ಕೋ ಸ್ಟಾರ್​​ನ ಪ್ರೈವೇಟ್ ಪಾರ್ಟ್ ಟಚ್ ಮಾಡಿದ್ರಾ ಆ ನಟಿ?! ಚಿತ್ರದಲ್ಲಿ ನಡೆದಿದ್ದೇನು? ಜನ ಹೇಳ್ತಿರೋದೇನು?!

2171
9900071610

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಮಿಶನ್ ಮಂಗಲ್ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಸದ್ಯ ಚಿತ್ರದಲ್ಲಿ ತಾಪ್ಸಿ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಟ್ರೋಲ್ ಆಗುತ್ತಿದೆ. ಅಷ್ಟಕ್ಕೂ ಯಾವುದಾ ದೃಶ್ಯ ಅಂತೀರಾ?

ad

ಹೌದು ನಟಿ ತಾಪ್ಸಿ ಮಿಶನ್ ಮಂಗಲ್ ಚಿತ್ರದ ಟ್ರೈಲರ್ ನಲ್ಲಿ ಕಾರು ಡ್ರೈವಿಂಗ್ ಕಲಿಯುತ್ತಿರುತ್ತಾರೆ. ಈ ವೇಳೆ ತಾಪ್ಸಿ ಸಡನ್ ಆಗಿ ಕಾರಿನ ಗೇರ್ ಮುಟ್ಟುವ ಬದಲು ಪಕ್ಕದ ಸೀಟಿನಲ್ಲಿ ಕುಳಿತ್ತಿದ್ದ ತನ್ನ ಡ್ರೈವಿಂಗ್ ಟೀಚರ್ ನ ಪ್ರೈವೆಟ್ ಪಾರ್ಟ್ ಗೆ ಕೈ ಹಾಕುತ್ತಾರೆ. ತಾಪ್ಸಿ ಕೈ ಹಾಕಿದ ತಕ್ಷಣ ಡ್ರೈವಿಂಗ್ ಟೀಚರ್ ಜೋರಾಗಿ ಕಿರುಚುತ್ತಾನೆ. ಜೊತೆಗೆ ಗಾಬರಿಯಿಂದ ತಾಪ್ಸಿ ಕೂಡ ಕಿರುಚುತ್ತಾರೆ.

ಸದ್ಯ ಈ ದೃಶ್ಯ ಹಾಸ್ಯಮಯವಾಗಿ ಕಂಡರೂ ಕೆಲವರು ಈ ದೃಶ್ಯದ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಜೊತೆಗೆ ಕಮೆಂಟ್ ಮಾಡುವ ಮೂಲಕ ಜನರು ಟೀಕಿಸುತ್ತಿದ್ದಾರೆ. ಇದೇ ಸೀನ್ ಪುರುಷರು ಮಾಡಿದ್ದರೆ, ಮಹಿಳೆಯರು ಸುಮ್ಮನೆ ಇರುತ್ತಿದ್ರಾ?’ ‘ಹಾಸ್ಯಕ್ಕಾಗಿ ಪುರುಷರ ಜೊತೆ ಈ ರೀತಿಯ ದೃಶ್ಯಗಳನ್ನು ಚಿತ್ರೀಕರಿಸುವುದು ಸರಿಯಲ್ಲ. ಇನ್ನೂ ಕೆಲವರು ಒಬ್ಬರ ಅನುಮತಿಯಿಲ್ಲದೆ ಅವರ ಪ್ರೈವೆಟ್ ಪಾರ್ಟ್ ಮುಟ್ಟುವುದು ಸರಿಯಲ್ಲ. ಇದು ಮಹಿಳೆಯರು ಪುರುಷರ ಮೇಲೆ ನಡೆಸುವ ಅತ್ಯಾಚಾರ. ಎಂದು ಕಮೆಂಟ್ ಮಾಡತೊಡಗಿದ್ದಾರೆ.

ಚಿತ್ರದ ಈ ದೃಶ್ಯ ಹಲವಾರು ರೀತಿಯ ವಿವಾದಗಳನ್ನು ಸೃಷ್ಟಿಸುತ್ತಿದ್ದು, ಇದರಿಂದ ಆಕ್ರೋಶಗೊಂಡಿರುವ ಕೆಲವರು ಚಿತ್ರದಿಂದ ಈ ಸೀನ್ ಡಿಲೀಟ್ ಮಾಡಿ ಆಗ್ರಹಿಸಿದ್ದಾರೆ.

ಮಿಶನ್ ಮಂಗಲ್ ಚಿತ್ರ ಒಂದು ಚಂದ್ರಯಾನದ ಆಧಾರಿತ ಚಿತ್ರವಾಗಿದ್ದು, ಚಿತ್ರಕ್ಕೆ ಜಗನ್ ಶಕ್ತಿ ಆಕ್ಯಕ್ಷನ್ ಕಟ್ ಹೇಳಿದ್ದಾರೆ. ಇನ್ನೂ ನಟ ಅಕ್ಷಯ್ ಕುಮಾರ್ ಅಭಿನಯದ ಈ ಚಿತ್ರದಲ್ಲಿ ಕನ್ನಡದ ಹಿರಿಯ ಪ್ರತಿಭೆ ದತ್ತಣ್ಣ ಬಣ್ಣ ಹಚ್ಚಿದ್ದಾರೆ. ಅಲ್ಲದೆ ನಟಿ ವಿದ್ಯಾ ಬಾಲನ್ ಸೇರಿದಂತೆ ನಟಿ ತಾಪ್ಸಿ ಪನ್ನು, ನಿತ್ಯಾ ಮೆನನ್, ಸೋನಾಕ್ಷಿ ಸಿನ್ಹಾ ಇನ್ನೂ ಹಲವಾರು ಕಲಾವಿದರ ದೊಡ್ಡ ಬಳಗವೇ ಚಿತ್ರದಲ್ಲಿದೆ.

Sponsored :


9900071610