ಟರ್​ ಆಗೋ ಕನಸಿನಲ್ಲಿರೋ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಹೌದು ವೈದ್ಯಕೀಯ ಸ್ನಾತಕೋತ್ತರ ಪದವಿಗೆ ಸೇರಲು ಬಯಸಲು ಹೊಸದಾಗಿ ಪ್ರಸ್ತಾಪಿಸಲಾಗಿದ್ದ ನೀಟ್‌-ಪಿಜಿ ಪದ್ಧತಿಯನ್ನು ಕೈಬಿಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಎಂ.ಡಿ ಹಾಗೂ ಎಂ.ಎಸ್‌ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ನೀಟ್–ಪಿ.ಜಿ ಬದಲಾಗಿ, ಎಂಬಿಬಿಎಸ್ ಅಂತಿಮ ಪರೀಕ್ಷೆಯೇ ಸಾಕು ಎಂದು ಸರ್ಕಾರ ನಿರ್ಧರಿಸಿದೆ.

ad

ರಾಷ್ಟ್ರೀಯ ವೈದ್ಯಕೀಯ ಪರಿಷತ್‌ (ಎನ್‌ಎಂಸಿ) ಮಸೂದೆಯಲ್ಲಿನ ತಿದ್ದುಪಡಿ ಪ್ರಕಾರ, ‘ನ್ಯಾಷನಲ್‌ ಎಕ್ಸಿಟ್ ಟೆಸ್ಟ್ (ನೆಕ್ಸ್ಟ್‌) ಫಲಿತಾಂಶದ ಆಧಾರದ ಮೇಲೆ ಸ್ನಾತಕೋತ್ತರ ಪದವಿ ಪ್ರವೇಶ ನಡೆಯಲಿದೆ. ಎಂಬಿಬಿಎಸ್ ಕೋರ್ಸ್‌ ಅವಧಿಯಲ್ಲೇ ನಡೆಯುವ ‘ನೆಕ್ಸ್ಟ್‌’ ಪರೀಕ್ಷೆಯನ್ನು ದೇಶದಾದ್ಯಂತ ಸಾಮಾನ್ಯ ಪರೀಕ್ಷೆಯಾಗಿ ಜಾರಿಗೆ ತರಲಾಗುತ್ತದೆ. ಇನ್ನುಮುಂದೆ ವೈದ್ಯಕೀಯ ಸ್ನಾತಕೋತ್ತರ ಪದವಿ (ಪಿಜಿ) ಪ್ರವೇಶಕ್ಕೆ ಎಂಬಿಬಿಎಸ್ ಅಂತಿಮ ಪರೀಕ್ಷೆ ಪೂರ್ಣಗೊಂಡ ಬಳಿಕ ಯಾವುದೇ ಪ್ರತ್ಯೇಕ ಪರೀಕ್ಷೆಗೆ ಹಾಜರಾಗಬೇಕಿಲ್ಲ’ ಎಂದು ಉಲ್ಲೇಖಿಸಲಾಗಿದೆ.

ಈ ಕುರಿತ ತಿದ್ದುಪಡಿ ಮಸೂದೆಯು ಸದ್ಯದಲ್ಲೇ ಕೇಂದ್ರ ಸಚಿವ ಸಂಪುಟಕ್ಕೆ ಸಲ್ಲಿಕೆಯಾಗಲಿದೆ. ‍ಪ್ರಧಾನಿ ಕಚೇರಿಯ ನಿರ್ದೇಶನದ ಮೇರೆಗೆ ಮಸೂದೆಯಲ್ಲಿ ತಿದ್ದುಪಡಿ ತರಲಾಗಿದೆ ಎಂದು ಮೂಲಗಳು ತಿಳಿಸಿವೆ.ಎಂಬಿಬಿಎಸ್ ಕೋರ್ಸ್ ಪೂರ್ಣಗೊಳಿಸಿದ ಬಳಿಕ ವೈದ್ಯ ವೃತ್ತಿ ಆರಂಭಕ್ಕೆ ಪರವಾನಗಿ ಪಡೆಯಲು ಯಾವುದೇ ರೀತಿಯ ಪ್ರತ್ಯೇಕ ಪರೀಕ್ಷೆಗೆ ಸಹ ಹಾಜರಾಗಬೇಕಿಲ್ಲ ಎಂದೂ ತಿದ್ದುಪಡಿ ಮಸೂದೆ ಸ್ಪಷ್ಟಪಡಿಸಿದೆ.

Sponsored :


9900071610