ಪ್ರಚಾರದ ವೇಳೆ ಹೃದಯಾಘಾತಕ್ಕೆ ಮಾಜಿ ಎಂಪಿ ಬಲಿ! ಬಿಜೆಪಿಗೆ ಬಿಗ್​ ಶಾಕ್​!!

2311
9900071610

ದೇಶದೆಲ್ಲಡೆ ಏರುತ್ತಲೇ ಇರುವ ಚುನಾವಣಾ ಕಾವು ಹಲವು ಅವಘಡಗಳಿಗೂ ಕಾರಣವಾಗುತ್ತಿದೆ. ಬಿಜೆಪಿ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿದ್ದ ಮಾಜಿ ಸಂಸದನೊಬ್ಬ ಪ್ರಚಾರದ ವೇಳೆಯೇ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಡೆದಿದೆ. ತಮಿಳುನಾಡಿನಲ್ಲಿ ಘಟನೆ ನಡೆದಿದ್ದು, ತಮಿಳು ಚಿತ್ರನಟ ಹಾಗೂ ಮಾಜಿ ಸಂಸದ, ಎಐಎಡಿಎಂಕೆ ನಾಯಕ ಜಿ.ಕೆ. ರಿತೇಶ್ ಹೃದಯಾಘಾತದಿಂದ ಸಾವನ್ನಪ್ಪಿದವರು.

ad

ತಮಿಳುನಾಡಿದ  ರಾಮನಾಥಪುರಂನಲ್ಲಿ ಬಿಜೆಪಿ ಅಭ್ಯರ್ಥಿ ನೈನಾರ್ ನಾಗೇಂದ್ರನ್ ಪರ ರಿತೇಶ್​ ಪ್ರಚಾರ ನಡೆಸುತ್ತಿದ್ದರು.  ಈ ವೇಳೆ ಜಿ.ಕೆ.ರಿತೇಶ್​ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ತಕ್ಷಣ

 

ಸಾವನ್ನಪ್ಪಿದ್ದಾರೆ. ಲೋಕಸಭಾ ಚುನಾವಣಾದ ಸಲುವಾಗಿ ಬಿಜೆಪಿ ಅಭ್ಯರ್ಥಿ ನೈನಾರ್ ನಾಗೇಂದ್ರನ್ ಪರ ಪ್ರಚಾರ ನಡೆಸುತ್ತಿದ್ದ ವೇಳೆ ಜಿ.ಕೆ ರಿತೇಶ್ ರವರು ಹೃದಯಾಘಾತಕ್ಕೆ ಒಳಗಾಗಿದ್ದಾರೆ.  ತಕ್ಷಣವೇ ಪಕ್ಷದ ಕಾರ್ಯಕರ್ತರು  ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆಸ್ಪತ್ರೆಗೆ ಕರೆ ತರುವಾಗ ಮಾರ್ಗ ಮಧ್ಯದಲ್ಲೇ ಜಿ.ಕೆ. ರಿತೇಶ್ ರವರು ಕೊನೆಯುಸಿರೆಳೆದಿದ್ದು. ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ತಮಿಳಿನ ‘ನಾಯಗನ್’, ‘ಪೆನ್ ಸಿಂಗಮ್’, ರಾಜಕೀಯ ವಿಡಂಬನಾತ್ಮಕ ಚಿತ್ರ ‘ಎಲ್.ಕೆ.ಜಿ.’ ಮೊದಲಾದ ಚಿತ್ರಗಳಲ್ಲಿ ಈ ಹಿಂದೆ ಅಭಿನಯಿಸಿದ್ದರು.  ಡಿಎಂಕೆ ಪಕ್ಷದ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ್ದ ರಿತೇಶ್ 2009ರ ಲೋಕಸಭೆ ಚುನಾವಣೆಯಲ್ಲಿ ರಾಮನಾಥಪುರಂ ಕ್ಷೇತ್ರದಲ್ಲಿ ಜಯಗಳಿಸಿದ್ದರು. ಜಯಲಲಿತಾ ಅವರ ಸಮ್ಮುಖದಲ್ಲಿ 2014ರ ಏಪ್ರಿಲ್ ತಿಂಗಳಿನಲ್ಲಿ ಎಐಎಡಿಎಂಕೆ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

ಜಿ.ಕೆ. ರಿತೇಶ್ ರ ಅಗಲಿಕೆಗೆ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ, ಡಿಸಿಎಂ ಓ ಪಳನಿಸ್ವಾಮಿ, ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್, ನಟ ವಿಶಾಲ್, ಆರ್ ಜೆ ಬಾಲಾಜಿ ಸೇರಿದಂತೆ ಹಲವಾರು ಗಣ್ಯತಿಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Sponsored :


9900071610