ಪಾರ್ಕ್​​ಗಾಗಿ ರಸ್ತೆಯಲ್ಲೇ ಹೊಡೆದಾಡಿಕೊಂಡಿದ್ಯಾರು ನೀವೆ ನೋಡಿ!

469
Talk Fight Between Municipal President And Trust Member.

ಅಭಿವೃದ್ಧಿ ಕಾಮಗಾರಿಗಳ ವೇಳೆ ಕಚ್ಚಾಟ ಮಾಮೂಲು ಎಂಬಂತಾಗಿದೆ. ಹೌದು ಪಾರ್ಕ್​ಗೆ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ನಡುರಸ್ತೆಯಲ್ಲೇ ಬಡಿದಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ad

ದೊಡ್ಡಬಳ್ಳಾಪುರದ ಕರೇನಹಳ್ಳಿಯಲ್ಲಿ ಘಟನೆ ನಡೆದಿದೆ.
ದೊಡ್ಡಬಳ್ಳಾಪುರದ ಕರೇನಹಳ್ಳಿಯ ಬಯಲು ಬಸವಣ್ಣ ದೇವಾಲಯದ ಬಳಿ ಉದ್ಯಾನವನ ನಿರ್ಮಿಸಲಾಗಿತ್ತು. ಈ ಪಾರ್ಕ್​ಗೆ ಹೆಸರಿಡುವ ವಿಚಾರಕ್ಕೆ ಗಲಾಟೆ ಆರಂಭವಾಗಿದ್ದು, ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷ ತಾ.ನ.ಪ್ರಭುದೇವ್ ಮತ್ತು ಬಯಲು ಬಸವಣ್ಣ ಸೇವಾ ಟ್ರಸ್ಟ್ ನ ಸದಸ್ಯರ ನಡುವೆ ರಂಪಾಟ ನಡೆದಿದೆ. ನಗರಸಭೆ ಅಧ್ಯಕ್ಷ ಹಾಗೂ ಬಯಲು ಬಸವಣ್ಣ ಟ್ರಸ್ಟ್​ ಸದಸ್ಯರು ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡಿದ್ದಾರೆ.

ಉದ್ಯಾನವನಕ್ಕೆ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಹೆಸರಿಡುವ ವಿಚಾರ ಪ್ರಸ್ತಾಪವಾಗಿತ್ತು. ಅಲ್ಲದೇ ಉದ್ಯಾನವನಕ್ಕೆ ಕಮಾನು ಅಳವಡಿಸಲು ನಗರಸಭೆ ಮುಂಧಾಗಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಟ್ರಸ್ಟ್​​ನ ಸದಸ್ಯರು ನಗರಸಭೆ ಜೊತೆ ಗಲಾಟೆಗೆ ಮುಂಧಾಗಿದ್ದರು. ಹೀಗೆ ರಸ್ತೆ ತುಂಬ ಟ್ರಸ್ಟ್​ನ ಸದಸ್ಯರು ಹಾಗೂ ನಗರಸಭೆ ಸದಸ್ಯರು ಕಿತ್ತಾಡುತ್ತಿರುವ ಹಾಗೂ ಹೊಡೆದಾಡುತ್ತಿರುವ ದೃಶ್ಯ ಈಗ ಸಖತ್ ವೈರಲ್​ ಆಗಿದೆ.

Sponsored :

Related Articles