‘ಸಾಹೋ’ ನಲ್ಲಿ ಪ್ರಭಾಸ್ ಮೋಡಿ! ಚಿತ್ರೀಕರಣದಲ್ಲಿ 5 ಟ್ರಕ್ 37 ಕಾರು ಪುಡಿ-ಪುಡಿ! ನೀರಿಕ್ಷೆ ಮೂಡಿಸಿದ ಬಹುಭಾಷಾ ಚಿತ್ರ!!

816

ಬಾಹುಬಲಿ ಬಿಗ್ ಸಕ್ಸಸ್ ಬಳಿಕ ಡಾರ್ಲಿಂಗ್ ಪ್ರಭಾಸ್ ಅಭಿನಯದ ‘ಸಾಹೋ’ ಮೊದಲ ಚಿತ್ರದ ಟೀಸರ್​ ತೆರೆಕಂಡು ಭಾರೀ ಟ್ರೆಡ್ ಕ್ರಿಯೆಟ್ ಮಾಡಿತ್ತು. ಈ ವರ್ಷದ ಅಪ್ಕಮ್ಮಿಂಗ್ ಸಿನಿಮಾಗಳಲ್ಲಿ ಸಾಹೋ ಚಿತ್ರ ಭಾರೀ ಕುತೂಹಲ ಮೂಡಿಸಿದ್ದು, ಇದೀಗಾ ಸಿನಿಮಾದ ಎರಡನೇ ಟೀಸರ್​ ರಿಲೀಸ್ ಆಗಿದ್ದು ಪ್ರೇಕ್ಷಕರ ಮನಸೊರೆಗೊಳ್ಳುವ ಭರವಸೆ ಮೂಡಿಸಿದೆ.

ad

ಟೀಸರ್​​​ನಲ್ಲಿನ ಆ್ಯಕ್ಷನ್​ ದೃಶ್ಯಗಳು, ಉತ್ತಮ ಛಾಯಾಗ್ರಹಣ, ಹಿನ್ನೆಲೆ ಸಂಗೀತ , ಅದ್ಭುತ ಮೇಕಿಂಗ್, ಗ್ರಾಫಿಕ್ ವರ್ಕ್ ಸೂಪರ್ ಆಗಿದ್ದು, ಟೀಸರ್​ನಲ್ಲಿ ಸಖತ್​ ಆ್ಯಕ್ಷನ್​ ದೃಶ್ಯಗಳಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಚಿತ್ರದ ಟೀಸರ್​ ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

ಇನ್ನೂ ಈ ಚಿತ್ರಕ್ಕೆ ಸುಜಿತ್​​​​ ಈ ಸಿನಿಮಾಕ್ಕೆ ಆ್ಯಕ್ಷನ್​​​​ ಕಟ್​​​​ ಹೇಳಿದ್ದು, ಪ್ರಭಾಸ್ ಪ್ರಭಾಸ್​ ಬೇರೆ ಬೇರೆ ಲುಕ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ, ಪ್ರಭಾಸ್​-ಶ್ರದ್ಧಾ ಕಪೂರ್​ ಕಾಂಬಿನೇಷನ್​ ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

‘ಸಾಹೋ’ ಚಿತ್ರ ಒಂದು ದೊಡ್ಡ ಹೈ ಬಜೆಟ್ ಚಿತ್ರವಾಗಿದ್ದು, ಕೇವಲ ಸಾಹಸ ದೃಶ್ಯಗಳಿಗೆ ಬರೋಬ್ಬರಿ 90 ಕೋಟಿ ಖರ್ಚು ಮಾಡಲಾಗಿದೆ. ಸಾಹಸ ದೃಶ್ಯವನ್ನು ನೈಜವಾಗಿ ಕಾಣುವಂತೆ ಚಿತ್ರೀಕರಿಸಲು 5 ಟ್ರಕ್​ ಹಾಗೂ 37 ಐಷಾರಾಮಿ ಕಾರುಗಳನ್ನು ಬಳಸಿಕೊಂಡು ಸಂಪೂರ್ಣವಾಗಿ ಪುಡಿ ಪುಡಿ ಮಾಡಲಾಗಿದೆ.

ಸದ್ಯ ಈ ಚಿತ್ರದಲ್ಲಿ ಶೇ 90ರಷ್ಟು ಭಾಗ ಸಾಹಸ ದೃಶ್ಯಗಳು ನೈಜವಾಗಿವೆ ಸೆರೆ ಹಿಡಿಯಲಾಗುತ್ತಿದೆ ಎನ್ನಲಾಗುತ್ತಿದೆ. ಅಲ್ಲದೆ ಈ ಚಿತ್ರದ ಮಾದರಿ ಈ ಹಿಂದೆ ಯಾವ ಭಾರತೀಯ ಸಿನಿಮಾಗಳಲ್ಲಿಯೂ ಸಾಹಸ ದೃಶ್ಯಗಳನ್ನು ತೋರಿಸಿಲ್ಲ. ಎಂದು ಈ ಹಿಂದೆ ಪ್ರಭಾಸ್​ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡುವಾಗ ಹೇಳಿಕೆ ನೀಡಿದ್ದರು.

ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆ ದಿನದಂದು ‘ಸಾಹೋ’ ಚಿತ್ರ ತೆಲುಗು, ತಮಿಳು ಸೇರಿದಂತೆ ಹಿಂದಿ ಭಾಷೆಯಲ್ಲಿ ಏಕಕಾಲದಲ್ಲಿ ರಿಲೀಸ್ ಆಗುತ್ತಿದ್ದು. ಪ್ರಭಾಸ್​, ಶ್ರದ್ಧಾ ಕಪೂರ್​, ಜಾಕಿ ಶ್ರಾಫ್​ ಮೊದಲಾದವರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

Sponsored :

Related Articles